ಸೋನಿಪತ್ (ಹರಿಯಾಣ): ಹರಿಯಾಣದಲ್ಲಿ ಮತ್ತೊಮ್ಮೆ ವಿಶಿಷ್ಟ ವಿವಾಹ ನಡೆದಿದೆ. ಈ ಮದುವೆಯು ರಾಜ್ಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ದಸಾಸಲ್ ಸ್ಯಾಂಡಲ್ ಖುರ್ದ್ ಗ್ರಾಮದ ಸೋನಿಪತ್‌ನ ಅಮಿತ್ ಮಾರ್ಚ್ 19 ರಂದು ಕರ್ನಾಲ್ ನಿವಾಸಿ ಆಶು ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ವರ್ಚುವಲ್ ರೀತಿ ಮದುವೆ ಕಾರ್ಯಕ್ರಮ: ಹರಿಯಾಣದ ಸಂಪ್ರದಾಯದಂತೆ ಈ ಮದುವೆ ಜರುಗಿದೆ. ವಿಶೇಷವೆಂದರೆ, ಸೋನಿಪತ್‌ನಿಂದ ಕರ್ನಾಲ್‌ವರೆಗೆ ವರನಿಲ್ಲದೇ ಮದುವೆ ಮೆರವಣಿಗೆ ಸಾಗಿತು. ಕರ್ನಾಲ್‌ನಲ್ಲಿ ವಧು ಇಲ್ಲದೇ ಮದುವೆ ಮೆರವಣಿಗೆ ಮರಳಿತು. ವಾಸ್ತವವಾಗಿ ಈ ಮದುವೆ ಆನ್‌ಲೈನ್‌ನಲ್ಲಿ ನಡೆದಿದೆ. ಇದನ್ನು ವರ್ಚುವಲ್ ರೀತಿಯಲ್ಲಿ ಮದುವೆ ಕಾರ್ಯಕ್ರಮ ನಡೆದಿದೆ.
ವರ- ವಧುವಿಲ್ಲದೇ ನಡೆದ ಭರ್ಜರಿ ಮದುವೆ: ಸೋನಿಪತ್‌ನ ಅಮಿತ್ ಹಾಗೂ ಕರ್ನಾಲ್‌ನ ಆಶು ಇಬ್ಬರೂ ಅಮೆರಿಕದಲ್ಲಿ ನೆಲೆಸಿದ್ದಾರೆ. ಮದುವೆ ನಿಶ್ಚಯವಾದ ನಂತರ ಕಾರಣಾಂತರಗಳಿಂದ ವಧು-ವರರು ಅಮೆರಿಕದಿಂದ ಭಾರತದಲ್ಲಿರುವ ತಮ್ಮ ಮನೆಗಳಿಗೆ ಬರಲು ಸಾಧ್ಯವಾಗಲಿಲ್ಲ. ನಂತರ ಮದುವೆಯ ಎಲ್ಲಾ ವಿಧಿವಿಧಾನಗಳನ್ನು ಆನ್‌ಲೈನ್‌ನಲ್ಲಿ ಮಾಡಲು ಕುಟುಂಬ ಸದಸ್ಯರು ನಿರ್ಧರಿಸಿದ್ದಾರೆ. ಇದಕ್ಕಾಗಿ ಹೈ ಸ್ಪೀಡ್ ಇಂಟರ್ನೆಟ್ನೊಂದಿಗೆ ಟಿವಿ ಸ್ಕ್ರೀನ್ ವ್ಯವಸ್ಥೆ ಮಾಡಲಾಗಿತ್ತು.
ಮೊದಲಿಗೆ ಅಮಿತ್ ಸಂಬಂಧಿಕರು ಸೋನಿಪತ್‌ನಲ್ಲಿ ಟೀಕಾ ಮತ್ತು ನಿಶ್ಚಿತಾರ್ಥದ ಕಾರ್ಯಕ್ರಮವನ್ನು ಆಯೋಜಿಸಿದ್ದರು. ವಧು-ವರರಿಬ್ಬರೂ ತಮ್ಮ ಸ್ವಂತ ಮದುವೆ ಕಾರ್ಯಕ್ರಮಗಳನ್ನು ಅಮೆರಿಕದಿಂದ ಆನ್‌ಲೈನ್‌ನಲ್ಲೇ ವೀಕ್ಷಿಸಿದರು. ಹರಿಯಾಣದಲ್ಲಿ ಮದುವೆಯ ಎಲ್ಲಾ ವಿಧಿವಿಧಾನಗಳನ್ನು ಆನ್‌ಲೈನ್‌ನಲ್ಲಿ ನೆರವೇರಿಸಲಾಯಿತು.
ಅಮೆರಿಕದಲ್ಲಿ ವಧು-ವರರು, ಹರಿಯಾಣದಲ್ಲಿ ಮದುವೆ ಸಂಪ್ರದಾಯ: ನಂತರ ವರನಿಲ್ಲದೇ ಮದುವೆ ಮೆರವಣಿಗೆ ಕರ್ನಾಲ್ಗೆ ತಲುಪಿತು. ಅಲ್ಲಿ ಆಶು ಅವರ ಕುಟುಂಬ ಸದಸ್ಯರು ಮೆರವಣಿಗೆಯನ್ನು ಆತ್ಮೀಯವಾಗಿ ಸ್ವಾಗತಿಸಿದರು. ಅಮಿತ್ ಮತ್ತು ಆಶು ಜೋಡಿಯ ಎಲ್ಲಾ ವಿಧಿವಿಧಾನಗಳನ್ನು ಆನ್‌ಲೈನ್‌ನಲ್ಲಿ ನಡೆಸಲಾಯಿತು. ಈ ಆಚರಣೆಯಲ್ಲಿ ವಧು-ವರರು ಟಿವಿ ಮೂಲಕ ಆನ್‌ಲೈನ್‌ನಲ್ಲಿ ಸಂಪರ್ಕದ ಸಹಾಯದಿಂದ ಪಾಲ್ಗೊಂಡಿದ್ದರು.
ಇದನ್ನೂ ಓದಿ: ನೀರು ಉಳಿಸೋಣ..: ಕಡಲ ತೀರದಲ್ಲಿ ಸುದರ್ಶನ್ ಪಟ್ನಾಯಕ್ ಜನಜಾಗೃತಿ ಮರಳು ಕಲೆ
ಅಮಿತ್ ಲಾಕ್ರಾ- ಆಶು ಪರಿಚಯವಾಗಿದ್ದು ಹೇಗೆ?: ಸ್ಯಾಂಡಲ್ ಖುರ್ದ್ ಗ್ರಾಮದ ಸೋನಿಪತ್ ನಿವಾಸಿ ಅಮಿತ್ ಲಾಕ್ರಾ ಮತ್ತು ಕರ್ನಾಲ್‌ನ ಆಶು ಪ್ರತ್ಯೇಕ ಕಂಪನಿಗಳನ್ನು ಸ್ಥಾಪಿಸಿಕೊಂಡು ಅಮೆರಿಕದಲ್ಲಿ ಕೆಲಸ ಮಾಡುತ್ತಿದ್ದಾರೆ. ಅಮಿತ್ 2014ರಲ್ಲಿ ಮಲೇಷ್ಯಾದಲ್ಲಿ ಮರ್ಚೆಂಟ್ ನೇವಿ ಸೇರಿದ್ದರು. ನಂತರ ಅವರು ವಿವಿಧ ದೇಶಗಳಲ್ಲಿ ಕೆಲಸ ಮಾಡಿದ್ದಾರೆ. 2017ರಿಂದ ಟ್ರ್ಯಾಕಿಂಗ್ ಕಂಪನಿಯನ್ನು ಸ್ಥಾಪಿಸುವ ಮೂಲಕ ಕೆಲಸ ಪ್ರಾರಂಭಿಸಿದರು.
ಅದೇ ಸಮಯದಲ್ಲಿ ಆಶು ತನ್ನ ಸ್ವಂತ ಕಂಪನಿಯನ್ನು ಸ್ಥಾಪಿಸಿ, ಅಮೆರಿಕದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ವೇಳೆ ಇಬ್ಬರೂ ಭೇಟಿಯಾದರು. ಇಬ್ಬರ ಅಭಿಪ್ರಾಯಗಳು ಒಂದು ಆದಾಗ ಇಬ್ಬರೂ ಮದುವೆಯಾಗಲು ನಿರ್ಧರಿಸಿದರು. ಇಬ್ಬರ ಮನೆಯವರೂ ಈ ಮದುವೆಗೆ ಒಪ್ಪಿಗೆ ಸೂಚಿಸಿದ್ದಾರೆ. ಆನ್‌ಲೈನ್ ಮೂಲಕ ಅಮಿತ್- ಆಶು ಜೋಡಿಯ ಸಂಬಂಧಿಕರು ಕೂಡಾ ಪರಸ್ಪರ ಪರಿಚಯವಾಗಿದ್ದಾರೆ. ನಂತರ ಅನಿವಾರ್ಯ ಕಾರಣಗಳಿಂದ ಈ ಜೋಡಿ ತಮ್ಮ ಊರಿಗೆ ಬರಲು ಆಗದೇ ಇರುವುದರಿಂದ, ಮದುವೆ ಕಾರ್ಯಕ್ರಮ ವರ್ಚುವಲ್ ರೀತಿಯಲ್ಲಿ ನಡೆದಿರುವುದು ವಿಶೇಷ.
ಇದನ್ನೂ ಓದಿ: 90 ಸಾವಿರ ನಾಣ್ಯಗಳನ್ನೇ ನೀಡಿ ಕನಸಿನ ಸ್ಕೂಟರ್ ಖರೀದಿಸಿದ ವ್ಯಕ್ತಿ: ವಿಡಿಯೋ