ಅಯೋಧ್ಯೆ(ಉತ್ತರಪ್ರದೇಶ): ಶ್ರೀರಾಮ ನಗರಿ ಅಯೋಧ್ಯೆಯಲ್ಲಿ ವಿಶಿಷ್ಟ ವಿವಾಹವೊಂದು ನಡೆದಿದೆ. 65 ವರ್ಷದ ವೃದ್ಧನೊಬ್ಬ 23 ವರ್ಷದ ಯುವತಿಯನ್ನು ಎರಡನೇ ಮದುವೆಯಾಗಿದ್ದಾರೆ. ಆದರೆ ಇದು ಹುಡುಗಿಯ ಮೊದಲ ಮದುವೆಯಾಗಿರುವುದು ಗಮನಾರ್ಹ. ಇಷ್ಟೇ ಅಲ್ಲ, ಮದುವೆಯಲ್ಲಿ ವಿಶೇಷವೆಂದರೆ ವರನೇ ತಮ್ಮ ಆರು ಜನ ಹೆಣ್ಣುಮಕ್ಕಳನ್ನು ಮದುವೆ ಮಾಡಿಕೊಟ್ಟು ಬಳಿಕ ಹಸಿಮಣೆ ಏರಿದ್ದಾರೆ. ವರ ಅಯೋಧ್ಯೆಯ ನೆರೆಯ ಜಿಲ್ಲೆಯ ಬಾರಾಬಂಕಿ ನಿವಾಸಿ. ಈ ವಿಶಿಷ್ಟ ಮದುವೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
65 ವರ್ಷದ ಬಾರಾಬಂಕಿ ನಿವಾಸಿಯೊಬ್ಬರು ಪತ್ನಿಯ ಮರಣದ ನಂತರ ಒಂಟಿ ಜೀವನದಿಂದ ನೊಂದು ಈ ಕ್ರಮ ಕೈಗೊಂಡಿದ್ದಾರೆ. ವಿಶೇಷವೆಂದರೆ ಮದುವೆಯಾದ ವೃದ್ಧನಿಗೆ ಆರು ಜನ ಹೆಣ್ಣು ಮಕ್ಕಳಿದ್ದು, ಈಗಾಗಲೇ ತಮ್ಮ ಆರು ಹೆಣ್ಣು ಮಕ್ಕಳಿಗೆ ಮದುವೆ ಮಾಡಿಕೊಟ್ಟಿದ್ದಾರೆ. ಮಕ್ಕಳನ್ನು ಮದುವೆ ಮಾಡಿಕೊಟ್ಟ ಬಳಿಕ ತಮ್ಮ ಈ ಇಳಿ ವಯಸ್ಸಿನಲ್ಲಿ ಅವರಿಗೆ ಒಂಟಿತನ ಕಾಡಿದೆ. ಹೀಗಾಗಿ ಅವರು ಈ ವಯಸ್ಸಿನಲ್ಲಿ ನನಗೊಬ್ಬಳು ಸಂಗಾತಿ ಇದ್ರೆ ಒಳ್ಳೆಯದು ಎಂದು ಭಾವಿಸಿದರು. ಮನೆಯವರು ಮತ್ತು ಸಂಬಂಧಿಕರ ಒಪ್ಪಿಗೆ ಮೇರೆಗೆ ಈ ಮದುವೆಯಾದರು. ಇನ್ನು ತಮ್ಮ ತಂದೆಯ ಮದುವೆಗೆ ಆರು ಜನ ಸಹೋದರಿಯರು ಡಿಜೆ ಟ್ಯೂನ್‌ಗೆ ಸಖತ್ತಾಗಿ ಡ್ಯಾನ್ಸ್ ಮಾಡಿದರು. ಬಳಿಕ ವೇದ ಘೋಷಗಳ ನಡುವೆ ನಡೆದ ಈ ಮದುವೆ ಕಾರ್ಯಕ್ರಮದಲ್ಲಿ ಗ್ರಾಮದ ಜನರು ಹಾಗೂ ಬಂಧುಗಳು ವಧು-ವರರನ್ನು ಆಶೀರ್ವದಿಸಿದರು.
ಯಾರೀ ವರ: ಬಾರಾಬಂಕಿ ಜಿಲ್ಲೆಯ ಸುಬೇಹಾ ಪೊಲೀಸ್ ಠಾಣೆ ವ್ಯಾಪ್ತಿಯ ಹುಸೇನಾಬಾದ್ ಪುರಿ ಚೌಧರಿ ಗ್ರಾಮದ ನಿವಾಸಿ ನಖೇದ್ ಯಾದವ್ ಅವರು ನಂದಿನಿ ಎಂಬ ಹುಡುಗಿಯನ್ನು ವಿವಾಹವಾಗಿದ್ದಾರೆ. ಮದುವೆಯಾದ ವ್ಯಕ್ತಿಗೆ 6 ಹೆಣ್ಣು ಮಕ್ಕಳಿದ್ದಾರೆ. ಇದಾದ ಬಳಿಕ ಅವರು ಒಂಟಿ ಜೀವನ ನಡೆಸುತ್ತಿದ್ದರು. ಇದರಿಂದ ಅವರು ತುಂಬಾ ನೊಂದಿದ್ದರು. ತನ್ನ ಒಂಟಿತನವನ್ನು ಹೋಗಲಾಡಿಸಲು, ಅವರು ಮತ್ತೊಮ್ಮೆ ಮದುವೆಯಾಗಲು ಮನಸ್ಸು ಮಾಡಿದರು.
ಇದಾದ ಬಳಿಕ ಕುಟುಂಬದವರು ಮತ್ತು ಸಂಬಂಧಿಕರ ಒಪ್ಪಿಗೆಯೊಂದಿಗೆ ಅಯೋಧ್ಯೆ ಜಿಲ್ಲೆಯ ರುದೌಲಿ ಪ್ರದೇಶದಲ್ಲಿರುವ ಪ್ರಸಿದ್ಧ ಕಾಮಾಖ್ಯ ದೇವಿ ದೇವಸ್ಥಾನದಲ್ಲಿ ವೈಭವದಿಂದ ವಿವಾಹವಾದರು. ಅಷ್ಟೇ ಅಲ್ಲ ಈ ಮದುವೆಯಲ್ಲಿ ಡಿಜೆ ಕೂಡ ಆಡಿದ್ದು, ಮಕ್ಕಳು ಮತ್ತು ಸಂಬಂಧಿಕರೊಡನೆ ಮಹಿಳೆಯರು ಕುಣಿದು ಕುಪ್ಪಳಿಸಿದ್ದಾರೆ. 65ರ ಹರೆಯದಲ್ಲಿ ವರ ಎನಿಸಿಕೊಂಡ ವೃದ್ಧರೊಬ್ಬರು ತಮ್ಮ ಮದುವೆಯಲ್ಲೂ ಡಿಜೆ ಹಾಡಿಗೆ ಸಖತ್ ಹೆಜ್ಜೆಹಾಕಿದರು. ಈ ಸಂಪೂರ್ಣ ಕಾರ್ಯಕ್ರಮದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
28ರ ಸೊಸೆಯನ್ನೇ ವರಿಸಿದ್ದ 70ರ ಮಾವ: ಕೆಲ ವಿಚಿತ್ರ ಘಟನೆಗಳು ಆಗಾಗ ನಡೆಯುತ್ತಲೇ ಇರುತ್ತವೆ. ಉತ್ತರ ಪ್ರದೇಶದ ಗೋರಖ್ಪುರನ ಗ್ರಾಮವೊಂದರಲ್ಲಿ ಇತ್ತಿಚೇಗೆ ಮದುವೆಯೊಂದು ನಡೆದಿತ್ತು. ಸುಮಾರು 70 ವರ್ಷದ ಮಾವ ತನ್ನ 28 ವರ್ಷದ ವಿಧವೆಯಾಗಿದ್ದ ಸೊಸೆಯನ್ನೇ ವಿವಾಹವಾಗಿದ್ದಾರೆ. ಬದಲ್‌ಗಂಜ್ ಕೊತ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆ ಇದು.
ಓದಿ: ವಿವಾಹ ಸಂಭ್ರಮದಲ್ಲಿ 'ಚಕ್ ದೇ ಇಂಡಿಯಾ' ನಟಿ: ಚಿತ್ರಾಶಿ ರಾವತ್ ನಿಶ್ಚಿತಾರ್ಥದ ವಿಡಿಯೋ ಇಲ್ಲಿದೆ