ಸರ್ಗುಜಾ (ಛತ್ತೀಸ್‌ಗಢ): ಮಾವು ಹಣ್ಣಾದ ಮೇಲೆ ತಿಂದರೆ ಅದರ ಸ್ವಾದವೇ ಬೇರೆ. ಕಾಯಿಯಾಗಿದ್ದಾಗ ಒಗರು ಮತ್ತು ಹುಳಿಯಾಗಿರುವ ಕಾರಣ ಅದನ್ನು ತಿನ್ನುವ ಮನಸ್ಸು ಬರುವುದಿಲ್ಲ. ಆದರೆ, ಛತ್ತೀಸ್ಗಢದ ಮಾವಿನ ತಳಿಯೊಂದು ಹಣ್ಣಾದ ಮೇಲೆ ಅದನ್ನು ತಿನ್ನಲು ಬರುವುದಿಲ್ಲವಂತೆ. ಕಾರಣ ಹಣ್ಣಿನ ತುಂಬಾ ಹುಳುಗಳು ಮುತ್ತಿಕೊಂಡಿರುತ್ತವಂತೆ. ಅಲ್ಲದೇ, ಇದು ಸೌತೆಕಾಯಿಯ ರುಚಿ ನೀಡುತ್ತಿದೆ ಎಂಬುದು ವಿಶೇಷ.
ಛತ್ತೀಸ್ಗಢದ ಸರ್ಗುಜಾ ಜಿಲ್ಲೆಯ ಶಂಕರ್ ಗುಪ್ತಾ ಎಂಬುವರ ಮಾಲೀಕತ್ವದ ಮಾವಿನ ತೋಟದಲ್ಲಿ ಈ ವಿಧದ ಮಾವು ಬೆಳೆಯಲಾಗಿದೆ. ಇದು ಸೌತೆಕಾಯಿ ರುಚಿ ಹೋಲುತ್ತದಂತೆ. ಹಾಗಾಗಿ ಈ ಮಾವು ಆಕರ್ಷಣೆಯ ಕೇಂದ್ರವಾಗಿದೆ. ಇದನ್ನು ತಿಂದರೆ ಸಲಾಡ್ ತಿಂದ ರುಚಿ ನೀಡುತ್ತದಂತೆ. ಇದನ್ನು ಕಾಯಿ ಇದ್ದಾಗಲೇ ತಿನ್ನಬೇಕು. ಹಣ್ಣಾದ ಮೇಲೆ ಇದು ನಿಷ್ಪ್ರಯೋಜಕ. ಕಾರಣ ಹುಳುಗಳು ಮಾವನ್ನು ತಿಂದು ಹಾಕುತ್ತವಂತೆ.
ಇದನ್ನು ಪರಿಶೀಲಿಸಲು 'ಈಟಿವಿ ಭಾರತ' ತಂಡ ಈ ಮಾವಿನ ತಳಿಯನ್ನು ಬೆಳೆಯಲಾಗುವ ತೋಟಕ್ಕೆ ತೆರಳಿ ಪರಿಶೀಲನೆ ನಡೆಸಿದೆ. ಈ ಮಾವಿನ ತಳಿ ತಿಂದ ನಂತರ ಅದು ರುಚಿ ನೀಡದಿರುವುದು ಕಂಡು ಬಂದಿದೆ.
ಈ ಮಾವಿನ ತಳಿ ಸ್ವಲ್ಪ ಒಗರಾಗಿದೆ. ಗಾತ್ರದಲ್ಲಿ ಚಿಕ್ಕದಾಗಿದ್ದು, ಇದನ್ನು ಕಾಯಿ ಇದ್ದಾಗಲೇ ತಿನ್ನಬೇಕು. ಇದನ್ನು ಪೂರ್ತಿ ಹಣ್ಣಾದ ಬಳಿಕ ತಿನ್ನಲು ಬರುವುದಿಲ್ಲ. ರುಚಿಯೂ ಇರುವುದಿಲ್ಲ ಎಂದು ತೋಟದ ಮಾಲೀಕರು ತಿಳಿಸಿದ್ದಾರೆ.
ಇನ್ನು ಈ ತಳಿಯ ಬಗ್ಗೆ ತೋಟಗಾರಿಕಾ ವಿಜ್ಞಾನಿ ಸಂದೀಪ್ ಶರ್ಮಾ ಹೀಗೆ ವಿವರಿಸಿದ್ದು, ಈ ಜಾತಿಯ ಮಾವನ್ನು 'ರಾಣಿ ರಾಮಣ್ಣ' ಎಂದು ಕರೆಯುತ್ತಾರೆ. ರಾಜ್ಯದಲ್ಲಿ 100 ಕ್ಕೂ ಅಧಿಕ ತಳಿಯ ಮಾವುಗಳನ್ನು ಬೆಳೆಯಲಾಗುತ್ತದೆ. ಆದರೆ, ಈ ರಾಣಿ ರಾಮಣ್ಣ ವಿಧವನ್ನು ಕಚ್ಚಾ ರೂಪದಲ್ಲಿ(ಕಾಯಿಯಿದ್ದಾಗ) ತಿನ್ನಲಾಗುತ್ತದೆ. ಇದನ್ನು ನಾರಿಯಲ್ (ತೆಂಗಿನಕಾಯಿ) ಮಾವು ಎಂದೂ ಕರೆಯುತ್ತಾರೆ ಎಂದಿದ್ದಾರೆ.
ಓದಿ: ಶ್ರೀಲಂಕಾ ಪ್ರಧಾನಿ ಮಹಿಂದಾ ರಾಜಪಕ್ಸ ರಾಜೀನಾಮೆ ಸಾಧ್ಯತೆ.. ಸರ್ವಪಕ್ಷ ಸರ್ಕಾರ ರಚನೆಯಾಗುತ್ತಾ?