ETV Bharat / bharat

ರಾಜಸ್ಥಾನದಲ್ಲಿ ಕಲ್ಲು ತೂರಾಟ... ಇದೊಂದು ಪೂರ್ವಭಾವಿ ಯೋಜನೆ ಎಂದ ಕೇಂದ್ರ ಸಚಿವ - ರಾಜಸ್ಥಾನ ಗಲಭೆ

ರಾಜಸ್ಥಾನದ ಜೋಧಪುರದಲ್ಲಿ ನಡೆದಿರುವ ಕೋಮು ಗಲಭೆಗೆ ಸಂಬಂಧಿಸಿದಂತೆ ಕೇಂದ್ರ ಸಚಿವ ಗಜೇಂದ್ರ ಸಿಂಗ್​ ಶೆಖಾವತ್ ಸುದ್ದಿಗೋಷ್ಠಿ ನಡೆಸಿದರು.

Shekhawat on communal violence
Shekhawat on communal violence
author img

By

Published : May 3, 2022, 6:09 PM IST

ನವದೆಹಲಿ: ರಾಜಸ್ಥಾನದ ಜೋಧಪುರದ ಜಲೋರಿ ಗೇಟ್ ಪ್ರದೇಶದಲ್ಲಿ ಕಲ್ಲು ತೂರಾಟ ನಡೆದು, ಎರಡು ಗುಂಪುಗಳ ಮಧ್ಯೆ ಘರ್ಷಣೆ ನಡೆದಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೆಖಾವತ್​ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ರಾಜಸ್ಥಾನದಲ್ಲಿ ಅಧಿಕಾರ ನಡೆಸುತ್ತಿರುವ ಅಶೋಕ್ ಗೆಹ್ಲೋಟ್​​ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕೇಂದ್ರ ಸಚಿವರು, ಈ ಕೋಮು ಗಲಭೆ ಉಂಟಾಗಲು ರಾಜ್ಯ ಸರ್ಕಾರ ನೇರ ಹೊಣೆಯಾಗಿದೆ. ಕಲ್ಲು ತೂರಾಟ ಒಂದು ಪೂರ್ವಭಾವಿ ಯೋಜನೆ ಎಂದು ಆರೋಪ ಮಾಡಿದ್ದಾರೆ.

  • What happened at the time of morning Namaz that immediately afterward cars were vandalised, houses were pelted with stones, women were insulted in Jodhpur. Police did not take any pre-emptive steps to prevent this: Union minister&Jodhpur MP Gajendra S Shekhawat on Jodhpur clashes pic.twitter.com/bVGq4eJJSV

    — ANI (@ANI) May 3, 2022 " class="align-text-top noRightClick twitterSection" data=" ">

ಉದ್ರಿಕ್ತರು ಏಕಾಏಕಿ ಕಾರು ಧ್ವಂಸಗೊಳಿಸಿ, ಮನೆಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಘರ್ಷಣೆ ವೇಳೆ ರಾಜಸ್ಥಾನ ಪೊಲೀಸರು ಮತ್ತು ಸರ್ಕಾರ ಮೂಕ ಪ್ರೇಕ್ಷಕರಾಗಿ ಉಳಿದಿದ್ದು, ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಎಂದು ಹೇಳಿದರು. ಇಂತಹ ಘಟನೆ ನಡೆಯುತ್ತಿದ್ದಾಗ ರಾಜ್ಯ ಸರ್ಕಾರ ಯಾವುದೇ ರೀತಿಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದಿರುವುದು ಸರ್ಕಾರದ ವೈಫಲ್ಯಕ್ಕೆ ಸಾಕ್ಷಿ ಎಂದು ಆಕ್ರೋಶ ಹೊರಹಾಕಿದರು.

ಇದನ್ನೂ ಓದಿ: ಜೋಧಪುರ್​ನಲ್ಲಿ ಧ್ವಜ ವಿಚಾರವಾಗಿ ಗುಂಪು ಘರ್ಷಣೆ, ಶಾಸಕರ ಮನೆ ಬಳಿ ಬೈಕ್​ಗೆ ಬೆಂಕಿ: ಇಂಟರ್​ನೆಟ್​ ಸ್ಥಗಿತ

ಏನಿದು ಘಟನೆ: ಜಾಲೋರಿ ವೃತ್ತದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಬಾಲಮುಕುಂದ ಬಿಸ್ಸಾ ಅವರ ಪ್ರತಿಮೆ ಇದ್ದು, ಈದ್​ ನಿಮಿತ್ತ ಮುಸ್ಲಿಮರು ಧ್ವಜಗಳನ್ನ ಅಳವಡಿಕೆ ಮಾಡ್ತಿದ್ದರು. ಈ ವೇಳೆ, ಕಲ್ಲು ತೂರಾಟ ನಡೆದಿದೆ. ಘಟನೆಯಲ್ಲಿ ಕೆಲ ಪೊಲೀಸರಿಗೂ ಗಾಯಗಳಾಗಿವೆ.

ಈ ಘಟನೆ ಬಗ್ಗೆ ಸಿಎಂ ಅಶೋಕ್​ ಗೆಹ್ಲೋಟ್ ಟ್ವೀಟ್​ ಮಾಡಿದ್ದು, ಎರಡು ಗುಂಪುಗಳ ನಡುವಿನ ಗಲಾಟೆ ದುರದೃಷ್ಟಕರ. ಸ್ಥಳದಲ್ಲಿ ಶಾಂತಿ ಮತ್ತು ಕಾನೂನು ಹಾಗೂ ಸುವ್ಯವಸ್ಥೆ ಕಾಪಾಡುವಂತೆ ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ. ಜತೆಗೆ ಕಾನೂನು ಹಾಗೂ ಸುವ್ಯವಸ್ಥೆ ಸ್ಥಾಪಿಸಲು ಎಲ್ಲ ಪಕ್ಷದವರು ಸಹಕಾರ ನೀಡಬೇಕೆಂದು ಅವರು ಮನವಿ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.