ETV Bharat / bharat

ಕೇಂದ್ರ ಗೃಹ ಸಚಿವ ಅಮಿತ್​ ಶಾ ಸ್ವಾಗತಕ್ಕೆ ಸಕಲ ಸಿದ್ಧತೆ... ‘ಚಾಣಕ್ಯ’ನಿಂದ ಶಮನವಾಗುತ್ತಾ ಶಾಸಕರ ಅಸಮಾಧಾನ!? - ಕೇಂದ್ರ ಗೃಹ ಸಚಿವ ಅಮಿತ್​ ಶಾ

ಇಂದು ಬೆಳಗ್ಗೆ 11 ಗಂಟೆಗೆ ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಭೇಟಿ ನೀಡಲಿದ್ದು, ರಾಜ್ಯ ಬಿಜೆಪಿಯಲ್ಲಿರುವ ಭುಗಿಲೆದ್ದಿರುವ ಅಸಮಾಧಾನವನ್ನು ಶಮನ ಮಾಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

Amit Shah is arriving in Karnataka today, Union Home Minister Amit Shah is arriving in Karnataka today, Union Home Minister Amit Shah, Union Home Minister Amit Shah news, ರಾಜ್ಯಕ್ಕೆ ಭೇಟಿ ನೀಡಲಿರುವ ಕೇಂದ್ರ ಗೃಹ ಸಚಿವ ಅಮಿತ್​ ಶಾ, ಇಂದು ರಾಜ್ಯಕ್ಕೆ ಭೇಟಿ ನೀಡಲಿರುವ ಕೇಂದ್ರ ಗೃಹ ಸಚಿವ ಅಮಿತ್​ ಶಾ, ಕೇಂದ್ರ ಗೃಹ ಸಚಿವ ಅಮಿತ್​ ಶಾ, ಕೇಂದ್ರ ಗೃಹ ಸಚಿವ ಅಮಿತ್​ ಶಾ ಸುದ್ದಿ,
ಇಂದು ರಾಜ್ಯಕ್ಕೆ ಭೇಟಿ ನೀಡಲಿರುವ ಕೇಂದ್ರ ಗೃಹ ಸಚಿವ
author img

By

Published : Jan 16, 2021, 7:52 AM IST

ಬೆಂಗಳೂರು: ಬಿಜೆಪಿ ರಾಷ್ಟ್ರೀಯ ನಾಯಕರು ಹಾಗೂ ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಂದು ನಗರಕ್ಕೆ ಆಗಮಿಸುತ್ತಿರುವುದರಿಂದ ಅದ್ಧೂರಿಯಾಗಿ ಸ್ವಾಗತಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥ್​ ನಾರಾಯಣ ತಿಳಿಸಿದ್ದಾರೆ.

ಅಮಿತ್ ಶಾ ಇಂದು ಭದ್ರಾವತಿಗೆ ಭೇಟಿ ನೀಡುತ್ತಿದ್ದು, ಆರ್.ಎ.ಎಫ್ ಘಟಕಕ್ಕೆ ಭೂಮಿ ಪೂಜೆ ನೆರವೇರಿಸಲಿದ್ದಾರೆ. ಬೆಳಗ್ಗೆ ದೆಹಲಿಯಿಂದ ಹೊರಡುವ ಅವರು 11 ಗಂಟೆಗೆ ಬೆಂಗಳೂರಿನ ಹೆಚ್​ಎಎಲ್ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದ್ದಾರೆ. ಅವರನ್ನ ಸಿಎಂ ಯಡಿಯೂರಪ್ಪ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತು ಸಚಿವರು ಸ್ವಾಗತಿಸಲಿದ್ದಾರೆ.

ನೂತನ ಸಚಿವ ಅರವಿಂದ ಲಿಂಬಾವಳಿ ಮತ್ತು ಸಿ.ವಿ.ರಾಮನ್ ನಗರದ ಶಾಸಕ ರಘು ಅವರ ನೇತೃತ್ವದಲ್ಲಿ, ಹೆಚ್​ಎಎಲ್ ವಿಮಾನ ನಿಲ್ದಾಣದಲ್ಲಿ ಕೇಂದ್ರ ಗೃಹ ಸಚಿವರನ್ನು ಅದ್ಧೂರಿಯಾಗಿ ಸ್ವಾಗತಿಸಲು ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ನಗರದ ಸುತ್ತಮುತ್ತ ಬಿಜೆಪಿ ಬಾವುಟಗಳನ್ನು ಕಟ್ಟುವ ಮೂಲಕ ಅಮಿತ್​ ಶಾ ಸ್ವಾಗತಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ.

ರಾಜ್ಯಕ್ಕೆ ಭೇಟಿ ನೀಡುತ್ತಿರುವ ಅಮಿತ್ ಶಾ ಅವರನ್ನು ಸಚಿವರು, ಶಾಸಕರು ಹಾಗೂ ಸಂಸದರನ್ನ ಸೌಹಾರ್ದಯುತವಾಗಿ ಭೇಟಿ ಮಾಡಲಿದ್ದಾರೆ. ನಂತರ ಹೆಲಿಕಾಪ್ಟರ್ ಮೂಲಕ 12:30ಕ್ಕೆ ಭದ್ರಾವತಿಗೆ ತೆರಳಲಿದ್ದಾರೆ. ಅಲ್ಲಿ ಅವರ ಇಲಾಖೆಯ ಕಾರ್ಯಕ್ರಮವಿದ್ದು, ಕಾರ್ಯಕ್ರಮದ ನಂತರ ಹೆಚ್​ಎಎಲ್ ವಿಮಾನ ನಿಲ್ದಾಣಕ್ಕೆ ಮಧ್ಯಾಹ್ನ 3:30ಕ್ಕೆ ವಾಪಸ್ ಆಗಲಿದ್ದಾರೆ ಎಂದು ಡಿಸಿಎಂ ಅಶ್ವತ್ಥ್​​ ನಾರಾಯಣ ತಿಳಿಸಿದ್ದಾರೆ.

ಅವರನ್ನು ಸ್ವಾಗತಿಸಲು ನಗರದ ಕೆಆರ್​ಪುರ, ಮಹದೇವಪುರ, ಸಿ.ವಿ.ರಾಮನ್ ನಗರ, ಮತ್ತು ಸರ್ವಜ್ಞ ನಗರದ ನಾಲ್ಕು ಮಂಡಲಗಳಿಂದ ನಾಲ್ಕು ಸಾವಿರ ಬಿಜೆಪಿ ಕಾರ್ಯಕರ್ತರು ಆಗಮಿಸುತ್ತಿದ್ದಾರೆ. ನಂತರ ಇಲ್ಲಿಂದ ಹೆಚ್​ಎಎಲ್​ನಿಂದ ದೊಮ್ಮಲೂರು‌ ಸರ್ಕಲ್​ನಲ್ಲಿ ಶಾಂತಿ ನಗರ, ಬಿಟಿಎಂ ಲೇಔಟ್, ಜಯನಗರ ಕ್ಷೇತ್ರದ ಬಿಜೆಪಿ ಕಾರ್ಯಕರ್ತರಿಂದ ಅಮಿಶ್ ಶಾ ಅವರಿಗೆ ಸ್ವಾಗತ ಏರ್ಪಡಿಸಲಾಗಿದೆ. ಟ್ರಿನಿಟಿ ಸರ್ಕಲ್ ಭೇಟಿ ನೀಡಿ ಅಲ್ಲಿ ಶಿವಾಜಿ ನಗರ, ಗಾಂಧಿನಗರ, ಚಾಮರಾಜಪೇಟೆ, ರಾಜಾಜಿನಗರ ಕ್ಷೇತ್ರದ ಬಿಜೆಪಿ ಬೆಂಬಲಿಗರು ವಿನೂತವಾಗಿ ಸ್ವಾಗತ ಕೋರಲು ಸಿದ್ಧತೆ ಮಾಡಲಾಗಿದೆ ಎಂದು ಡಿಸಿಎಂ ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.