ETV Bharat / bharat

ಕರ್ನಾಟಕ ಸೇರಿ 10 ರಾಜ್ಯಗಳಲ್ಲಿ COVID ಉಲ್ಭಣ.. ಕೊರೊನಾ ಹೋರಾಟಕ್ಕೆ 1800 ಕೋಟಿ ರೂ. ನೀಡಿದ ಕೇಂದ್ರ - ಕರ್ನಾಟಕ ಕೋವಿಡ್​

ಕೊರೊನಾ ಮಹಾಮಾರಿ ವಿರುದ್ಧದ ಹೋರಾಟ ಮುಂದುವರೆದಿದ್ದು, ದೇಶದ 10 ರಾಜ್ಯಗಳಿಂದ ಶೇ. 80ರಷ್ಟು ಕೋವಿಡ್​ ಪ್ರಕರಣ ಕಂಡು ಬರುತ್ತಿವೆ. ಇದರ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

Union Health Secretary
Union Health Secretary
author img

By

Published : Jul 31, 2021, 6:42 PM IST

ನವದೆಹಲಿ: ಎರಡನೇ ಹಂತದ ಕೋವಿಡ್​ ಅಲೆ ಹತೋಟಿಗೆ ಬರುವ ಯಾವುದೇ ಲಕ್ಷಣ ಗೋಚರವಾಗಿ ಕಂಡು ಬರುತ್ತಿಲ್ಲ. ಕಳೆದ ಕೆಲ ದಿನಗಳ ಹಿಂದೆ ನಿಯಂತ್ರಣದಲ್ಲಿದ್ದ ಕೋವಿಡ್​ ಇದೀಗ ಕೆಲವೊಂದು ರಾಜ್ಯಗಳಲ್ಲಿ ದಿಢೀರ್​ ಆಗಿ ಉಲ್ಭಣಗೊಂಡಿದ್ದು, ಕರ್ನಾಟಕ ಸೇರಿದಂತೆ 10 ರಾಜ್ಯಗಳಲ್ಲಿ ಇದರ ಆರ್ಭಟ ಮತ್ತಷ್ಟು ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಕಾರ್ಯದರ್ಶಿ ಮಾಹಿತಿ ನೀಡಿದ್ದಾರೆ.

ಕೇಂದ್ರ ಆರೋಗ್ಯ ಇಲಾಖೆ ಕಾರ್ಯದರ್ಶಿ ರಾಜೇಶ್​ ಭೂಷಣ್ ಮಾತನಾಡಿದ್ದು, ದೇಶದ 10 ರಾಜ್ಯಗಳಲ್ಲಿ ಕೊರೊನಾ ವೈರಸ್​ ಏರಿಕೆಯಾಗುತ್ತಿದ್ದು, ಶೇ. 80ರಷ್ಟು ಪ್ರಕರಣಗಳು ಇಲ್ಲಿ ಕಂಡು ಬರುತ್ತಿವೆ. ಅದರ ನಿಯಂತ್ರಣಕ್ಕಾಗಿ ಇಂದು ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಲಾಗಿದೆ ಎಂದರು.

ಕೋವಿಡ್​ ಸೋಂಕಿತ ಪ್ರಕರಣ ಹೆಚ್ಚುತ್ತಿರುವ ಕಾರಣದಿಂದಾಗಿ ಕೇಂದ್ರ ಸರ್ಕಾರ 10 ರಾಜ್ಯಗಳಲ್ಲಿನ ಕೋವಿಡ್ ಪರಿಸ್ಥಿತಿ ಪರಿಶೀಲಿಸಿದೆ. ಪ್ರಮುಖವಾಗಿ ಕೇರಳ, ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಒಡಿಶಾ, ಅಸ್ಸೋಂ, ಮಿಜೋರಾಂ, ಮೇಘಾಲಯ, ಮಣಿಪುರ್ ರಾಜ್ಯಗಳಲ್ಲಿ ಪ್ರಕರಣಗಳು ಉಲ್ಬಣಗೊಳ್ಳುತ್ತಿದ್ದು, ಮತ್ತಷ್ಟು ಎಚ್ಚರಿಕೆ ಕ್ರಮ ಕೈಗೊಳ್ಳುವ ಅವಶ್ಯಕತೆ ಇದೆ ಎಂದಿದ್ದಾರೆ.

ಕೋವಿಡ್​ ನಿಯಂತ್ರಣಕ್ಕೆ ತರಲು ನೆರೆಹೊರೆ, ಸಮುದಾಯ, ಗ್ರಾಮ, ಮೊಹಲ್ಲಾ, ವಾರ್ಡ್​ಗಳಲ್ಲಿ ಕೋವಿಡ್​ ನಿಯಂತ್ರಣ ಮಾರ್ಗಸೂಚಿ ಅವಶ್ಯಕವಾಗಿದೆ ಎಂದು ರಾಜೇಶ್​ ಭೂಷಣ್​ ತಿಳಿಸಿದ್ದಾರೆ.

ಇದನ್ನೂ ಓದಿರಿ: ‘goodbye' ರಾಜಕೀಯಕ್ಕೆ ದಿಢೀರ್​​ ನಿವೃತ್ತಿ ಘೋಷಿಸಿದ BJP MP ಬಾಬುಲ್ ಸುಪ್ರಿಯೋ​!

ಕೋವಿಡ್ ಹೋರಾಟಕ್ಕೆ 1,800 ಕೋಟಿ ರೂ. ನೀಡಿದ ಕೇಂದ್ರ

  • केंद्र सरकार द्वारा कोरोना से लड़ने हेतु देश को सशक्त बनाने के लिए तय ‘इमरजेंसी कोविड रिस्पांस पैकेज’ की कुल राशि का 15% यानी कि ₹1827.80 करोड़ राज्यों एवं UTs को भेज दिए गए है।

    यह पैकेज देशभर में हेल्थ इंफ्रास्ट्रक्चर के विकास में सहायक सिद्ध होगा।#Unite2FightCorona pic.twitter.com/aT8XEXNNTg

    — Mansukh Mandaviya (@mansukhmandviya) July 31, 2021 " class="align-text-top noRightClick twitterSection" data=" ">

ಕೊರೊನಾ ವೈರಸ್​ ವಿರುದ್ಧದ ಹೋರಾಟಕ್ಕಾಗಿ ಕೇಂದ್ರ ಸರ್ಕಾರ ಇದೀಗ 1,827.80 ಕೋಟಿ ರೂ. ವಿವಿಧ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ನೀಡಿದ್ದಾಗಿ ತಿಳಿಸಿದೆ.

ಕೇಂದ್ರ ಆರೋಗ್ಯ ಸಚಿವರಾಗಿರುವ ಮಾನ್ಸುಕ್​ ಮಾಂಡೋವಿಯಾ ಇದರ ಬಗ್ಗೆ ಟ್ವಿಟ್ ಮಾಡಿ ಮಾಹಿತಿ ಹೊರಹಾಕಿದ್ದು, ಕರ್ನಾಟಕಕ್ಕೆ 75.61 ಕೋಟಿ ರೂ. ಮಹಾರಾಷ್ಟ್ರಕ್ಕೆ 123.12 ಕೋಟಿ ರೂ. ತೆಲಂಗಾಣಕ್ಕೆ 44.80 ಕೋಟಿ ರೂ. ಆಂಧ್ರಪ್ರದೇಶಕ್ಕೆ 62.69 ಕೋಟಿ ರೂ. ಗುಜರಾತ್​ಗೆ 71.88 ಕೋಟಿ ರೂ. ನೀಡಿದ್ದಾಗಿ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.