ಔರಂಗಾಬಾದ್(ಮಹಾರಾಷ್ಟ್ರ): ಔರಂಗಾಬಾದ್ ಅನ್ನು ಛತ್ರಪತಿ ಸಂಭಾಜಿನಗರ ಎಂದು ಮತ್ತು ಉಸ್ಮಾನಾಬಾದ್ ಅನ್ನು ಧರಾಶಿವ್ ಎಂದು ಮರುನಾಮಕರಣ ಮಾಡಲು ಕೇಂದ್ರ ಸರ್ಕಾರ ಶುಕ್ರವಾರ ಹಸಿರು ನಿಶಾನೆ ತೋರಿದೆ. ಈ ವಿಚಾರವನ್ನು ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಔರಂಗಾಬಾದ್ ಮೊಘಲ್ ದೊರೆ ಔರಂಗಜೇಬ್‌ನ ಹೆಸರು ಹಾಗೂ ಆದರೆ, ಉಸ್ಮಾನಾಬಾದ್ 20ನೇ ಶತಮಾನದ ಹೈದರಾಬಾದ್‌ನ ರಾಜಪ್ರಭುತ್ವದ ಆಡಳಿತಗಾರನ ಹೆಸರನ್ನು ಇಡಲಾಗಿತ್ತು.
-
➡️ औरंगाबादचे ‘छत्रपती संभाजीनगर’,
— Devendra Fadnavis (@Dev_Fadnavis) February 24, 2023 " class="align-text-top noRightClick twitterSection" data="
➡️ उस्मानाबादचे ‘धाराशिव’ !
राज्य सरकारच्या निर्णयाला केंद्र सरकारची मंजुरी !
मा. पंतप्रधान नरेंद्र मोदीजी आणि केंद्रीय मंत्री मा. अमितभाई शाह यांचे कोटी-कोटी आभार!
मुख्यमंत्री @mieknathshinde जी यांच्या नेतृत्त्वातील सरकारने ‘करुन दाखविले’...! pic.twitter.com/IfXbdFec7r
">➡️ औरंगाबादचे ‘छत्रपती संभाजीनगर’,
— Devendra Fadnavis (@Dev_Fadnavis) February 24, 2023
➡️ उस्मानाबादचे ‘धाराशिव’ !
राज्य सरकारच्या निर्णयाला केंद्र सरकारची मंजुरी !
मा. पंतप्रधान नरेंद्र मोदीजी आणि केंद्रीय मंत्री मा. अमितभाई शाह यांचे कोटी-कोटी आभार!
मुख्यमंत्री @mieknathshinde जी यांच्या नेतृत्त्वातील सरकारने ‘करुन दाखविले’...! pic.twitter.com/IfXbdFec7r➡️ औरंगाबादचे ‘छत्रपती संभाजीनगर’,
— Devendra Fadnavis (@Dev_Fadnavis) February 24, 2023
➡️ उस्मानाबादचे ‘धाराशिव’ !
राज्य सरकारच्या निर्णयाला केंद्र सरकारची मंजुरी !
मा. पंतप्रधान नरेंद्र मोदीजी आणि केंद्रीय मंत्री मा. अमितभाई शाह यांचे कोटी-कोटी आभार!
मुख्यमंत्री @mieknathshinde जी यांच्या नेतृत्त्वातील सरकारने ‘करुन दाखविले’...! pic.twitter.com/IfXbdFec7r
ಛತ್ರಪತಿ ಶಿವಾಜಿ ಮಹಾರಾಜರ ಹಿರಿಯ ಮಗ ಛತ್ರಪತಿ ಸಂಭಾಜಿ ಮರಾಠ ಸಾಮ್ರಾಜ್ಯದ 2ನೇ ದೊರೆ. ಆದರೆ, 1689ರಲ್ಲಿ ಔರಂಗಜೇಬನ ಆದೇಶದ ಮೇರೆಗೆ ಸಂಭಾಜಿ ಮಹಾರಾಜನನ್ನು ಗಲ್ಲಿಗೇರಿಸಲಾಗಿತ್ತು. ಕೆಲವು ವಿದ್ವಾಂಸರ ಪ್ರಕಾರ ಧಾರಾಶಿವ್, ಒಸ್ಮಾನಾಬಾದ್ ಬಳಿಯ ಗುಹೆ ಸಂಕೀರ್ಣದ ಹೆಸರು. ಇದು 8ನೇ ಶತಮಾನಕ್ಕಿಂತ ಹಿಂದಿನದು. ಹಿಂದೂ ಬಲಪಂಥೀಯ ಸಂಘಟನೆಗಳು ಎರಡು ನಗರಗಳ ಹೆಸರನ್ನು ಮರುನಾಮಕರಣ ಮಾಡುವಂತೆ ಬಹಳ ಹಿಂದಿನಿಂದಲೂ ಒತ್ತಾಯಿಸುತ್ತಿದ್ದವು.
-
अंबादास जी,
— Devendra Fadnavis (@Dev_Fadnavis) February 24, 2023 " class="align-text-top noRightClick twitterSection" data="
आधी पूर्ण प्रक्रिया समजून घ्या. केंद्र सरकारची मंजुरीची प्रक्रिया पूर्ण झाली की, आधी सामान्य प्रशासन विभाग अधिसूचना काढते, तेव्हा शहरांची नावे बदलतात. ही अधिसूचना जारी झाली आहे, त्यानुसार औरंगाबादचे 'छत्रपती संभाजीनगर' आणि उस्मानाबादचे 'धाराशिव' असे नामकरण झाले आहे. https://t.co/DyWaqjXlvO
">अंबादास जी,
— Devendra Fadnavis (@Dev_Fadnavis) February 24, 2023
आधी पूर्ण प्रक्रिया समजून घ्या. केंद्र सरकारची मंजुरीची प्रक्रिया पूर्ण झाली की, आधी सामान्य प्रशासन विभाग अधिसूचना काढते, तेव्हा शहरांची नावे बदलतात. ही अधिसूचना जारी झाली आहे, त्यानुसार औरंगाबादचे 'छत्रपती संभाजीनगर' आणि उस्मानाबादचे 'धाराशिव' असे नामकरण झाले आहे. https://t.co/DyWaqjXlvOअंबादास जी,
— Devendra Fadnavis (@Dev_Fadnavis) February 24, 2023
आधी पूर्ण प्रक्रिया समजून घ्या. केंद्र सरकारची मंजुरीची प्रक्रिया पूर्ण झाली की, आधी सामान्य प्रशासन विभाग अधिसूचना काढते, तेव्हा शहरांची नावे बदलतात. ही अधिसूचना जारी झाली आहे, त्यानुसार औरंगाबादचे 'छत्रपती संभाजीनगर' आणि उस्मानाबादचे 'धाराशिव' असे नामकरण झाले आहे. https://t.co/DyWaqjXlvO
ಫಡ್ನವೀಸ್ ಅವರು ಫೆಬ್ರವರಿ 24 ರಂದು ಗೃಹ ಸಚಿವಾಲಯದಿಂದ ರಾಜ್ಯ ಸಾಮಾನ್ಯ ಆಡಳಿತ ಇಲಾಖೆಯ ಉಪ ಕಾರ್ಯದರ್ಶಿಗೆ ಎರಡು ಪತ್ರಗಳನ್ನು ಟ್ವೀಟ್ ಮಾಡಿದ್ದಾರೆ. ಈ ಎರಡು ಮಧ್ಯ ಮಹಾರಾಷ್ಟ್ರ ನಗರಗಳ ಹೆಸರನ್ನು ಬದಲಾಯಿಸಲು ಕೇಂದ್ರಕ್ಕೆ ಯಾವುದೇ ವಿರೋಧವಿಲ್ಲ ಎಂದು ಪತ್ರಗಳಲ್ಲಿ ತಿಳಿಸಲಾಗಿದೆ. ಈ ನಿರ್ಧಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಫಡ್ನವೀಸ್ ಧನ್ಯವಾದ ತಿಳಿಸಿದ್ದಾರೆ. ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ರಾಜ್ಯ ಸರ್ಕಾರ ನೀಡಿದ ಭರವಸೆ ಈಡೇರಿಸಿದೆ ಎಂದು ಅವರು ಹೇಳಿದರು.
ಕ್ಯಾಬಿನೆಟ್ ನಿರ್ಧಾರ: ಮುಖ್ಯವಾಗಿ ಔರಂಗಾಬಾದ್ ಅನ್ನು ಸಂಭಾಜಿನಗರ ಎಂದು ಮರುನಾಮಕರಣ ಮಾಡುವುದು ಮತ್ತು ಉಸ್ಮಾನಾಬಾದ್ ಅನ್ನು ಧರಾಶಿವ್ ಎಂದು ಮರುನಾಮಕರಣ ಮಾಡುವುದು ಉದ್ಧವ್ ಠಾಕ್ರೆ ವಿರುದ್ಧ ಶಿಂಧೆಯವರ ಬಂಡಾಯದ ನಂತರ ಕಳೆದ ಜೂನ್‌ನಲ್ಲಿ ಪತನಗೊಂಡ ಶಿವಸೇನೆ - ಎನ್‌ಸಿಪಿ - ಕಾಂಗ್ರೆಸ್ ಸರ್ಕಾರದ ಕ್ಯಾಬಿನೆಟ್ ನಿರ್ಧಾರವಾಗಿತ್ತು. ಶಿಂಧೆ ನೇತೃತ್ವದ ಹೊಸ ಸರ್ಕಾರ ಸಂಪುಟ ನಿರ್ಧಾರವನ್ನು ರದ್ದುಪಡಿಸಿ ಹೊಸ ನಿರ್ಧಾರವನ್ನು ತೆಗೆದುಕೊಂಡಿತು.
ಸುತ್ತೋಲೆಯಿಂದಾಗಿ ಗೊಂದಲ: ಹಲವು ವರ್ಷಗಳ ಬೇಡಿಕೆಯಾಗಿದ್ದ ಎರಡು ನಗರಗಳ ಹೆಸರನ್ನು ಬದಲಾಯಿಸಲು ಕೇಂದ್ರ ಸರ್ಕಾರ ಶುಕ್ರವಾರ ಹಸಿರು ನಿಶಾನೆ ತೋರಿದೆ. ಇದರಿಂದಾಗಿ ಔರಂಗಾಬಾದ್ ಹೆಸರು ಈಗ ಛತ್ರಪತಿ ಸಂಭಾಜಿನಗರ ಮತ್ತು ಉಸ್ಮಾನಾಬಾದ್ ಹೆಸರು ಧಾರಾಶಿವ ಎಂದು ಮಾರ್ಪಟ್ಟಿದೆ. ಆದರೆ ನಗರದ ಹೆಸರು ಅಥವಾ ಇಡೀ ಜಿಲ್ಲೆಯ ಹೆಸರನ್ನು ಬದಲಾಯಿಸಲಾಗಿದೆಯೇ ಎಂಬ ಪ್ರಶ್ನೆ ಎದ್ದಿದೆ.
ಕೇಂದ್ರ ಸರ್ಕಾರ ಹೊರಡಿಸಿರುವ ಸುತ್ತೋಲೆ ಪ್ರಕಾರ ಔರಂಗಾಬಾದ್ ನಗರದ ಹೆಸರನ್ನು ಛತ್ರಪತಿ ಸಂಭಾಜಿನಗರ ಎಂದು ಬದಲಾಯಿಸಲಾಗಿದೆ. ಔರಂಗಾಬಾದ್ ಜಿಲ್ಲೆಯನ್ನು ಇದರಲ್ಲಿ ಉಲ್ಲೇಖಿಸಲಾಗಿದೆ. ಹೀಗಿರುವಾಗ ಕೇಂದ್ರ ಸರ್ಕಾರ ಕೈಗೊಂಡಿರುವ ನಿರ್ಧಾರದ ಬಗ್ಗೆ ಹಲವು ಪ್ರಶ್ನೆಗಳು ಎದ್ದಿವೆ. ಅದರಲ್ಲಿ ನೀಡಿರುವ ಹೆಸರು ಔರಂಗಾಬಾದ್ ನಗರಕ್ಕೆ ಸೀಮಿತವೋ ಅಥವಾ ಇಡೀ ಜಿಲ್ಲೆಗೆ ಮರುನಾಮಕರಣ ಮಾಡಲಾಗಿದೆಯೋ ಎಂಬ ಗೊಂದಲ ಉಂಟಾಗಿದೆ.
ಔರಂಗಾಬಾದ್ ಹೆಸರನ್ನು ಛತ್ರಪತಿ ಸಂಭಾಜಿನಗರ ಎಂದು ಬದಲಾಯಿಸಲು ಕೇಂದ್ರ ಸರ್ಕಾರ ನಿರ್ಧರಿಸಿದ ನಂತರ ಇಡೀ ಜಿಲ್ಲೆಯಲ್ಲಿ ಸಂತಸದ ವಾತಾವರಣವಿದೆ. ಶಿವಸೇನಾ ಮುಖ್ಯಸ್ಥ ದಿವಂಗತ ಬಾಳಾಸಾಹೇಬ್ ಠಾಕ್ರೆ ಅವರ ಘೋಷಣೆಯ ಸುಮಾರು 35 ವರ್ಷಗಳ ನಂತರ, ಕೇಂದ್ರ ಸರ್ಕಾರ ನಾಮಕರಣದ ವಿಷಯದ ಬಗ್ಗೆ ತನ್ನ ಮೊದಲ ಘೋಷಣೆ ಮಾಡಿದೆ. ಈ ಬಗ್ಗೆ ಬಿಜೆಪಿ, ಶಿವಸೇನೆ ಹಾಗೂ ಠಾಕ್ರೆ ಬಣ ಸಂತಸ ವ್ಯಕ್ತಪಡಿಸಿವೆ.
ಬಾಳಾಸಾಹೇಬ್ ಠಾಕ್ರೆ 9 ಮೇ 1988 ರಂದು ಸಂಭಾಜಿನಗರ ಹೆಸರನ್ನು ಘೋಷಿಸಿದ್ದರು. ಎರಡು ಬಾರಿ ಶಿವಸೇನೆಯ ಮೇಯರ್ ಈ ಪ್ರಸ್ತಾವನೆಯನ್ನು ಮಹಾನಗರ ಪಾಲಿಕೆಗೆ ಕಳುಹಿಸಿದ್ದರು. ಆದರೆ ಯಾರೂ ಈ ಬಗ್ಗೆ ಗಮನ ಹರಿಸಿರಲಿಲ್ಲ. ಮಹಾವಿಕಾಸ್ ಅಘಾಡಿ ಸರ್ಕಾರದ ಅವಧಿಯಲ್ಲಿ ಔರಂಗಾಬಾದ್ ಹೆಸರನ್ನು ಸಂಭಾಜಿನಗರ ಎಂದು ಬದಲಾಯಿಸಲು ಉದ್ಧವ್ ಠಾಕ್ರೆ ನಿರ್ಧರಿಸಿದ್ದರು. ಇದಕ್ಕಾಗಿ ಕೇಂದ್ರ ಸರ್ಕಾರವನ್ನು ಅಭಿನಂದಿಸುತ್ತೇ ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಅಂಬಾದಾಸ್ ದಾನ್ವೆ ಹೇಳಿದ್ದಾರೆ. ಅಲ್ಲದೇ ಇದರ ಶ್ರೇಯಸ್ಸು ಶಿವಸೇನೆ ಮುಖ್ಯಸ್ಥ ಬಾಳಾಸಾಹೇಬ್ ಠಾಕ್ರೆ ಅವರಿಗೆ ಮಾತ್ರ ಸಲ್ಲುತ್ತದೆ ಎಂದಿದ್ದಾರೆ.
ಇದನ್ನೂ ಓದಿ: ಮಹಾರಾಷ್ಟ್ರದ 2 ನಗರಗಳಿಗೆ ಮರುನಾಮಕರಣ: ತಂದೆಗೆ ಕೊಟ್ಟ ಮಾತು ಉಳಿಸಿಕೊಂಡ ಸಿಎಂ ಠಾಕ್ರೆ