ETV Bharat / bharat

Railway Projects: ₹32,500 ಕೋಟಿ ವೆಚ್ಚದ ಏಳು ರೈಲ್ವೆ ಯೋಜನೆಗಳಿಗೆ ಕೇಂದ್ರ ಸಂಪುಟ ಅಸ್ತು - ರೈಲ್ವೆ ಇಲಾಖೆ

Railway Projects: ಕೇಂದ್ರ ಸರ್ಕಾರದಿಂದಲೇ ಶೇ.100ರಷ್ಟು ಅನುದಾನ ಒದಗಿಸುವ 32,500 ಕೋಟಿ ರೂಪಾಯಿ ಅಂದಾಜು ವೆಚ್ಚದ ಏಳು ರೈಲ್ವೆ ಯೋಜನೆಗಳಿಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ.

Union Cabinet approves seven multi-tracking Railway projects of 2339 km, will reduce congestion
₹ 32,500 ಕೋಟಿ ವೆಚ್ಚದ ಏಳು ರೈಲ್ವೆ ಯೋಜನೆಗಳಿಗೆ ಕೇಂದ್ರ ಸಂಪುಟ ಅಸ್ತು
author img

By

Published : Aug 16, 2023, 6:22 PM IST

ನವದೆಹಲಿ: ರೈಲ್ವೆ ಇಲಾಖೆಗೆ ಸಂಬಂಧಿಸಿದಂತೆ 32,500 ಕೋಟಿ ರೂಪಾಯಿ ಅಂದಾಜು ವೆಚ್ಚದ ಏಳು ಯೋಜನೆಗಳಿಗೆ ಕೇಂದ್ರ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಇಂದು (ಬುಧವಾರ) ಅನುಮೋದನೆ ನೀಡಿದೆ. ಅತ್ಯಂತ ಜನನಿಬಿಡ ರೈಲ್ವೆ ವಿಭಾಗಗಳಲ್ಲಿ ಹೆಚ್ಚು ಅಗತ್ಯವಿರುವ ಮೂಲಸೌಕರ್ಯ ಅಭಿವೃದ್ಧಿಯೊಂದಿಗೆ ಸುಗಮ ಸಂಚಾರ ಹಾಗೂ ದಟ್ಟಣೆ ಕಡಿಮೆ ಮಾಡಲು ಇದು ಅನುಕೂಲವಾಗಲಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.

ಕೇಂದ್ರ ಸಚಿವ ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅಶ್ವಿನಿ ವೈಷ್ಣವ್, ''ರೈಲ್ವೆ ಸಚಿವಾಲಯದ ಏಳು ಯೋಜನೆಗಳಿಗೆ ಕೇಂದ್ರ ಸರ್ಕಾರದಿಂದಲೇ ಸಂಪೂರ್ಣ ಶೇ.100ರಷ್ಟು ಅನುದಾನ ಒದಗಿಸಲಾಗುತ್ತದೆ. ಈ ಯೋಜನೆಗಳು ಉತ್ತರ ಪ್ರದೇಶ, ಬಿಹಾರ, ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ, ಗುಜರಾತ್, ಒಡಿಶಾ, ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳ ಸೇರಿ 9 ರಾಜ್ಯಗಳ 35 ಜಿಲ್ಲೆಗಳನ್ನು ಒಳಗೊಂಡಿವೆ'' ಎಂದು ಹೇಳಿದರು.

''ಗೋರಖ್‌ಪುರ ಕಂಟೋನ್ಮೆಂಟ್​-ವಾಲ್ಮೀಕಿ ನಗರ (ಡಬ್ಲಿಂಗ್​), ಸೋನ್ ನಗರ-ಆಂದಾಲ್ ಬಹು ಟ್ರ್ಯಾಕಿಂಗ್ ಯೋಜನೆ, ನೆರಗುಂಡಿ-ಬರಾಂಗ್, ಖುರ್ದಾ ರೋಡ್​-ವಿಜಯನಗರಂ (ಮೂರನೇ ಲೈನ್), ಮುದ್ಖೇಡ್-ಮೇಡ್ಚಲ್ ಮತ್ತು ಮಹೆಬೂಬಗರ-ಧೋನೆ, ಗುಂಟೂರು-ಬೀಬಿನಗರ ಮತ್ತು ಚೋಪನ್-ಚುನಾರ್ (ಎಲ್ಲ ಮಾರ್ಗಗಳ ಡಬ್ಲಿಂಗ್​) ಹಾಗೂ ಸಮಾಖಿಯಾಲಿ-ಗಾಂಧಿಧಾಮ್ (ನಾಲ್ಕನೇ ಲೈನ್​) ಯೋಜನೆಗಳು ಇವಾಗಿದೆ'' ಎಂದು ವಿವರಿಸಿದರು.

ಮುಂದುವರೆದು ಮಾತನಾಡಿದ ಅವರು, ''ಈಗಾಗಲೇ ಅಸ್ತಿತ್ವದಲ್ಲಿರುವ ರೈಲ್ವೆ 2,339 ಕಿಲೋಮೀಟರ್‌ಗಳಷ್ಟು ವಾಪ್ತಿಯು ಈ ಯೋಜನೆಗಳಡಿ ಬರುತ್ತದೆ. 9 ರಾಜ್ಯಗಳ ಜನರಿಗೆ 7.06 ಕೋಟಿ ಮಾನವ ದಿನಗಳ ಉದ್ಯೋಗವನ್ನು ಒದಗಿಸುವ ನಿರೀಕ್ಷೆಯಿದೆ. ಈ ರೈಲ್ವೆ ಮಾರ್ಗಗಳು ಆಹಾರಧಾನ್ಯ, ರಸಗೊಬ್ಬರ, ಕಲ್ಲಿದ್ದಲು, ಸಿಮೆಂಟ್, ಹಾರುಬೂದಿ, ಕಬ್ಬಿಣ, ಉಕ್ಕು, ಕಚ್ಚಾ ತೈಲ, ಸುಣ್ಣದ ಕಲ್ಲು ಮತ್ತು ಖಾದ್ಯ ತೈಲಗಳಂತಹ ವಿವಿಧ ಸರಕುಗಳ ಸಾಗಣೆಗೆ ಅತ್ಯಗತ್ಯ ಆಗಿವೆ. ಈ ಯೋಜನೆಗಳ ಮೂಲಕ ಮಾರ್ಗ ಸಾಮರ್ಥ್ಯ ಕಾರ್ಯವು ವರ್ಷಕ್ಕೆ 200 ಮಿಲಿಯನ್ ಟನ್ ಪ್ರಮಾಣದಷ್ಟು ಹೆಚ್ಚುವರಿ ಸರಕು ಸಾಗಣೆಗೆ ಅನುಕೂಲವಾಗುವ ವಿಶ್ವಾಸ ಹೊಂದಲಾಗಿದೆ'' ಎಂದು ಮಾಹಿತಿ ನೀಡಿದರು.

ಅಲ್ಲದೇ, ''ಈ ಯೋಜನೆಗಳು ಪ್ರಧಾನ ಮಂತ್ರಿಯವರ ನವ ಭಾರತದ ದೂರದೃಷ್ಟಿಗೆ ಅನುಗುಣವಾಗಿದೆ. ಆಯಾ ಪ್ರದೇಶದಲ್ಲಿ ಉದ್ಯೋಗಗಳ ಸೃಷ್ಟಿ ಮೂಲಕ ಪ್ರದೇಶದ ಜನರನ್ನು 'ಆತ್ಮನಿರ್ಭರ್' ಮಾಡುತ್ತದೆ. ಆ ಪ್ರದೇಶದ ಜನರ ಉದ್ಯೋಗ ಮತ್ತು ಸ್ವಯಂ ಉದ್ಯೋಗಾವಕಾಶಗಳನ್ನು ಹೆಚ್ಚಿಸುತ್ತದೆ. ಜನರು ಹಾಗೂ ಸರಕು ಸೇವೆಗಳ ಚಲನೆಗೆ ತಡೆರಹಿತ ಸಂಪರ್ಕವನ್ನು ಒದಗಿಸುತ್ತದೆ'' ಎಂದು ಸಚಿವರು ಹೇಳಿದರು.

ಇದನ್ನೂ ಓದಿ: PM Vishwakarma Scheme: ₹13 ಸಾವಿರ ಕೋಟಿ ವೆಚ್ಚದ 'ಪಿಎಂ ವಿಶ್ವಕರ್ಮ ಯೋಜನೆ'ಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.