ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟದಲ್ಲಿ ಕೆಲವೊಂದು ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಕಾಶ್ ಜಾವ್ಡೇಕರ್ ಹಾಗೂ ರವಿಶಂಕರ್ ಪ್ರಸಾದ್ ಸುದ್ದಿಗೋಷ್ಠಿ ನಡೆಸಿ ಮಾಹಿತಿ ಹಂಚಿಕೊಂಡರು.
ಇಂದಿನ ಕ್ಯಾಬಿನೆಟ್ನಲ್ಲಿ ನವೆಂಬರ್ ತಿಂಗಳವರೆಗೆ 80 ಕೋಟಿ ನಾಗರೀಕರಿಗೆ ಉಚಿತವಾಗಿ ಪಡಿತರ ನೀಡಲು ನಿರ್ಧರಿಸಿದ್ದು, ಇದಕ್ಕಾಗಿ 93,000 ಕೋಟಿ ರೂ. ಮಂಜೂರು ಮಾಡಲಾಗಿದೆ ಎಂದರು. ಭಾರತದಲ್ಲಿನ ಅಂತರ್ಜಾಲ ವಿಸ್ತರಣೆಗೋಸ್ಕರ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದ್ದು, ದೇಶದ 16 ರಾಜ್ಯಗಳ 3 ಲಕ್ಷಕ್ಕೂ ಅಧಿಕ ಹಳ್ಳಿಗಳಲ್ಲಿ Broadband ನೀಡಲು ನಿರ್ಧಾರ ಕೈಗೊಳ್ಳಲಾಗಿದೆ. ಅದಕ್ಕಾಗಿ 19 ಸಾವಿರ ಕೋಟಿ ರೂ. ರಿಲೀಸ್ ಮಾಡಲಾಗಿದೆ ಎಂದು ರವಿಶಂಕರ್ ಪ್ರಸಾದ್ ತಿಳಿಸಿದರು.
-
LIVE Now #Cabinet briefing by Union Ministers @PrakashJavdekar @rsprasad and @RajKSinghIndia
— PIB India (@PIB_India) June 30, 2021 " class="align-text-top noRightClick twitterSection" data="
at National Media Centre, #NewDelhi
Watch on #PIB's
YouTube: https://t.co/cdM74w7qRn
Facebook: https://t.co/p9g0J6q6qv https://t.co/0XWqWy5xRC
">LIVE Now #Cabinet briefing by Union Ministers @PrakashJavdekar @rsprasad and @RajKSinghIndia
— PIB India (@PIB_India) June 30, 2021
at National Media Centre, #NewDelhi
Watch on #PIB's
YouTube: https://t.co/cdM74w7qRn
Facebook: https://t.co/p9g0J6q6qv https://t.co/0XWqWy5xRCLIVE Now #Cabinet briefing by Union Ministers @PrakashJavdekar @rsprasad and @RajKSinghIndia
— PIB India (@PIB_India) June 30, 2021
at National Media Centre, #NewDelhi
Watch on #PIB's
YouTube: https://t.co/cdM74w7qRn
Facebook: https://t.co/p9g0J6q6qv https://t.co/0XWqWy5xRC
ಪ್ರಮುಖವಾಗಿ ಗ್ರಾಮ ಪಂಚಾಯಿತಿಗಳಿಗೆ Broadband ಸಂಪರ್ಕ ನೀಡಲು ನಿರ್ಧರಿಸಲಾಗಿದ್ದು, ಇದಕ್ಕಾಗಿ ಒಟ್ಟು 29 ಸಾವಿರ ಕೋಟಿ ರೂ. ಬಳಕೆ ಮಾಡಲು ಕೇಂದ್ರ ಮುಂದಾಗಿದೆ ಎಂದರು. ಇದರ ಜತೆಗೆ ಆರ್ಥಿಕತೆಗೆ ಚೇತರಿಕೆ ನೀಡಲು 6.29 ಲಕ್ಷ ಕೋಟಿ ರೂ. ಬಿಡುಗಡೆ ಅನುಮೋದನೆ ಸಿಕ್ಕಿದೆ.
ಉಳಿದಂತೆ ಇಂಧನ ಕ್ಷೇತ್ರದ ಸುಧಾರಣೆಗೋಸ್ಕರ 3.3 ಲಕ್ಷ ಕೋಟಿ ಮೊತ್ತದ ಯೋಜನೆಗಳಿಗೆ ಇಂದಿನ ಸಚಿವ ಸಂಪುಟದಲ್ಲಿ ಒಪ್ಪಿಗೆ ನೀಡಲಾಗಿದೆ. ಪ್ರಮುಖವಾಗಿ ರೈತರಿಗೆ ಉಚಿತ ವಿದ್ಯುತ್ ನೀಡುವ ಇರಾದೆ ಇದರಲ್ಲಿದೆ ಎಂದು ಹೇಳಲಾಗಿದೆ. ಜತೆಗೆ ವಿದ್ಯುತ್ ವಿತರಣಾ ವ್ಯವಸ್ಥೆ ಸಂಪೂರ್ಣವಾಗಿ ಆಧುನೀಕರಣ ಮಾಡಲು ನಿರ್ಧರಿಸಲಾಗಿದೆ.