ನವದೆಹಲಿ: ವಿಶ್ವದಲ್ಲೇ ಅತ್ಯುನ್ನತ ಆರ್ಥಿಕ ಪರಿಸ್ಥಿತಿ ದೇಶಕ್ಕಿದೆ. ಶೇ 7 ರಷ್ಟು ಜಿಡಿಪಿ ನಿರೀಕ್ಷಿಸಲಾಗಿದೆ. ಇದು ಎಲ್ಲ ರಾಷ್ಟ್ರಗಳಿಗಿಂತ ಮುಂದಿದೆ ಎಂದು ತೋರಿಸುತ್ತಿದೆ. ಎಲ್ಲ ರಂಗಗಳಲ್ಲೂ ಸರ್ಕಾರ ಉತ್ತಮ ಸಾಧನೆ ಮಾಡಿದೆ. ವಿಶ್ವ ಆರ್ಥಿಕತೆಯಲ್ಲಿ ಭಾರತ ಮಿಂಚುತ್ತಿದೆ. 126 ಲಕ್ಷ ಕೋಟಿ ರೂಪಾಯಿ ಯುಪಿಎ ವ್ಯವಹಾರ ನಡೆದಿದೆ. 11,700 ಕೋಟಿ ಟಾಯ್ಲೆಟ್ ನೀಡಿದ್ದೇವೆ. 220 ಕೋಟಿ ವ್ಯಾಕ್ಸಿನೇಷನ್ ಮಾಡಿದ್ದೇವೆ. 44 ಕೋಟಿ ಜನಧನ ಖಾತೆ, 2.2 ಲಕ್ಷ ಕೋಟಿ ಯಷ್ಟು ಹಣವನ್ನು ರೈತರಿಗೆ ನೀಡಿದ್ದೇವೆ ಎಂದು ಭಾಷಣ ಆರಂಭಿಸಿದ ನಿರ್ಮಲಾ ಸೀತಾರಾಮನ್ ಹೇಳಿದರು.
ವಿಶ್ವ ಆರ್ಥಿಕತೆಯಲ್ಲಿ ಭಾರತ ಮಿಂಚುತ್ತಿದೆ: 126 ಲಕ್ಷ ಕೋಟಿ ಯುಪಿಎ ವ್ಯವಹಾರ ನಡೆದಿದೆ. 11,700 ಕೋಟಿ ಟಾಯ್ಲೆಟ್ ನೀಡಿದ್ದೇವೆ. 220 ಕೋಟಿ ವ್ಯಾಕ್ಸಿನೇಷನ್ ಮಾಡಿದ್ದೇವೆ. 44 ಕೋಟಿ ಜನಧನ ಖಾತೆ. 2.2 ಲಕ್ಷ ಕೋಟಿ ಯಷ್ಟು ಹಣವನ್ನು ರೈತರಿಗೆ ನೀಡಿದ್ದೇವೆ ಎಂದು ಸೀತಾರಾಮನ್ ಹೇಳಿದ್ದಾರೆ.
ಮೂರು ಅಂಶಗಳು:
- ಜನರಿಗೆ ಉತ್ತಮ ಅವಕಾಶ
- ಯುವಕರಿಗೆ ಹೆಚ್ಚಿನ ಆದ್ಯತೆ
- ಎಲ್ಲರಿಗೂ ನೌಕರಿ
ಕೋವಿಡ್‌ನಿಂದಾಗಿ ಜಾಗತಿಕವಾಗಿ ನಿಧಾನಗತಿಯ ನಡುವೆಯೂ ಭಾರತದ ಬೆಳವಣಿಗೆ ಇದೆ. ಎಲ್ಲ ಅಂತ್ಯೋದಯ ಮನೆಗಳಿಗೆ ಉಚಿತ ಆಹಾರ ಧಾನ್ಯ ಹಾಗೂ ಎಲ್ಲರನ್ನು ಆರ್ಥಿಕ ಸದೃಢರನ್ನಾಗಿ ಮಾಡುವುದು ನಮ್ಮ ಗುರಿ ಎಂದರು
ಕರಕುಶಲ ಕರ್ಮಿಗಳಿಗೆ ನೆರವು: ಕರಕುಶಲ ಕರ್ಮಿಗಳಿಗೆ ನೂತನ ಯೋಜನೆ, ಪ್ರಧಾನಿ ವಿಶ್ವಕರ್ಮ ಕೌಶಲ್ಯ ಯೋಜನೆ ಜಾರಿ ಮಾಡಲಾಗುವುದು. ಆತ್ಮನಿರ್ಭರ್ ಯೋಜನೆಯಡಿಯಲ್ಲಿ ಕುಶಲಕರ್ಮಿಗಳಿಗೆ ನೆರವು. ಪಿಎಂ ವಿಕಾಸ್ ಹೊಸ ಯೋಜನೆ ಜಾರಿ.
ವಿಶ್ವಕ್ಕೆ ಭಾರತ ಮಾದರಿ: ಜಗತ್ತು ಭಾರತದ ಮಾದರಿಯನ್ನು ಒಪ್ಪಿಕೊಳ್ಳುತ್ತಿದೆ. ಭಾರತ ಆರ್ಥಿಕ, ರಾಜಕೀಯ, ಸ್ವಾವಲಂಬಿಯಾಗಿ ಬೆಳೆಯುತ್ತಿದೆ. ವಿಪಕ್ಷಗಳು ತಮ್ಮ ಅತೃಪ್ತಿಯನ್ನು ಸರ್ಕಾರದ ವಿರುದ್ಧ ತೋರಿಸಲಿ ಹೊರತಾಗಿ, ದೇಶದ ಅಭಿವೃದ್ಧಿಯಲ್ಲಿ ಅಲ್ಲ. ದೇಶದ ಅಭ್ಯುದಯವನ್ನು ತೆರೆದ ಮನಸ್ಸಿನಿಂದ ಸ್ವೀಕರಿಸಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು. ಇದು ಅತ್ಯುತ್ತಮ ಬಜೆಟ್ ಆಗಲಿದೆ. ಬಡವರ, ಮಧ್ಯಮ ವರ್ಗದವರ ಪರವಾದ ಬಜೆಟ್ ಇದಾಗಿರಲಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವರು ಭರವಸೆ ವ್ಯಕ್ತಪಡಿಸಿದರು.
ಬಜೆಟ್ ಆರ್ಥಿಕತೆಗೆ ಸಹಕಾರಿ: ಭಾರತದ ಆರ್ಥಿಕತೆಯು ಶೇ 6.8 ರಷ್ಟು ಬೆಳೆಯುವ ನಿರೀಕ್ಷೆಯಿದೆ. ಇದು ಜನಪರವಾದ ಬಜೆಟ್ ಆಗಿರಲಿದ್ದು, ಆರ್ಥಿಕತೆಯ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ.
ಬಜೆಟ್ನಲ್ಲಿ ಸಪ್ತ ಮಂತ್ರ: 7 ಅಂಶಗಳ ಆಧಾರದ ಮೇಲೆ ಬಜೆಟ್ ಮಂಡನೆ ಮಾಡಲಾಗಿದೆ. ಕೃಷಿಯಲ್ಲಿ ಸ್ಟಾರ್ಟಪ್ಗಳಿಗೆ ವಿಶೇಷ ಆದ್ಯತೆ, ಹಸಿರುಕ್ರಾಂತಿ, ಸರ್ವರನ್ನ ಒಳಗೊಂಡ ಬೆಳವಣಿಗೆ, ಸಿರಿಧಾನ್ಯಗಳ ಸಂಶೋಧನಾ ಕೇಂದ್ರ, ಶ್ರೀ ಅನ್ನ ಗೋಧಿ, ಶ್ರೀ ಅನ್ನ ರಾಗಿ, ಶ್ರೀ ಅನ್ನ ಸಜ್ಜೆ ಸೇರಿದಂತೆ ಸಿರಿಧಾನ್ಯಗಳ ಕೃಷಿಗೆ ಹೊಸ ಯೋಜನೆ ರೂಪಿಸಲಾಗಿದೆ. ಹೈದರಾಬಾದ್ನಲ್ಲಿ ಶ್ರೀ ಅನ್ನ ಸಂಶೋಧನಾ ಕೇಂದ್ರ ಆರಂಭ ಮಾಡಲಾಗುವುದು ಎಂದು ನಿರ್ಮಲಾ ತಿಳಿಸಿದರು.
ಇದನ್ನೂ ಓದಿ: ಯೂನಿಯನ್ ಬಜೆಟ್ 2023: ಬಜೆಟ್ ಮಂಡನೆಗೆ ಕ್ಷಣಗಣನೆ.. ಏರಿಕೆ ಹಾದಿ ಹಿಡಿದ ಭಾರತೀಯ ಷೇರು ಮಾರುಕಟ್ಟೆ