ನವದೆಹಲಿ: 7 ಲಕ್ಷದ ವರೆಗಿನ ಆದಾಯ ಪಡೆಯುವವರಿಗೆ ತೆರಿಗೆ ವಿನಾಯಿತಿ ನೀಡಲಾಗಿದ್ದು, ಬಿಗ್ ರಿಲೀಫ್ ಸಿಕ್ಕಿದೆ. 9 ಲಕ್ಷ ಆದಾಯ ಪಡೆಯುವವರು ಕೇವಲ 45 ಸಾವಿರ ರೂಪಾಯಿ ತೆರಿಗೆ ಕಟ್ಟಬೇಕಾಗಿದೆ.
7 ಲಕ್ಷದವರೆಗೆ ತೆರಿಗೆ ಇಲ್ಲ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತೆರಿಗೆ ಸ್ಲ್ಯಾಬ್‌ಗಳ ಬಗ್ಗೆ ದೊಡ್ಡ ಘೋಷಣೆ ಮಾಡಿದ್ದಾರೆ. ಈಗ ಹೊಸ ತೆರಿಗೆ ವ್ಯವಸ್ಥೆಯಲ್ಲಿ ವಾರ್ಷಿಕ ಆದಾಯ 7 ಲಕ್ಷದವರೆಗೆ ಯಾವುದೇ ತೆರಿಗೆ ಪಾವತಿಸಬೇಕಾಗಿಲ್ಲ. ಆದರೆ ತೆರಿಗೆ ವಿನಾಯಿತಿ ಪಡೆಯುವವರು ಸಂಬಂಧಿಸಿದಂತೆ ದಾಖಲೆಗಳನ್ನು ಸಲ್ಲಿಸಬೇಕಿದೆ. ಉದಾ: ಮನೆ ಬಾಡಿಗೆ ಕಟ್ಟುವ(HRA) ಮಾಹಿತಿಯನ್ನು ಒದಗಿಸಬೇಕು.
ಹೊಸ ತೆರಿಗೆ ಪದ್ಧತಿಯಲ್ಲಿ ತೆರಿಗೆ ಸ್ಲ್ಯಾಬ್ 6 ರಿಂದ 5 ಕ್ಕೆ ಹೆಚ್ಚಳ: 2.5 ಲಕ್ಷದಿಂದ ಪ್ರಾರಂಭವಾಗುವ 6 ಆದಾಯ ಸ್ಲ್ಯಾಬ್‌ಗಳೊಂದಿಗೆ ನಾನು 2020 ರಲ್ಲಿ ಹೊಸ ವೈಯಕ್ತಿಕ ಆದಾಯ ತೆರಿಗೆ ಪದ್ಧತಿಯನ್ನು ಪರಿಚಯಿಸಿದ್ದೆ. ಈ ವ್ಯವಸ್ಥೆಯಲ್ಲಿ ಈ ಭಾರಿ ಹೊಸ ತೆರಿಗೆ ನೀತಿಯನ್ನು ನಾನು ಪ್ರಸ್ತಾಪಿಸುತ್ತಿದ್ದೇನೆ ಎಂದು ಹೇಳಿದ ಅವರು ಈ ಮೊದಲು ಇದ್ದ ಸ್ಲ್ಯಾಬ್‌ಗಳ ಸಂಖ್ಯೆಯನ್ನು 5 ಕ್ಕೆ ಇಳಿಸಿ ಮತ್ತು ತೆರಿಗೆ ವಿನಾಯಿತಿ ಮಿತಿಯನ್ನು 3 ಲಕ್ಷಕ್ಕೆ ಏರಿಕೆ ಮಾಡಿದ್ದೇನೆ ಘೋಷಿಸಿದರು.
ಹೊಸ ತೆರಿಗೆ ಪದ್ಧತಿಯಲ್ಲಿ ಈ ಕೆಳಗಿನಂತಿವೆ..
ರೂ 0 ರಿಂದ ರೂ 3 ಲಕ್ಷದವರೆಗೆ - 0%
ರೂ 3 ರಿಂದ 6 ಲಕ್ಷದವರೆಗೆ - 5%
ರೂ 6 ರಿಂದ 9 ಲಕ್ಷದವರೆಗೆ - 10%
ರೂ 9 ರಿಂದ 12 ಲಕ್ಷದವರೆಗೆ - 15%
ರೂ 12 ರಿಂದ 15 ಲಕ್ಷದವರೆಗೆ - 20%
15 ಲಕ್ಷದ ಮೇಲೆ - 30%
ಮಧ್ಯಮ ವರ್ಗದ ಜನರು ತೆರಿಗೆ ಪಾವತಿ ಮಿತಿಯನ್ನು ಏರಿಕೆ ಮಾಡುವ ಮೂಲಕ ಶ್ರಮಜೀವಿ ವರ್ಗಕ್ಕೆ ಕೇಂದ್ರ ಸರ್ಕಾರ ಬಂಪರ್ ಕೊಡುಗೆ ನೀಡಿದ್ದಾರೆ. ಇದೀಗ ವೇತನ ಪಡೆಯುವ ವರ್ಗ 7 ಲಕ್ಷ ರೂಪಾಯಿ ವರೆಗೆ ಯಾವುದೇ ತೆರಿಗೆ ಪಾವತಿ ಮಾಡುವಂತಿಲ್ಲ. ಇದುವರೆಗೆ 5 ಲಕ್ಷ ರೂಪಾಯಿ ವರೆಗೆ ಮಾತ್ರ ಆದಾಯ ತೆರಿಗೆ ವಿನಾಯಿತಿ ಮಾಡಲಾಗಿತ್ತು. ಇದೀಗ ಈ ಮಿತಿಯನ್ನು 7 ಲಕ್ಷ ರೂಪಾಯಿಗೆ ಏರಿಕೆ ಮಾಡಲಾಗಿದೆ. ಹೊಸ ಟ್ಯಾಕ್ಸ್ ರಿಜಿಮ್ ಡಿಫಾಲ್ಟ್ ಆಗಿರಲಿದೆ.
ಕೊನೆಗೂ ನೌಕರ ವರ್ಗದ ಬೇಡಿಕೆ ಈಡೇರಿಸಿದ ಸೀತಾರಾಮನ್: ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಇದೀಗ ಎರಡನೇ ಬಾರಿಗೆ ತೆರಿಗೆ ವಿನಾಯಿತಿ ಘೋಷಿಸಿದೆ. 2.5 ಲಕ್ಷ ರೂಪಾಯಿ ವರೆಗಿದ್ದ ವೈಯುಕ್ತಿಕ ತೆರಿಗೆ ವಿನಾಯಿತಿಯನ್ನು 3 ಲಕ್ಷ ರೂಪಾಯಿಗೆ ಏರಿಕೆ ಮಾಡಲಾಗಿದೆ. ಇದೀಗ 3 ಲಕ್ಷ ರೂಪಾಯಿ ವರೆಗೆ ವೈಯುಕ್ತಿಕ ತೆರಿಗೆದಾರರು ಯಾವುದೇ ತೆರಿಗೆ ಪಾವತಿ ಮಾಡುವಂತಿಲ್ಲ. 3 ರಿಂದ 6 ಲಕ್ಷ ರೂಪಾಯಿ ಆದಾಯ ಹೊಂದಿದ ವೈಯುಕ್ತಿಕ ತೆರಿಗೆದಾರರು ಶೇಕಡಾ 5 ರಷ್ಟು ತೆರಿಗೆ ಮಾತ್ರ ಪಾವತಿ ಮಾಡಬೇಕು. 15.5 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಆದಾಯ ಹೊಂದಿರುವ ಪ್ರತಿಯೊಬ್ಬ ಸಂಬಳದಾರರು ₹ 52,500 ರಷ್ಟು ಪ್ರಯೋಜನ ಪಡೆಯುತ್ತಾರೆ ಎಂದು ಇದೇ ವೇಳೆ ಸೀತಾರಾಮನ್ ಹೇಳಿದ್ದಾರೆ.
ಯೂನಿಯನ್ ಬಜೆಟ್ 2023: ಬಜೆಟ್ ಮಂಡನೆಗೆ ಕ್ಷಣಗಣನೆ.. ಏರಿಕೆ ಹಾದಿ ಹಿಡಿದ ಭಾರತೀಯ ಷೇರು ಮಾರುಕಟ್ಟೆ