ಚೆನ್ನೈ: ಇಂದು ಬೆಳಗಿನ ಜಾವ ಚೆನ್ನೈನಲ್ಲಿರುವ ಬಿಜೆಪಿ ಕಚೇರಿ ಮೇಲೆ ಅಪರಿಚಿತ ವ್ಯಕ್ತಿಯೋರ್ವ ಪೆಟ್ರೋಲ್ ಬಾಂಬ್ ಎಸೆದಿದ್ದಾನೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.
ಮಾಹಿತಿ ತಿಳಿದ ಕೂಡಲೇ ಮಾಂಬಲಂ ಠಾಣೆ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಓರ್ವ ವ್ಯಕ್ತಿಯನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಆರೋಪಿಯು ವಿನೋತ್ ಎಂದು ಗುರುತಿಸಲಾಗಿದ್ದು, ಆತನನ್ನು ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
ಇನ್ನೊಂದೆಡೆ, ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ ಪ್ರಕರಣದ ಎನ್‌ಐಎ ತನಿಖೆಗೆ ಆಗ್ರಹಿಸಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗುತ್ತಿದೆ. ಈ ಪ್ರಕರಣದ ಹಿಂದಿರುವ ಪಿತೂರಿ ಹಾಗು ಸತ್ಯ ಸಂಗತಿ ಎನ್‌ಐಎ ತನಿಖೆಯಿಂದ ಮಾತ್ರ ಹೊರಬರಲು ಸಾಧ್ಯ ಎಂದು ಅವರು ಹೇಳಿದ್ದಾರೆ.
-
We seek NIA investigation because we think there is a larger conspiracy behind this petrol bomb. This should come out: Tamil Nadu BJP chief K Annamalai pic.twitter.com/imxasRaTq6
— ANI (@ANI) February 10, 2022 " class="align-text-top noRightClick twitterSection" data="
">We seek NIA investigation because we think there is a larger conspiracy behind this petrol bomb. This should come out: Tamil Nadu BJP chief K Annamalai pic.twitter.com/imxasRaTq6
— ANI (@ANI) February 10, 2022We seek NIA investigation because we think there is a larger conspiracy behind this petrol bomb. This should come out: Tamil Nadu BJP chief K Annamalai pic.twitter.com/imxasRaTq6
— ANI (@ANI) February 10, 2022
ಆರೋಪಿ ವಿನೋತ್ ಈಗಾಗಲೇ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದು, ನೀಟ್ ಪರೀಕ್ಷೆಗೆ ವಿರೋಧ ವ್ಯಕ್ತಪಡಿಸಿ ಪೆಟ್ರೋಲ್ ಬಾಂಬ್ ಎಸೆದಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಬಡ್ಡಿದರಗಳಲ್ಲಿ ಮತ್ತೆ ಯಥಾಸ್ಥಿತಿ ಕಾಯ್ದುಕೊಂಡ ಆರ್‌ಬಿಐ
ಘಟನೆ ಕುರಿತು ಹೇಳಿಕೆ ನೀಡಿರುವ ಬಿಜೆಪಿ ಮುಖಂಡ ಕರಾಟೆ ತ್ಯಾಗರಾಜನ್, ನಮ್ಮ ಕಚೇರಿಯ ಮೇಲೆ 1:30 ರ ಸುಮಾರಿಗೆ ಪೆಟ್ರೋಲ್ ಬಾಂಬ್ ಎಸೆಯಲಾಯಿತು. 15 ವರ್ಷಗಳ ಹಿಂದೆ ಇದೇ ರೀತಿಯ ಘಟನೆ ನಡೆದಿತ್ತು. ಅದರಲ್ಲಿ ಡಿಎಂಕೆ ಪಾತ್ರವಿದೆ. ತಮಿಳುನಾಡು ಸರ್ಕಾರದ ನಡೆಯನ್ನು ನಾವು ಖಂಡಿಸುತ್ತೇವೆ. ಈ ಕುರಿತು ಪೊಲೀಸರಿಗೂ ಮಾಹಿತಿ ನೀಡಿದ್ದೇವೆ, ಬಿಜೆಪಿ ಕಾರ್ಯಕರ್ತರು ಇಂತಹ ವಿಷಯಗಳಿಗೆ ಹೆದರುವುದಿಲ್ಲ ಎಂದಿದ್ದಾರೆ.
-
A petrol bomb was hurled at our office around 1:30 am. Similar incident took place 15 years ago with DMK's role in it. We condenm Tamil Nadu govt's (role) for this incident...We have also informed Police...BJP cadre doesn't get afraid of such things: Karate Thyagarajan, BJP pic.twitter.com/XVr4GfsUFX
— ANI (@ANI) February 10, 2022 " class="align-text-top noRightClick twitterSection" data="
">A petrol bomb was hurled at our office around 1:30 am. Similar incident took place 15 years ago with DMK's role in it. We condenm Tamil Nadu govt's (role) for this incident...We have also informed Police...BJP cadre doesn't get afraid of such things: Karate Thyagarajan, BJP pic.twitter.com/XVr4GfsUFX
— ANI (@ANI) February 10, 2022A petrol bomb was hurled at our office around 1:30 am. Similar incident took place 15 years ago with DMK's role in it. We condenm Tamil Nadu govt's (role) for this incident...We have also informed Police...BJP cadre doesn't get afraid of such things: Karate Thyagarajan, BJP pic.twitter.com/XVr4GfsUFX
— ANI (@ANI) February 10, 2022