ನವದೆಹಲಿ: ತಾಂತ್ರಿಕ ಮತ್ತು ವೃತ್ತಿಪರ ಶಿಕ್ಷಣ ಮತ್ತು ತರಬೇತಿಯನ್ನು (ಟಿ.ವಿ.ಇ.ಟಿ) ಯುನೆಸ್ಕೋ ನವದೆಹಲಿಯಲ್ಲಿ ಇಂದು ವರ್ಚುವಲ್ ವಿಧಾನದ ಮೂಲಕ ಪ್ರಾರಂಭಿಸಿದೆ. ಸರ್ಕಾರ, ನಾಗರಿಕ ಸಮಾಜದ ಪ್ರತಿನಿಧಿಗಳು, ಅಕಾಡೆಮಿ, ಪಾಲುದಾರರು ಮತ್ತು ಯುವಕರು ಸೇರಿದಂತೆ 400ಕ್ಕೂ ಹೆಚ್ಚು ಮಂದಿ ಇದರಲ್ಲಿ ಪಾಲ್ಗೊಂಡಿದ್ದಾರೆ.
ರಾಜ್ಯ ಶಿಕ್ಷಣ ವರದಿಯ ಎರಡನೇ ಆವೃತ್ತಿಯು ತಾಂತ್ರಿಕ ಮತ್ತು ವೃತ್ತಿಪರ ಶಿಕ್ಷಣ ಮತ್ತು ತರಬೇತಿಯ (ಟಿವಿಇಟಿ) ಮೇಲೆ ಕೇಂದ್ರೀಕರಿಸಿದೆ. ಭಾರತದ ಜನಸಂಖ್ಯಾ ಲಾಭಾಂಶ, ಯುವಕರ ಆಕಾಂಕ್ಷೆಗಳು ಮತ್ತು ಬೆಳೆಯುತ್ತಿರುವ ಆರ್ಥಿಕತೆಯ ಕೌಶಲ್ಯದ ಅವಶ್ಯಕತೆಗಳೆಲ್ಲವೂ ಸಮಗ್ರವಾಗಿ ಮತ್ತು ಸಮನಾದ ಬೆಳವಣಿಗೆ ಸಾಧಿಸಲು ಉತ್ತಮ ತರಬೇತಿ ನೀಡುವ ಉದ್ದೇಶವನ್ನು ಇದು ಹೊಂದಿದೆ.
ಸ್ಕಿಲ್ ಇಂಡಿಯಾ ಮಿಷನ್ ಅಡಿಯಲ್ಲಿ ಕೌಶಲ್ಯ ಅಭಿವೃದ್ಧಿಯನ್ನು ಪ್ರಮುಖ ರಾಷ್ಟ್ರೀಯ ಆದ್ಯತೆಯಾಗಿ ಈಗಾಗಲೇ ಘೋಷಿಸಿರುವ ಭಾರತ ಸರ್ಕಾರವನ್ನು ಬೆಂಬಲಿಸುವ ಉದ್ದೇಶವನ್ನು ವರದಿ ಹೊಂದಿದೆ. ಇದು ಭಾರತದಲ್ಲಿ ಕೌಶಲ್ಯ ಅಭಿವೃದ್ಧಿಗೆ ಸಂಬಂಧಿಸಿದ ನೀತಿಗಳು ಮತ್ತು ಕಾರ್ಯಕ್ರಮಗಳನ್ನು ಹೆಚ್ಚಿಸಲು ಮತ್ತು ಪ್ರಭಾವ ಬೀರಲು ಒಂದು ಉಲ್ಲೇಖ ಸಾಧನವಾಗಿ ಕಾರ್ಯನಿರ್ವಹಿಸುವ ಗುರಿ ಹೊಂದಿದೆ.
2015ರಲ್ಲಿ ಬಿಡುಗಡೆಯಾದ ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆಯಲ್ಲಿ (ಎನ್‌ಪಿಎಸ್‌ಡಿಇ) ಹೇಳಿರುವಂತೆ, 2022ರ ವೇಳೆಗೆ 110 ದಶಲಕ್ಷ ನುರಿತ ಉದ್ಯೋಗಿಗಳನ್ನು ರಚಿಸುವ ಗುರಿಯತ್ತ ಸಾಕಷ್ಟು ಪ್ರಗತಿ ಸಾಧಿಸಿರುವ ಭಾರತ ಇಂದು ಒಂದು ಉತ್ತೇಜಕ ಹಂತದಲ್ಲಿದೆ. ಇದು ಅನೇಕ ಯೋಜನೆಗಳ ಮೂಲಕ ವಾರ್ಷಿಕವಾಗಿ 10 ಮಿಲಿಯನ್ ಯುವಕರಿಗೆ ತರಬೇತಿ ನೀಡುತ್ತಿದೆ.