ETV Bharat / bharat

ಭಾರತೀಯ ವ್ಯಾಪಾರಿ ಹಡಗುಗಳ ಸುಗಮ ಸಂಚಾರ ಖಾತ್ರಿ: 'ಆಪರೇಷನ್ ಸಂಕಲ್ಪ' ಕಾರ್ಯಾಚರಣೆ

ಆಪರೇಷನ್ ಸಂಕಲ್ಪ್ ಅಡಿ ಭಾರತೀಯ ನೌಕಾಪಡೆಯ ಯುದ್ಧನೌಕೆ ಐಎನ್ಎಸ್ ತರ್ಕಶ್, ಪರ್ಷಿಯನ್ ಕೊಲ್ಲಿ ಮತ್ತು ಓಮನ್ ಕೊಲ್ಲಿಯ ಮೂಲಕ ಹಾದು ಹೋಗುವ ಭಾರತದ ವ್ಯಾಪಾರಿ ಹಡಗುಗಳು ಸುರಕ್ಷಿತವಾಗಿ ಸಾಗಿಸುವುದನ್ನು ಖಚಿತಪಡಿಸಿಕೊಳ್ಳಲು ಕಾರ್ಯಾಚರಣೆ ನಡೆಸುತ್ತಿದೆ.

Operation Sankalp
'ಆಪರೇಷನ್ ಸಂಕಲ್ಪ
author img

By

Published : Jul 14, 2021, 1:13 PM IST

ನವದೆಹಲಿ: ಆಪರೇಷನ್ ಸಂಕಲ್ಪ ಅಡಿ, ಭಾರತೀಯ ನೌಕಾಪಡೆಯ ಯುದ್ಧನೌಕೆ ಐಎನ್ಎಸ್ ತರ್ಕಶ್ ತನ್ನ ಮೆರೈನ್ ಕಮಾಂಡೋಗಳೊಂದಿಗೆ ಪರ್ಷಿಯನ್ ಕೊಲ್ಲಿ ಮತ್ತು ಒಮನ್ ಕೊಲ್ಲಿಯ ಮೂಲಕ ಹಾದು ಹೋಗುವ ಭಾರತದ ವ್ಯಾಪಾರಿ ಹಡಗುಗಳು ಸುರಕ್ಷಿತವಾಗಿ ಸಾಗಿಸುವುದನ್ನು ಖಚಿತಪಡಿಸಿಕೊಳ್ಳಲು ಕಾರ್ಯಾಚರಣೆ ನಡೆಸುತ್ತಿದೆ.

ಅರೇಬಿಯನ್ ಕೊಲ್ಲಿ ಮತ್ತು ಒಮನ್ ಕೊಲ್ಲಿಯಲ್ಲಿ ಈವರೆಗೆ 23 ಯುದ್ಧನೌಕೆಗಳನ್ನು ನಿಯೋಜಿಸಲಾಗಿದ್ದು, ಈ ಪ್ರದೇಶದ ಮೂಲಕ ಸಾಗುತ್ತಿರುವ ಭಾರತೀಯ ಧ್ವಜದ ವ್ಯಾಪಾರಿ ಹಡಗುಗಳಿಗೆ ಸುರಕ್ಷಿತ ಮಾರ್ಗ ಒದಗಿಸಲಾಗಿದೆ. ವ್ಯಾಪಾರಿ ಹಡಗುಗಳನ್ನು ರಕ್ಷಿಸಲು, ಕೊಲ್ಲಿ ಪ್ರದೇಶದಲ್ಲಿ ಮತ್ತು ಹಾರ್ಮುಜ್ ಜಲಸಂಧಿಯ ಮೂಲಕ ಸುರಕ್ಷಿತ ಮಾರ್ಗವನ್ನು ಖಚಿತಪಡಿಸಿಕೊಳ್ಳಲು 2019ರ ಜೂನ್‌ನಲ್ಲಿ ಅರೇಬಿಯನ್ ಕೊಲ್ಲಿ ಮತ್ತು ಒಮನ್ ಕೊಲ್ಲಿಯಲ್ಲಿ ‘ಆಪರೇಷನ್ ಸಂಕಲ್ಪ’ ಪ್ರಾರಂಭ ಮಾಡಲಾಗಿದೆ.

  • Under Operation Sankalp, Indian Navy Warship INS Tarkash carries out drills with its Marine Commandos to ensure safe passage of India's merchant vessels passing through the Persian Gulf and the Gulf of Oman. pic.twitter.com/zbfSlNZsCV

    — ANI (@ANI) July 14, 2021 " class="align-text-top noRightClick twitterSection" data=" ">

ಇರಾನ್ ಮತ್ತು ಯುಎಸ್ ನಡುವೆ ಹೆಚ್ಚಿದ ಉದ್ವಿಗ್ನತೆಯ ಸಂದರ್ಭದಲ್ಲಿ, ಜೂನ್ 13, 2019ರಂದು ಓಮನ್ ಕೊಲ್ಲಿಯಲ್ಲಿ ಎರಡು ತೈಲ ಟ್ಯಾಂಕರ್‌ಗಳು ಸ್ಫೋಟಗೊಂಡು ಅಪಾರ ಪ್ರಮಾಣದಲ್ಲಿ ಹಾನಿಯಾಗಿತ್ತು. ಈ ಬಳಿಕ ಯುದ್ಧನೌಕೆಗಳನ್ನು ನಿಯೋಜಿಸಲಾಯಿತು. ಕೊಲ್ಲಿ ಪ್ರದೇಶದಲ್ಲಿನ ದಾಳಿಯು ಸಮುದ್ರದಿಂದ ಹರಡುವ ವ್ಯಾಪಾರದ ದುರ್ಬಲತೆ ಎತ್ತಿ ತೋರಿಸಿದ ನಂತರ ಈ ಕಾರ್ಯಾಚರಣೆ ಪ್ರಾರಂಭವಾಗಿದೆ.

ಅಂದಿನಿಂದ, ಭಾರತೀಯ ನೌಕಾಪಡೆ ಹಡಗನ್ನು 2019ರ ಜೂನ್‌ನಿಂದ ವಾಯುವ್ಯ ಅರೇಬಿಯನ್ ಸಮುದ್ರ, ಒಮನ್ ಕೊಲ್ಲಿ ಮತ್ತು ಪರ್ಷಿಯನ್ ಕೊಲ್ಲಿಯಲ್ಲಿ ನಿರಂತರವಾಗಿ ನಿಯೋಜಿಸಲಾಗಿದ್ದು, ಭಾರತೀಯ ಸಮುದ್ರ ಸಮುದಾಯದಲ್ಲಿ ಉಪಸ್ಥಿತಿ, ವಿಶ್ವಾಸ ಮೂಡಿಸಲು ಮತ್ತು ಭಾರತೀಯ ಧ್ವಜ ಹೊಂದಿರುವ ವ್ಯಾಪಾರಿ ಹಡಗುಗಳಿಗೆ ನೆರವು ನೀಡಲು ಇದು ಸಹಾಯಕವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.