ಪ್ರಯಾಗರಾಜ್: ಫೆಬ್ರವರಿ 24ರಂದು ಉಮೇಶ್ ಪಾಲ್ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದ ಪ್ರಮುಖ ಆರೋಪಿಗಳಲ್ಲಿ ಒಬ್ಬನನ್ನು ಪೊಲೀಸರು ಸೋಮವಾರ ಎನ್‌ಕೌಂಟರ್‌ನಲ್ಲಿ ಕೊಂದು ಹಾಕಿದ್ದಾರೆ. ಪೊಲೀಸ್ ಎನ್‌ಕೌಂಟರ್‌ನಲ್ಲಿ ಹತರಾದ ಶೂಟರ್‌ನ ಹೆಸರು ವಿಜಯ್ ಚೌಧರಿ ಅಲಿಯಾಸ್ ಉಸ್ಮಾನ್.
ವಿಜಯ್ ಚೌಧರಿ ಅದೇ ಶೂಟರ್ ಎಂದು ಹೇಳಲಾಗಿದೆ. ಘಟನೆಯಲ್ಲಿ ಸ್ಥಳಕ್ಕಾಗಮಿಸಿದ ಉಮೇಶ್ ಪಾಲ್ ಮೇಲೆ ಮೊದಲು ಪಿಸ್ತೂಲಿನಿಂದ ಗುಂಡು ಹಾರಿಸಿದ್ದಾನೆ. ಅಷ್ಟೇ ಅಲ್ಲ, ಉಮೇಶ್ ಪಾಲ್ ಜೊತೆಗೆ ಉಸ್ಮಾನ್ ಕೂಡ ಸಂದೀಪ್ ನಿಶಾದ್ ಎಂಬ ಕಾನ್ ಸ್ಟೇಬಲ್ ಮೇಲೆಯೂ ಗುಂಡು ಹಾರಿಸಿದ್ದನು. ಘಟನೆಯಲ್ಲಿ ಭಾಗಿಯಾಗಿರುವ ಉಸ್ಮಾನ್‌ಗೆ ಪತ್ತೆಗಾಗಿ 50,000 ರೂಪಾಯಿ ಬಹುಮಾನವನ್ನೂ ಪೊಲೀಸರು ಘೋಷಿಸಿದ್ದರು. ಕೌಂಧಿಯಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹೆದ್ದಾರಿ ಬದಿಯಲ್ಲಿ ಪೊಲೀಸರು ಮತ್ತು ಶೂಟರ್ ನಡುವೆ ಎನ್‌ಕೌಂಟರ್ ನಡೆದಿದೆ.
ಏನು ಹೇಳುತ್ತೆ ಪೊಲೀಸ್ ಮಾಹಿತಿ?: ಸಿಕ್ಕಿರುವ ಮಾಹಿತಿ ಪ್ರಕಾರ, ಉಮೇಶ್ ಪಾಲ್ ಹತ್ಯೆ ಪ್ರಕರಣದ ಪ್ರಮುಖ ಶೂಟರ್ ಉಸ್ಮಾನ್ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದರು. ಒಂದು ವಾರದಿಂದ ಕೌಂಡಿಯಾರ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪೊಲೀಸರು ಬಿರುಸಿನ ಕಾರ್ಯಾಚರಣೆ ನಡೆಸಿದ್ದರು. ಅದೇ ವೇಳೆ ವಿಜಯ್ ಚೌಧರಿ ಅಲಿಯಾಸ್ ಉಸ್ಮಾನ್ ಪರಾರಿಯಾಗಲು ಯತ್ನಿಸುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಇದರ ನಂತರ, ಪೊಲೀಸರು ಮತ್ತು ಅಪರಾಧ ವಿಭಾಗದ ತಂಡವು ಇಡೀ ಪ್ರದೇಶದಲ್ಲಿ ಸುತ್ತುವರೆದು, ಹೆಚ್ಚವರಿಯಾಗಿ ಗಸ್ತು ತಿರುಗಲು ಪ್ರಾರಂಭಿಸಿದ್ದರು.
ಅದೇ ವೇಳೆಗೆ ಪೊಲೀಸರು ಉಸ್ಮಾನ್‌ಗೆ ಮುಖಾಮುಖಿಯಾದರು. ಇದಾದ ಬಳಿಕ ಪೊಲೀಸರನ್ನು ಕಂಡ ಉಸ್ಮಾನ್ ಓಡಲಾರಂಭಿಸಿದ. ಪೊಲೀಸರು ಆತನನ್ನು ಬೆನ್ನಟ್ಟಿದಾಗ ಪೊಲೀಸ್ ತಂಡವು ಆತನ ಮೇಲೆ ಗುಂಡು ಹಾರಿಸಿದೆ. ಇದರ ನಂತರ, ಪೊಲೀಸರು ಎನ್ಕಂಟರ್ನಲ್ಲಿ ವಿಜಯ್ ಚೌಧರಿ ಕೊಂದು ಹಾಕಿದ್ದಾರೆ. ಆದರೆ, ಆತನ ಸಹಚರನೊಬ್ಬ ಪರಾರಿಯಾಗಿದ್ದಾನೆ. ಉಸ್ಮಾನ್ ಅಲಿಯಾಸ್ ವಿಜಯ್ ಚೌಧರಿ ಕೌಂಧಿಯಾರ ಪೊಲೀಸ್ ಠಾಣೆ ವ್ಯಾಪ್ತಿಯ ಅಮೋಖರ್ ಪ್ರದೇಶದ ನಿವಾಸಿಯಾಗಿದ್ದ. ಪ್ರಾಥಮಿಕ ಮಾಹಿತಿ ಪ್ರಕಾರ ಉಸ್ಮಾನ್ ವಿರುದ್ಧ ಹಲವು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ.
ಅತೀಕ್ ಗ್ಯಾಂಗ್‌ಗೆ ಸೇರಿದ ನಂತರ ಉಸ್ಮಾನ್‌ಗೆ ಹೆಸರು ಬಂದಿದೆ: ವಿಜಯ್ ಚೌಧರಿ ಕೌಂಧಿಯಾರ ಪ್ರದೇಶದ ನಿವಾಸಿಯಾಗಿದ್ದು, ಬಾಲ್ಯದಿಂದಲೂ ಕ್ರಿಮಿನಲ್ ಜನರೊಂದಿಗೆ ವಾಸಿಸಲು ಇಷ್ಟಪಡುತ್ತಿದ್ದ. ಇದಕ್ಕೂ ಮುನ್ನ ಉಸ್ಮಾನ್ ಕ್ರಿಮಿನಲ್ ಪ್ರಕರಣದಲ್ಲಿ ಜೈಲಿಗೆ ಹೋಗಿದ್ದ. ಉಸ್ಮಾನ್ ಜರಾಯಮ್ ಜಗತ್ತಿನಲ್ಲಿ ದೊಡ್ಡ ಹೆಸರು ಗಳಿಸಲು ಬಯಸಿದ್ದ. ಈ ಕಾರಣಕ್ಕಾಗಿ ಆತ ಅತೀಕ್ ಗ್ಯಾಂಗ್ ನ ಕಾರ್ಯಕರ್ತರ ಸಂಪರ್ಕಕ್ಕೆ ಬಂದಿದ್ದ. ಅತೀಕ್ ಗ್ಯಾಂಗ್‌ಗೆ ಹತ್ತಿರವಾದ ನಂತರವೇ ಅವನ ಹೆಸರು ಉಸ್ಮಾನ್ ಎಂದು ಪ್ರಸಿದ್ಧವಾಗಲು ಪ್ರಾರಂಭಿಸಿತು.
ತನ್ನ ಪ್ರಭಾವವನ್ನು ಹೆಚ್ಚಿಸಿಕೊಳ್ಳಲು ವಿಜಯ್ ಚೌಧರಿ ತನ್ನ ಹೆಸರಿನ ಮುಂದೆ ಉಸ್ಮಾನ್ ಎಂಬ ಹೆಸರನ್ನು ಸೇರಿಸಿಕೊಂಡಿದ್ದ ಎನ್ನಲಾಗಿದೆ. ಆದರೆ, ಎನ್‌ಕೌಂಟರ್‌ನಲ್ಲಿ ಹತನಾದ ದುಷ್ಕರ್ಮಿಯ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದರು. ಇದಾದ ಬಳಿಕ ಎನ್‌ಕೌಂಟರ್‌ನಲ್ಲಿ ಹತನಾದ ಉಸ್ಮಾನ್ ಬಗ್ಗೆ ಪೊಲೀಸರು ವಿವರವಾದ ಮಾಹಿತಿ ಕಲೆಹಾಕಿದ್ದರು.
ಉಮೇಶ್ ಪಾಲ್ ಹತ್ಯೆ ಪ್ರಕರಣದಲ್ಲಿ ಎರಡನೇ ಎನ್‌ಕೌಂಟರ್: ಉಮೇಶ್ ಪಾಲ್ ಹತ್ಯೆ ಪ್ರಕರಣದಲ್ಲಿ ಪ್ರಯಾಗ್‌ರಾಜ್ ಪೊಲೀಸರು ಸೋಮವಾರ ನಡೆದ ಎನ್‌ಕೌಂಟರ್‌ನಲ್ಲಿ ಮತ್ತೊಬ್ಬ ಕ್ರಿಮಿನಲ್‌ನನ್ನು ಹತ್ಯೆ ಮಾಡಿದ್ದಾರೆ. ಈ ಹಿಂದೆ ಫೆಬ್ರವರಿ 27 ರಂದು ಪೊಲೀಸರು ಈ ಶೂಟೌಟ್‌ನಲ್ಲಿ ಭಾಗಿಯಾಗಿದ್ದ ಅರ್ಬಾಜ್ ಎಂಬ ಕ್ರಿಮಿನಲ್ ಅನ್ನು ಕೊಂದಿದ್ದರು. ಆದರೆ, ಈ ಸಂಚು ರೂಪಿಸಿದ್ದ ಸದಾಕತ್‌ನನ್ನು ಈಗಾಗಲೇ ಪೊಲೀಸರು ಬಂಧಿಸಿ ನಂತರ ಜೈಲಿಗೆ ಕಳುಹಿಸಿದ್ದಾರೆ.
ಇದಲ್ಲದೇ ಘಟನೆಯಲ್ಲಿ ಭಾಗಿಯಾದ ಅಸದ್ ಅಹ್ಮದ್, ಗುಡ್ಡು ಮುಸ್ಲಿಂ, ಅರ್ಮಾನ್, ಗುಲಾಮ್ ಮತ್ತು ಸಬೀರ್ ಮೇಲೆ ಪೊಲೀಸರು 2.5 ಲಕ್ಷ ರೂಪಾಯಿ ಬಹುಮಾನ ಘೋಷಿಸಿದ್ದಾರೆ. 10 ಪೊಲೀಸ್ ತಂಡಗಳು ಮತ್ತು ಯುಪಿ ಎಸ್‌ಟಿಎಫ್ ತಂಡವೂ ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿತ್ತು.
ಇದನ್ನೂ ಓದಿ: ಕುಕ್ಕರ್ ಬಾಂಬ್ ಬ್ಲಾಸ್ಟ್ ಕೇಸ್: ಎರಡೂವರೆ ತಿಂಗಳ ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಶಂಕಿತ ಉಗ್ರ