ETV Bharat / bharat

ಉಮೇಶ್ ಪಾಲ್ ಗನ್‌ಮ್ಯಾನ್‌ ಸ್ಥಿತಿ ಗಂಭೀರ: ಗ್ರೀನ್​ ಕಾರಿಡಾರ್​ ಮೂಲಕ ಲಖನೌ ಆಸ್ಪತ್ರೆಗೆ ಶಿಫ್ಟ್​

ವಕೀಲ ಉಮೇಶ್​ ಪಾಲ್​ ಹತ್ಯೆಯನ್ನು ಖಂಡಿಸಿ ವಕೀಲರು ನಿನ್ನೆ ಸಭೆಯಲ್ಲಿ ನಿರ್ಧರಿಸಿದಂತೆ ಇಂದು ನ್ಯಾಯಾಲಯಕ್ಕೆ ಗೈರಾಗಿದ್ದರು.

author img

By

Published : Feb 27, 2023, 4:09 PM IST

Shooting attack on Umesh Pal, two gunmen
ಉಮೇಶ್​ ಪಾಲ್​, ಇಬ್ಬರು ಗನ್​ಮ್ಯಾನ್​ಗಳ ಮೇಲೆ ಗುಂಡಿನ ದಾಳಿ

ಲಖನೌ: ಶಾಸಕ ರಾಜು ಪಾಲ್ ಹತ್ಯೆ ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದ ವಕೀಲ ಉಮೇಶ್ ಪಾಲ್ ಅವರ ಇಬ್ಬರು ಗನ್​ಮ್ಯಾನ್​ಗಳಲ್ಲಿ ಒಬ್ಬರಾದ ರಾಘವೇಂದ್ರ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿದ್ದು, ಅವರನ್ನು ಲಖನೌನ ಸಂಜಯ್​ ಗಾಂಧಿ ವೈದ್ಯಕೀಯ ವಿಜ್ಞಾನಗಳ ಸ್ನಾತಕೋತ್ತರ ಸಂಸ್ಥೆಗೆ (ಪಿಜಿಐ) ಸಾಗಿಸಲು ಇಂದು ಸುಮಾರು 230 ಕಿಮೀ ಗ್ರೀನ್​ ಕಾರಿಡಾರ್ ವ್ಯವಸ್ಥೆಯನ್ನು ಮಾಡಲಾಯಿತು.

ಶುಕ್ರವಾರ ಪ್ರಯಾಗ್​ರಾಜ್​ನ ಸುಲೇಮ್​ ಸರಾಯ್​ ಪ್ರದೇಶದಲ್ಲಿ ಮನೆಗೆ ತೆರಳುತ್ತಿದ್ದ ಉಮೇಶ್ ಪಾಲ್ ಹಾಗೂ ಅವರ ಇಬ್ಬರು ಗನ್​ಮ್ಯಾನ್​ಗಳ ಮೇಲೆ ಗುಂಡಿನ ದಾಳಿ ನಡೆದಿತ್ತು. ದಾಳಿಯಲ್ಲಿ ವಕೀಲ್ ಉಮೇಶ್​ ಪಾಲ್​ ಹಾಗೂ ಉಮೇಶ್​ ಪಾಲ್​ ಅವರನ್ನು ರಕ್ಷಿಸಲು ಪ್ರಯತ್ನಪಟ್ಟ ಗನ್​ಮ್ಯಾನ್​ ಸಂದೀಪ್​ ನಿಶಾದ್​ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಇನ್ನೊಬ್ಬ ಗನ್​ಮ್ಯಾನ್​ ರಾಘವೇಂದ್ರ ಅವರು ಗಂಭೀರವಾಗಿ ಗಾಯಗೊಂಡಿದ್ದರು.

ಅಪತರಿಚಿತ ದಾಳಿಕೋರರು ಉಮೇಶ್ ಮತ್ತು ಅವರ ಇಬ್ಬರು ಗನ್​ಮ್ಯಾನ್​ಗಳ ಮೇಲೆ ಹಲವು ಸುತ್ತು ಗುಂಡು ಹಾರಿಸಿರುವುದು ಮಾತ್ರವಲ್ಲದೆ ಬಾಂಬ್‌ಗಳನ್ನು ಎಸೆದಿದ್ದರು ಎಂದು ವರದಿಯಾಗಿದೆ. ಇದರಿಂದಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಒಬ್ಬರು ಗಂಭೀರವಾಗಿ ಗಾಯಗೊಂಡು, ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿದ್ದು, ವೈದ್ಯರ ಸಲಹೆ ಮೇರೆ ಪ್ರಯಾಗರಾಜ್​ ಆಸ್ಪತ್ರೆಯಿಂದ ಲಖನೌ ಆಸ್ಪತ್ರೆಗೆ ವರ್ಗಾಯಿಸಲಾಯಿತು. ವೈದ್ಯರ ನಿಕಟ ಮೇಲ್ವಿಚಾರಣೆಯಲ್ಲಿ ವಿಶೇಷ ಆಂಬ್ಯುಲೆನ್ಸ್‌ನಲ್ಲಿ ಅವರನ್ನು ಲಖನೌಗೆ ಕರೆದೊಯ್ಯಲು ಗ್ರೀನ್​ ಕಾರಿಡಾರ್ ವ್ಯವಸ್ಥೆ ಮಾಡಲಾಯಿತು.

ಅಧಿಕೃತ ಮೂಲಗಳ ಪ್ರಕಾರ, ಪ್ರಯಾಗ್‌ರಾಜ್‌ನಿಂದ ಲಖನೌವರೆಗೆ ಸುಮಾರು 230 ಕಿಲೋಮೀಟರ್‌ಗಳವರೆಗೆ ಗ್ರೀನ್​ ಕಾರಿಡಾರ್ ವ್ಯವಸ್ಥೆ ಮಾಡಲಾಗಿತ್ತು. ಪೊಲೀಸ್ ವಾಹನಗಳ ಬೆಂಗಾವಲಿನಲ್ಲಿ ಬಂದಿದ್ದ ಆಂಬ್ಯುಲೆನ್ಸ್‌ನಲ್ಲಿ ರಾಘವೇಂದ್ರ ಅವರೊಂದಿಗೆ ನಾಲ್ವರು ವೈದ್ಯರು ಮತ್ತು ಮೂವರು ಅರೆವೈದ್ಯಕೀಯ ಸಿಬ್ಬಂದಿಯೂ ತೆರಳಿದ್ದಾರೆ. ಗಾಯಗೊಂಡ ಗನ್​ಮ್ಯಾನ್​ ಅನ್ನು ಹೆಚ್ಚಿನ ಸುಧಾರಿತ ಚಿಕಿತ್ಸೆಗಾಗಿ ಪಿಜಿಐನಲ್ಲಿನ ಐಸಿಯು ವಾರ್ಡ್‌ಗೆ ಶಿಫ್ಟ್​ ಮಾಡಲಾಯಿತು.

ವಕೀಲರ ಪ್ರತಿಭಟನೆ: ಉಮೇಶ್ ಪಾಲ್ ಹತ್ಯೆ ಖಂಡಿಸಿ ರಾಜಧಾನಿಯ ಅಧೀನ ನ್ಯಾಯಾಲಯಗಳ ವಕೀಲರು ಸೋಮವಾರ ನ್ಯಾಯಾಲಯದ ಕಲಾಪಗಳಿಗೆ ಗೈರಾಗಿದ್ದಾರೆ. ಭಾನುವಾರ ಸಂಜೆ ಲಖನೌ ಬಾರ್ ಅಸೋಸಿಯೇಶನ್‌ನ ಕಾರ್ಯಕಾರಿ ಮಂಡಳಿಯ ಪೂರ್ವಸಿದ್ಧತೆಯಿಲ್ಲದ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿತ್ತು.

ಮೂಲಗಳ ಪ್ರಕಾರ, ಶುಕ್ರವಾರ ಶೂಟೌಟ್ ವೇಳೆ ರಾಘವೇಂದ್ರ ಅವರಿಗೆ ಮೂರು ಗುಂಡುಗಳು ತಗುಲಿವೆ. ಗುಂಡಿನ ದಾಳಿ ನಡೆದ ಸ್ಥಳದಿಂದ ಅವರನ್ನು ಮೊದಲು ಪ್ರಯಾಗರಾಜ್‌ನ ಎಸ್‌ಆರ್‌ಎನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಅವರ ಸ್ಥಿತಿ ಗಂಭೀರವಾದ ಕಾರಣ, ವೈದ್ಯರೊಂದಿಗೆ ಚರ್ಚಿಸಿದ ನಂತರ, ಅವರನ್ನು ಪಿಜಿಐ ಆಸ್ಪತ್ರೆಗೆ ಸ್ಥಳಾಂತರಿಸುವ ನಿರ್ಧಾರವನ್ನು ಪೊಲೀಸ್ ಉನ್ನತ ಅಧಿಕಾರಿಗಳು ತೆಗೆದುಕೊಂಡರು.

ವಿಶೇಷ ತಂಡಗಳ ರಚನೆ: ಉಮೇಶ್ ಪಾಲ್ ಹತ್ಯೆಯಲ್ಲಿ ಭಾಗಿಯಾಗಿರುವ ದುಷ್ಕರ್ಮಿಗಳನ್ನು ಬಂಧಿಸಲು ಪೊಲೀಸರನ್ನು ಸೇರಿಸಿ ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಹತ್ತು ತಂಡಗಳನ್ನು ರಚಿಸಲಾಗಿದೆ. ಯುಪಿ ಎಸ್‌ಟಿಎಫ್ ಮುಖ್ಯಸ್ಥ ಅಮಿತಾಬ್ ಯಶ್ ಅವರು ತನಿಖೆಯನ್ನು ನೇರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಶುಕ್ರವಾರ, ಪ್ರಯಾಗ್‌ರಾಜ್‌ನಲ್ಲಿರುವ ಜಿಲ್ಲಾ ನ್ಯಾಯಾಲಯದಿಂದ ಮನೆಗೆ ಹಿಂದಿರುಗುತ್ತಿದ್ದಾಗ ಉಮೇಶ್ ಪಾಲ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಶನಿವಾರ ಡಿಜಿಪಿ ಮತ್ತು ಗೃಹ ಪ್ರಧಾನ ಕಾರ್ಯದರ್ಶಿಗಳಿಗೆ ಸಮನ್ಸ್ ನೀಡಿದ್ದರು. ಬಹುಜನ ಸಮಾಜ ಪಕ್ಷದ ಶಾಸಕ ರಾಜು ಪಾಲ್​ ಅವರನ್ನು 2005 ರಲ್ಲಿ ಹತ್ಯೆ ಮಾಡಲಾಗಿತ್ತು.

ಇದನ್ನೂ ಓದಿ: ಕಾಶ್ಮೀರಿ ಪಂಡಿತ ಸಂಜಯ್​ ಶರ್ಮಾ ಹತ್ಯೆಗೆ ಆಕ್ರೋಶ: ಸ್ಥಳೀಯರಿಂದ ಉಗ್ರರ ವಿರುದ್ಧ ಪ್ರತಿಭಟನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.