ETV Bharat / bharat

ಗಂಗಾ ನದಿ ನಿರ್ವಹಣೆ ಬಗ್ಗೆ ಉಮಾ ಭಾರತಿ ಭಾವನಾತ್ಮಕ ಟ್ವೀಟ್​... ಅಷ್ಟಕ್ಕೂ ಅವರು ಹೇಳಿದ್ದೇನು?

ಗಂಗಾ ನದಿ ನಿರ್ವಹಣೆ ಕುರಿತು ಕೇಂದ್ರದ ಮಾಜಿ ಸಚಿವೆ ಉಮಾ ಭಾರತಿ ಮನಬಿಚ್ಚಿ ಮಾತನಾಡಿದ್ದು, ತನ್ನ ಅನುಭವ ಹಂಚಿಕೊಂಡಿದ್ದಾರೆ.

ಗಂಗಾ ನದಿ ನಿರ್ವಹಣೆ ಬಗ್ಗೆ ಉಮಾ ಭಾರತಿ ಭಾವನಾತ್ಮಕ ಟ್ವೀಟ್​... ಅಷ್ಟಕ್ಕೂ ಅವರು ಹೇಳಿದ್ದೇನು?
uma bharathಗಂಗಾ ನದಿ ನಿರ್ವಹಣೆ ಬಗ್ಗೆ ಉಮಾ ಭಾರತಿ ಭಾವನಾತ್ಮಕ ಟ್ವೀಟ್​... ಅಷ್ಟಕ್ಕೂ ಅವರು ಹೇಳಿದ್ದೇನು?i
author img

By

Published : May 18, 2021, 8:41 PM IST

ನವದೆಹಲಿ: ಕೇಂದ್ರದ ಮಾಜಿ ಸಚಿವೆ ಉಮಾ ಭಾರತಿ ಅವರು ಗಂಗಾ ನದಿ ನಿರ್ವಹಣೆ ಕುರಿತು ಅನುಭವ ಹಂಚಿಕೊಂಡಿದ್ದಾರೆ.

ಮೋದಿ ಸರ್ಕಾರದ ಮೊದಲ ಅವಧಿಯಲ್ಲಿ ಉಮಾಭಾರತಿಯವರಿಗೆ ಗಂಗಾ ಇಲಾಖೆಯ ಹೊಣೆಗಾರಿಕೆ ನೀಡಲಾಯಿತು. ಆದರೆ, 2016ರಲ್ಲಿ ಈ ಸಚಿವಾಲಯದ ಜವಾಬ್ದಾರಿಯನ್ನು ನಿತಿನ್ ಗಡ್ಕರಿ ಅವರಿಗೆ ನೀಡಲಾಯಿತು.

“ನನ್ನಲ್ಲಿ ಕ್ರಿಯಾ ಯೋಜನೆ ಇದೆ. 2014 ರ ಜೂನ್‌ನಿಂದ 2016 ರ ಜುಲೈ ವರೆಗೆ ನನ್ನ ದೇಹದಲ್ಲಿ ರಕ್ತ ಇರಲಿಲ್ಲ, ಗಂಗಾ ಹರಿಯುತ್ತಿತ್ತು. ನಾನು ಹಗಲು ರಾತ್ರಿ ನಡೆಯುವಾಗ ತ್ರಿಭುವನ್‌ನಲ್ಲಿ ಗಂಗೆಯನ್ನು ಮಾತ್ರ ನೋಡುತ್ತಿದ್ದೆ” ಎಂದು ಭಾವುಕರಾಗಿ ಟ್ವೀಟ್​ನಲ್ಲಿ ತಿಳಿಸಿದ್ದಾರೆ.

ಗಂಗಾಕ್ಕೆ ಸಂಬಂಧಿಸಿದ ಪ್ರತಿಯೊಂದು ಸಮಸ್ಯೆಯ ಪರಿಹಾರದ ಮಾಡುತ್ತಾ, ಗಂಗಾ ಲಭ್ಯತೆ , ಪರಿಶುದ್ಧತೆ, ಪ್ರಾಣಿ, ಸಸ್ಯಗಳು, ಗಂಗಾ ಜಲಾನಯನ ಪ್ರದೇಶ, ನದಿಯ ಮುಂಭಾಗ, ಗಂಗೆಯ ಬಗ್ಗೆ ನಾನು ಸಂಪೂರ್ಣವಾಗಿ ತಿಳಿದಿದ್ದೇನೆ. ಐದು ರಾಜ್ಯಗಳ ಮುಖ್ಯ ಕಾರ್ಯದರ್ಶಿ ಸೇರಿದಂತೆ ಗಂಗಾ ಸಂಬಂಧಿತ ಸಚಿವಾಲಯಗಳ ಕಾರ್ಯದರ್ಶಿಗಳ ಗುಂಪನ್ನು ಭಾರತ ಸರ್ಕಾರದ ಕ್ಯಾಬಿನೆಟ್ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಕಾರ್ಯಪಡೆ ರಚಿಸಲಾಯಿತು ಎಂಬ ಬಗ್ಗೆಯೂ ಅವರು ನೆನೆಪಿಸಿಕೊಂಡಿದ್ದಾರೆ.

ಗಂಗಾ ಸ್ವಚ್ಛತೆಗೆ ಶಿಕ್ಷಣ, ಕೃಷಿ, ಪರಿಸರ, ಯುವ, ಆಯುಷ್, ವೈದ್ಯಕೀಯ, ನಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ, ನೈರ್ಮಲ್ಯ, ಹಡಗು, ಇಂಧನ ಮತ್ತು ಪೆಟ್ರೋಲಿಯಂ ರಾಸಾಯನಿಕ ಸಚಿವಾಲಯವು ಈ ಒಪ್ಪಂದಕ್ಕೆ ಸಹಿ ಹಾಕಿತ್ತು ಎಂಬುದನ್ನು ಬರೆದುಕೊಂಡಿದ್ದರು.

ನಂತರ, ಗಡ್ಕರಿಗೆ ಈ ಸಚಿವಾಲಯದ ಜವಾಬ್ದಾರಿಯನ್ನು ನೀಡಿದಾಗ ನಾನು ದುಃಖಿತನಾಗಿಲ್ಲ. ಬದಲಾಗಿ ನನ್ನನ್ನು ಅಲ್ಲಿ ನಡೆಯುತ್ತಿದ್ದ ಸಭೆಗೆ ಆಹ್ವಾನಿಸುತ್ತಿದ್ದರು. ಇದು ಅವರ ಉದಾತ್ತತೆ ಎಂದು ಹೇಳಿದ್ದಾರೆ.

ಆ ಕಾಲದ ತಮ್ಮ ಅನುಭವವನ್ನು ಹಂಚಿಕೊಂಡ ಉಮಾ ಭಾರತಿ, ಆ ಸಮಯದಲ್ಲಿ ನಾನು ಬಿಜೆಪಿ ಸಂಘಟನೆಯಲ್ಲಿ ಜವಾಬ್ದಾರಿ ಪಡೆಯಬೇಕೆಂದು ಬಯಸಿದ್ದೆ ಎಂದು ಬರೆದುಕೊಂಡರು.

ಮೋದಿ ಮತ್ತು ಶಾ ಇಬ್ಬರೂ ಸಂಪುಟದಲ್ಲಿ ಉಳಿಯಬೇಕೆಂದು ಬಯಸಿದ್ದರು. ಆದರೆ, ನಾನು ಬಯಸಲಿಲ್ಲ. ಅದಕ್ಕಾಗಿಯೇ ನಾನು ಒಂದು ವರ್ಷ ಗಂಗೆಯ ಎರಡೂ ಬದಿಗಳಲ್ಲಿ ನಡೆದು ಸಂತರು ಮತ್ತು ಸಮಾಜವನ್ನು ಭೇಟಿಯಾಗಲು ಯೋಜಿಸಿದೆ ಎಂದು ಹೇಳಿದ್ದಾರೆ.

ಪ್ರಧಾನಿ ಮೋದಿ ಅವರ ಮೇಲೆ ನನಗೆ ಸಂಪೂರ್ಣ ನಂಬಿಕೆ ಇದೆ. ಅವರು ಅಲೌಕಿಕ ನಾಯಕ. ಅವರು ಗಂಗಾ ಮತ್ತು ಹಿಮಾಲಯ ಎರಡನ್ನೂ ಉಳಿಸುತ್ತಾರೆ ಎಂಬ ವಿಶ್ವಾಸ ನನಗಿದೆ. ಗಂಗಾ ಕುರಿತು ನಮ್ಮ ಅನುಭವಗಳನ್ನು ನಾನು ಮೋದಿ, ಷಾ ಮತ್ತು ಸಂಘಟನಾ ಸಚಿವ ಬಿ.ಎಲ್.ಸಂತೋಷ್ ಅವರಿಗೆ ಸಾಕ್ಷ್ಯಗಳೊಂದಿಗೆ ಹಂಚಿಕೊಂಡಿದ್ದೇನೆ ಎಂದು ಉಮಾ ಭಾರತಿ ಬರೆದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.