ನವದೆಹಲಿ: ಸುಪ್ರೀಂಕೋರ್ಟ್ ನೂತನ ಮುಖ್ಯ ನಾಯಮೂರ್ತಿಗಳಾಗಿ ನಿಯೋಜಿತರಾಗಿದ್ದ ಉದಯ್ ಉಮೇಶ್ ಲಲಿತ್ ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಷ್ಟ್ರಪತಿ ಭವನದಲ್ಲಿಂದು ಪ್ರಮಾಣ ವಚನ ಬೋಧಿಸಿದರು. ಯು.ಯು. ಲಿಲಿತ್ ಅವರು 49ನೇ ಸಿಜೆಐ ಆಗಿ ಅಧಿಕಾರ ಸ್ವೀಕರಿಸಿದರು. ಯುಯು ಲಲಿತ್ ಅವರು ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ 74 ದಿನಗಳ ಕಾಲ ಕೆಲಸ ನಿರ್ವಹಿಸಲಿದ್ದಾರೆ.
ಇದಕ್ಕೂ ಮೊದಲು ಅವರು ನಿರ್ಗಮಿತ ಸಿಜೆಐ ಎನ್.ವಿ. ರಮಣ ಅವರ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿ, ಸುಪ್ರೀಂಕೋರ್ಟ್ ಮುಂದಿರುವ ಪ್ರಕರಣಗಳನ್ನು ಪಟ್ಟಿ ಮಾಡುವುದು ಮತ್ತು ತುರ್ತು ವಿಷಯಗಳನ್ನು ಕೈಗೆತ್ತಿಕೊಂಡು ಪರಿಹರಿಸುವುದು ನನ್ನ ಮೊದಲ ಆದ್ಯತೆಯಾಗಲಿದೆ ಎಂದು ತಿಳಿಸಿದರು.
-
#WATCH | President Droupadi Murmu administers the oath of Office of the Chief Justice of India to Justice Uday Umesh Lalit at Rashtrapati Bhavan pic.twitter.com/HqayMJDwBB
— ANI (@ANI) August 27, 2022 " class="align-text-top noRightClick twitterSection" data="
">#WATCH | President Droupadi Murmu administers the oath of Office of the Chief Justice of India to Justice Uday Umesh Lalit at Rashtrapati Bhavan pic.twitter.com/HqayMJDwBB
— ANI (@ANI) August 27, 2022#WATCH | President Droupadi Murmu administers the oath of Office of the Chief Justice of India to Justice Uday Umesh Lalit at Rashtrapati Bhavan pic.twitter.com/HqayMJDwBB
— ANI (@ANI) August 27, 2022
ಸ್ಪಷ್ಟತೆಯೊಂದಿಗೆ ಕಾನೂನನ್ನು ರೂಪಿಸುವುದು ಮತ್ತು ಅದನ್ನು ಜಾರಿ ಮಾಡುವುದನ್ನು ನಾನು ನಂಬಿದ್ದೇನೆ. ಇದನ್ನು ಸಾಕಾರ ಮಾಡಲು ವಿಸ್ತೃತ ಪೀಠಗಳನ್ನು ರಚಿಸಬೇಕು. ಇದರಿಂದ ಸಮಸ್ಯೆಗಳು ತಕ್ಷಣವೇ ಪರಿಹಾರ ಕಾಣಲಿವೆ ಎಂದು ಅವರು ತಿಳಿಸಿದರು.
ಗಂಭೀರ ಕೇಸ್ಗಳನ್ನು ವ್ಯವಹರಿಸಲು ಯಾವಾಗಲೂ ಕನಿಷ್ಠ ಒಂದು ಸಾಂವಿಧಾನಿಕ ಪೀಠವನ್ನು ವರ್ಷವಿಡೀ ಕಾರ್ಯನಿರ್ವಹಿಸುಂತೆ ಮಾಡಲು ಶ್ರಮಿಸಲಾಗುವುದು ಎಂದೂ ಅವರು ಇದೇ ವೇಳೆ ತಿಳಿಸಿದರು.
ಓದಿ: ರಷ್ಯಾದ ತೈಲ ಬೆಲೆ ಮಿತಿಗೊಳಿಸುವ ಪ್ರಸ್ತಾವನೆಗೆ ಭಾರತ ಆಸಕ್ತಿ..ಅಮೆರಿಕ ಅಧಿಕಾರಿ