ETV Bharat / bharat

ಜಿಪಿಎಸ್​ ಸೂಚಿಸಿದಂತೆ ಹೋಗಿ ಪೆರಿಯಾರ್​ ನದಿಗೆ ಬಿದ್ದ ಕಾರು; ಕೇರಳದ ಇಬ್ಬರು ಯುವ ವೈದ್ಯರು ನೀರುಪಾಲು - Young Doctors died in kerala

ಗೊತ್ತಿಲ್ಲದ ದಾರಿಯಲ್ಲಿ ಸಾಗಲು ಜಿಪಿಎಸ್​ ಮೊರೆ ಹೋಗಿ ಐವರಿದ್ದ ಕಾರು ಪೆರಿಯಾರ್​ ನದಿಗೆ ಬಿದ್ದಿದ್ದು, ಇಬ್ಬರು ಸಾವಿಗೀಡಾಗಿದ್ದಾರೆ. ಘಟನೆ ಕೇರಳದ ಎರ್ನಾಕುಲಂನಲ್ಲಿ ಭಾನುವಾರ ನಡೆದಿದೆ.

ಪೆರಿಯಾರ್​ ನದಿಗೆ ಬಿದ್ದ ಕಾರು
ಪೆರಿಯಾರ್​ ನದಿಗೆ ಬಿದ್ದ ಕಾರು
author img

By ETV Bharat Karnataka Team

Published : Oct 2, 2023, 9:47 PM IST

ಎರ್ನಾಕುಲಂ (ಕೇರಳ): ಇಂದಿನ ಆಧುನಿಕ ಕಾಲದಲ್ಲಿ ತಂತ್ರಜ್ಞಾನವೇ ನಮಗೆ ಮೂಲಾಧಾರ. ಅದು ಇಲ್ಲದೇ, ನಮ್ಮ ಜೀವನ ನಡೆಯದು ಎಂಬುವಷ್ಟರ ಮಟ್ಟಿಗೆ ಅದರೊಂದಿಗೆ ಮಿಳಿತವಾಗಿದ್ದೇವೆ. ತಂತ್ರಜ್ಞಾನ ಮಾಡುವ ಉಪಕಾರದಷ್ಟೇ, ಅಪಾಯವೂ ಉಂಟು ಮಾಡಬಲ್ಲದು ಎಂಬುದನ್ನು ಈ ಘಟನೆ ಸಾಕ್ಷೀಕರಿಸುತ್ತದೆ. ಗೊತ್ತಿಲ್ಲದ ದಾರಿಯಲ್ಲಿ ಸಾಗಲು ಜಿಪಿಎಸ್​ ಬಳಸಿ ಕಾರೊಂದು ನದಿಗೆ ಬಿದ್ದಿದ್ದು, ಇಬ್ಬರು ಯುವ ವೈದ್ಯರು ಸಾವಿಗೀಡಾಗಿದ್ದಾರೆ. ಇನ್ನೂ ಮೂವರು ಗಾಯಗೊಂಡು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕೇರಳದ ಎರ್ನಾಕುಲಂನಲ್ಲಿ ಭಾನುವಾರ ಈ ದುರಂತ ಸಂಭವಿಸಿದೆ. ಜಿಪಿಎಸ್​ ಹಾಕಿಕೊಂಡು ಕಾರು ಚಲಾಯಿಸುತ್ತಿದ್ದಾಗ ತಪ್ಪಾಗಿ ದಾರಿ ತೋರಿಸಿದ್ದು, ಕಾರು ನದಿ ಸೇರಿದೆ. ಇದರಿಂದ ವೈದ್ಯರು ಸೇರಿ ಐವರಿದ್ದ ಕಾರು ನೀರಿನಲ್ಲಿ ಮುಳುಗಿದ್ದು, ಸ್ಥಳೀಯರ ರಕ್ಷಣೆಯಲ್ಲಿ ಮೂವರು ಬದುಕುಳಿದು ಇಬ್ಬರು ಸಾವಿಗೀಡಾಗಿದ್ದಾರೆ. ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಚಾತುರ್ಯ ನಡೆದಿದ್ದು ಹೀಗೆ: ಎರ್ನಾಕುಲಂ ಗೋತುರುಗು ಎಂಬಲ್ಲಿ ಇಬ್ಬರು ವೈದ್ಯರಾದ ಅಜ್ಮಲ್ ಮತ್ತು ಅದ್ವೈತ್ ಅವರಿದ್ದ ಕಾರು ಸಾಗುತ್ತಿತ್ತು. ಜನ್ಮದಿನದ ನಿಮಿತ್ತ ಅವರು ಶಾಪಿಂಗ್​ ಮುಗಿಸಿಕೊಂಡು ಮನೆಗೆ ವಾಪಸ್​ ತೆರಳುತ್ತಿದ್ದರು. ಜೋರು ಮಳೆ ಬರುತ್ತಿದ್ದ ಕಾರಣ, ದಾರಿ ಅಸ್ಪಷ್ಟವಾಗಿ ಕಾಣುತ್ತಿತ್ತು. ಇದೇ ವೇಳೆ ದಾರಿ ಗುರುತು ಸಿಗದೇ ಜಿಪಿಎಸ್​ ಆನ್​ ಮಾಡಿದ್ದಾರೆ. ಗೋತುರುಗು ಎಂಬಲ್ಲಿ ಸಾಗುತ್ತಿದ್ದಾಗ ಕಾರು ಅಚಾನಕ್ಕಾಗಿ ಆಗಿ ಪೆರಿಯಾರ್ ನದಿಗೆ ಉರುಳಿಬಿದ್ದಿದೆ.

ಅಪಘಾತವನ್ನು ಕಂಡ ಸ್ಥಳೀಯರೊಬ್ಬರು ಪೊಲೀಸ್​ ಠಾಣೆಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಬಳಿಕ ಅಲ್ಲಿದ್ದ ಗ್ರಾಮಸ್ಥರು ತಕ್ಷಣವೇ ನದಿಯಲ್ಲಿ ಬಿದ್ದವರ ಸಹಾಯಕ್ಕೆ ಧಾವಿಸಿದ್ದಾರೆ. ಅಷ್ಟೊತ್ತಿಗಾಗಲೇ ಕಾರು ನೀರಿನಲ್ಲಿ ಮುಳುಗಿದೆ. ಇದರಿಂದ ಯುವ ವೈದ್ಯರಾದ ಅಜ್ಮಲ್ ಮತ್ತು ಅದ್ವೈತ್ ಸಾವಿಗೀಡಾದರು. ಕಾರಲ್ಲಿದ್ದ ಐವರ ಪೈಕಿ ಮೂವರನ್ನು ಜನರು ಹೇಗೋ ರಕ್ಷಣೆ ಮಾಡಿದ್ದಾರೆ.

ಜಿಪಿಎಸ್​ ಸಹಾಯದಿಂದ ಪ್ರಯಾಣಿಸುತ್ತಿದ್ದಾಗ ಮಾರ್ಗ ತಪ್ಪಾಗಿ ಕಾರು ನದಿಗೆ ಬಿದ್ದಿದೆ. ದಾರಿಯ ಪರಿಚಯವಿಲ್ಲದ ಕಾರಣ ಮ್ಯಾಪ್​ ಸೂಚಿಸಿದಂತೆ ಅವರು ಸಾಗುತ್ತಿದ್ದಾಗ ಅವಘಡ ಸಂಭವಿಸಿದೆ. ಆಯ್ದ ಮಾರ್ಗವನ್ನು ಬಿಟ್ಟು, ಎದುರು ದಿಕ್ಕಿನಲ್ಲಿ ಅವರು ಸಂಚರಿಸಬೇಕಾಗಿತ್ತು. ದಾರಿ ಗೊತ್ತಿಲ್ಲದ ದುರಂತ ಸಂಭವಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಭಾರಿ ಮಳೆಯಿಂದಾಗಿ ನದಿ ನೀರಿನಲ್ಲಿ ಬಿದ್ದ ಕಾರನ್ನು ಮೇಲೆತ್ತಲು ಅಗ್ನಿಶಾಮಕ, ರಕ್ಷಣಾ ಸಿಬ್ಬಂದಿ ಮತ್ತು ಸ್ಥಳೀಯರು ಎರಡು ಗಂಟೆಗಳ ಕಾಲ ಹರಸಾಹಪಟ್ಟರು ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಡೋಲಿಯಲ್ಲಿ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಮಗುವಿಗೆ ಜನ್ಮ ನೀಡಿದ ಮಹಿಳೆ; ಮುಖ್ಯಮಂತ್ರಿ ದತ್ತು ಪಡೆದ ಗ್ರಾಮದಲ್ಲಿ ಘಟನೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.