ಸೂರತ್(ಗುಜರಾತ್): ಅಪಾರ್ಟ್ಮೆಂಟ್ವೊಂದರ 8ನೇ ಮಹಡಿಯಲ್ಲಿ ಆಟವಾಡುತ್ತಿದ್ದ ಎರಡು ವರ್ಷದ ಮಗುವೊಂದು ಅಲ್ಲೇ ಇದ್ದ ಗ್ರಿಲ್ಸ್ ಮೇಲೆ ಹತ್ತಿ ಕೆಳಗೆ ಇಣುಕಲು ಯತ್ನಿಸುತ್ತಿದ್ದಾಗ ಆಯತಪ್ಪಿ ಕೆಳಕ್ಕೆ ಬಿದ್ದ ಆಘಾತಕಾರಿ ಘಟನೆ ಸೂರತ್‌ನಲ್ಲಿ ನಡೆದಿದೆ.
ಕತರ್ಗಾಮ್ ಪ್ರದೇಶದ ಲಕ್ಷ್ಮಿ ರೆಸಿಡೆನ್ಸಿಯ ಎಂಟನೇ ಮಹಡಿಯಲ್ಲಿ ಎರಡು ವರ್ಷದ ಬಾಲಕನೊಬ್ಬ ಪೋಷಕರಿಗೆ ತಿಳಿಸದೇ ಫ್ಲ್ಯಾಟ್‌ನಿಂದ ಹೊರಬಂದು ಪಕ್ಕದಲ್ಲಿದ್ದ ಕಬ್ಬಿಣದ ಸರಳಿನ ಮೇಲೆ ಹತ್ತಲು ಮುಂದಾಗಿದ್ದಾನೆ. ಈ ವೇಳೆ ಆಯತಪ್ಪಿ ಕೆಳಗೆ ಬಿದ್ದಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಇನ್ನು ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಕತರ್ಗಾಮ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.