ETV Bharat / bharat

ಗಂಡ - ಹೆಂಡತಿ ಮತ್ತು ಅವಳು: ಒಬ್ಬ ಪುರುಷನಿಗಾಗಿ ಇಬ್ಬರು ಮಹಿಳೆಯರ ಕಿತ್ತಾಟ.. ರಸ್ತೆಯಲ್ಲೇ ರಂಪಾಟ - ಗಂಡ ಹೆಂಡತಿ ಮತ್ತು ಅವಳು

ಜಾರ್ಖಂಡ್​ನ ಕೊಡರ್ಮಾ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ಪ್ರೇಮ ವಿವಾಹವಾಗಿದ್ದರೂ ಮತ್ತೊಬ್ಬ ಮಹಿಳೆಯನ್ನು ಮದುವೆಯಾದ ಆರೋಪ ಕೇಳಿ ಬಂದಿದೆ. ಇದೇ ವಿಚಾರವಾಗಿ ರಸ್ತೆಯಲ್ಲೇ ಇಬ್ಬರು ಮಹಿಳೆಯರು ಜಗಳವಾಡಿದ್ದಾರೆ.

two-women-fighting-in-koderma-for-same-man-as-their-husband
ಒಬ್ಬ ಪುರುಷನಿಗಾಗಿ ಇಬ್ಬರು ಮಹಿಳೆಯರ ಕಿತ್ತಾಟ.. ವಿಡಿಯೋ
author img

By

Published : Jun 17, 2023, 9:03 PM IST

ಕೊಡರ್ಮಾ (ಜಾರ್ಖಂಡ್): ಒಬ್ಬ ಪುರುಷನಿಗಾಗಿ ಇಬ್ಬರು ಮಹಿಳೆಯರು ರಸ್ತೆ ಮಧ್ಯೆಯೇ ಕಿತ್ತಾಟ ನಡೆಸಿದ ಘಟನೆ ಜಾರ್ಖಂಡ್​ನ ಕೊಡರ್ಮಾ ಜಿಲ್ಲೆಯಲ್ಲಿ ನಡೆದಿದೆ. ನಂತರ ಪೊಲೀಸರು ಸ್ಥಳಕ್ಕಾಗಮಿಸಿ ಗಲಾಟೆ ಸೃಷ್ಟಿಸುತ್ತಿದ್ದ ಮಹಿಳೆಯರಿಬ್ಬರು ಹಾಗೂ ಇವರ ಪತಿ ಎನ್ನಲಾಗುವ ವ್ಯಕ್ತಿಯನ್ನೂ ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ.

ಇದನ್ನೂ ಓದಿ: ಮದುವೆ ನಿಶ್ಚಯವಾಗಿದ್ದ ಯುವತಿ ಅಪಹರಿಸಿ ಮರುಭೂಮಿಯಲ್ಲಿ ಎತ್ತಿಕೊಂಡು 'ಸಪ್ತಪದಿ' ತುಳಿದ!

ಇಲ್ಲಿನ ಝಂಡಾ ಚೌಕ್‌ನಲ್ಲಿ ಇಬ್ಬರು ಮಹಿಳೆಯರು ನಡುವೆ ಹಠಾತ್ ಗಲಾಟೆ ಪ್ರಾರಂಭವಾಗಿತ್ತು. ಏನಾಗುತ್ತಿದೆ ಎಂದು ತಿಳಿಯದ ಜನರು ಸ್ಥಳದಲ್ಲಿ ಜಮಾಯಿಸಿದ್ದರು. ಸ್ವಲ್ಪ ಹೊತ್ತಿನ ಬಳಿಕ ಒಬ್ಬ ಪುರುಷನಿಗಾಗಿ ಇಬ್ಬರು ಮಹಿಳೆಯರು ಪರಸ್ಪರ ಜಗಳವಾಡುತ್ತಿರುವುದು ಕಂಡುಬಂದಿದೆ. ನಂತರದಲ್ಲಿ ನಡುರಸ್ತೆಯಲ್ಲಿ ಈ ಗಲಾಟೆ ವಿಕೋಪಕ್ಕೆ ತಿರುಗಿದೆ. ಇದರಿಂದ ಸ್ಥಳದಲ್ಲಿ ಜಮಾಯಿಸಿದ್ದ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಗಂಡ-ಹೆಂಡತಿಯ ನಡುವೆ ಎರಡನೇ ಮಹಿಳೆಯ ಪ್ರವೇಶ: ಈ ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಹೆಚ್ಚಿನ ಮಾಹಿತಿ ಕಲೆ ಹಾಕಿದ್ದಾರೆ. ಆಗ ಸಂದೀಪ್ ರಾಮ್ ಎಂಬಾತನಿಗಾಗಿ ಈ ಇಬ್ಬರು ಮಹಿಳೆಯರ ನಡುವೆ ಗಲಾಟೆ ನಡೆಯುತ್ತಿತ್ತು ಎಂದು ಗೊತ್ತಾಗಿದೆ. 2015ರಲ್ಲಿ ಗುಡಿಯಾ ದೇವಿಯೊಂದಿಗೆ ಸಂದೀಪ್ ಪ್ರೇಮ ವಿವಾಹವಾಗಿದ್ದರು. ಈ ದಂಪತಿಗೆ ಮೂವರು ಮಕ್ಕಳಿದ್ದಾರೆ. ಆದರೆ, ಇದರ ನಡುವೆ ಮತ್ತೊಬ್ಬ ಮಹಿಳೆ ಸಂದೀಪ್ ತನ್ನನ್ನು ಮದುವೆಯಾಗಿದ್ದಾರೆ ಎಂದು ಹೇಳಿಕೊಂಡು ಇವರ ದಾಂಪತ್ಯ ಜೀವನದ ಮಧ್ಯೆ ಎಂಟ್ರಿ ಕೊಟ್ಟಿದ್ದಾರೆ.

ಇದನ್ನೂ ಓದಿ: ಹಿಂದೂಯೇತರ ವ್ಯಕ್ತಿಯ ಮದುವೆಯಾದ ಯುವತಿ.. ಬದುಕಿರುವಾಗಲೇ ಪಿಂಡ ಪ್ರದಾನ ಮಾಡಿದ ಕುಟುಂಬಸ್ಥರು!

ಮತ್ತೊಂದೆಡೆ ಸಂದೀಪ್ ಮೊದಲ ಪತ್ನಿ ಗುಡಿಯಾ ದೇವಿ, ನಾನು ತನ್ನ ಕುಟುಂಬ ಮತ್ತು ಇಡೀ ಸಮಾಜದ ಎದುರು ಹಾಕಿಕೊಂಡು ಸಂದೀಪ್​​ನೊಂದಿಗೆ ಪ್ರೇಮ ವಿವಾಹ ಮಾಡಿಕೊಂಡಿರುವುದಾಗಿ ತಿಳಿಸಿದ್ದಾರೆ. ಇದಾದ ನಂತರ ಇಬ್ಬರೂ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದವು. ಸಂದೀಪ್ ಮುಂಬೈನ ಹೋಟೆಲ್​ವೊಂದರಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ. ಒಂದು ವರ್ಷದ ಹಿಂದೆ ಇದ್ದಕ್ಕಿದ್ದಂತೆ ಛತ್ತೀಸ್‌ಗಢದ ಪೂಜಾ ಎಂಬ ಮಹಿಳೆಯೊಂದಿಗೆ ಸಂದೀಪ್‌ಗೆ ಅಕ್ರಮ ಸಂಬಂಧವಿತ್ತು ಎಂದು ಗೊತ್ತಾಯಿತು ಎಂದು ಹೇಳಿದ್ದಾರೆ.

ಮೂರು ದಿನಗಳ ಹಿಂದೆ ಸಂದೀಪ್ ಮುಂಬೈನಿಂದ ಹಿಂತಿರುಗಿದಾಗ ಪೂಜಾಳನ್ನು ತನ್ನೊಂದಿಗೆ ಕರೆದುಕೊಂಡು ಬಂದಿದ್ದ ಎನ್ನಲಾಗಿದೆ. ಗುಡಿಯಾ ಮತ್ತು ಪೂಜಾ ಇಬ್ಬರನ್ನೂ ತನ್ನೊಂದಿಗೆ ಇಟ್ಟುಕೊಳ್ಳಲು ಸಂದೀಪ್ ಬಯಸಿದ್ದ. ಆದರೆ, ಗುಡಿಯಾ ದೇವಿ ಇದರಿಂದ ಆಕ್ರೋಶಗೊಂಡಿದ್ದರು. ಈ ಕಾರಣದಿಂದಾಗಿ ಝಂಡಾ ಚೌಕ್‌ನ ಜನನಿಬಿಡ ಪ್ರದೇಶದಲ್ಲಿ ಭಾರಿ ಗಲಾಟೆ ನಡೆಯುತ್ತಿತ್ತು. ಗಲಾಟೆ ನಂತರ ಪೊಲೀಸರು ಸ್ಥಳಕ್ಕೆ ಆಗಮಿಸಿ ಮೂವರನ್ನೂ ಠಾಣೆಗೆ ಕರೆದೊಯ್ದರು ಎಂದು ತಿಳಿದು ಬಂದಿದೆ.

ಇದನ್ನೂ ಓದಿ: Bride secret: ಮಧುಚಂದ್ರದ ದಿನವೇ ಪತ್ನಿ ಹೆಣ್ಣಲ್ಲ ಎಂದು ತಿಳಿಯಿತು.. ಮರ್ಯಾದೆ ವಿಷ್ಯ ಎಂದು ಸುಮ್ಮನಿದ್ದ ಯುವಕನಿಗೆ ಏಳು ವರ್ಷದ ನಂತರ ಸಿಕ್ತು ವಿಚ್ಛೇದನ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.