ಚಮೋಲಿ, ಉತ್ತರಖಂಡ: ಜಿಲ್ಲೆಯಲ್ಲಿ ಎರಡು ಪ್ರತ್ಯೇಕ ಅಪಘಾತಗಳು ಸಂಭವಿಸಿದ್ದು, ಚಾಲಕ ಸಾವನ್ನಪ್ಪಿದ್ದು, 11 ಯಾತ್ರಾರ್ಥಿಗಳ ವಾಹನವೊಂದು ನಾಲೆಗೆ ಉರುಳಿ ಬಿದ್ದಿದೆ.
ನಾಲೆಗೆ ಉರುಳಿ ಬಿದ್ದ ವಾಹನ: ಮಂಡಲ್ ಗೋಪೇಶ್ವರ್ ಮೋಟಾರು ಮಾರ್ಗದ ಮಂಡಲ್ ಬಳಿ ವಾಹನವೊಂದು ಅಪಘಾತಕ್ಕೀಡಾಗಿದೆ. ವಾಹನದಲ್ಲಿದ್ದವರೆಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ತಿಳಿದು ಬಂದಿದೆ. ಗುರುವಾರ ಬೆಳಗ್ಗೆ ಕೇದಾರನಾಥದಿಂದ ಗೋಪೇಶ್ವರ ಕಡೆಗೆ ಬರುತ್ತಿದ್ದ ವಾಹನ ನಿಯಂತ್ರಣ ತಪ್ಪಿ ಮಂಡಲ್ ಬಳಿಯ ಕಂದಕಕ್ಕೆ ಬಿದ್ದಿದೆ. ಈ ಅಪಘಾತದ ಬಗ್ಗೆ ಗೋಪೇಶ್ವರ ಪೊಲೀಸ್ ಠಾಣೆಯ ಎಸ್‌ಎಚ್‌ಒ ರಾಜೇಂದ್ರ ಸಿಂಗ್ ರೌಟೇಲಾ ತಿಳಿಸಿದ್ದಾರೆ.
ಅದೃಷ್ಟವಶಾತ್ ಈ ಸಂದರ್ಭದಲ್ಲಿ ಯಾರಿಗೂ ಗಂಭೀರ ಗಾಯಗಳಾಗಿಲ್ಲ. ವಾಹನದಲ್ಲಿದ್ದವರೆಲ್ಲರೂ ಸುರಕ್ಷಿತವಾಗಿದ್ದಾರೆ. ವಾಹನದಲ್ಲಿದ್ದ ಎಲ್ಲಾ 11 ಜನರನ್ನು ಸ್ಥಳೀಯ ಜನರು ಮತ್ತು ಮಂಡಲ್ ಚೌಕಿ ಪೊಲೀಸರು ಸುರಕ್ಷಿತವಾಗಿ ಸ್ಥಳಾಂತರಿಸಿದ್ದಾರೆ. ಎಲ್ಲ ಸವಾರರು ರಾಜಸ್ಥಾನದವರು. ಈ ಜನರು ಕೇದಾರನಾಥದಿಂದ ಬದರಿನಾಥಕ್ಕೆ ಹೋಗುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಮತ್ತೊಂದು ರಸ್ತೆ ಅಪಘಾತದಲ್ಲಿ ಚಾಲಕ ಸಾವು: ಚಮೋಲಿಯ ಠಾಣಾ ನಂದನಗರ ಘಾಟ್ ಪ್ರದೇಶದ ಸೀಟೆಲ್ ರಸ್ತೆಯ ಪಾರ್ಕಿಂಗ್ ಬಳಿ ವಾಹನವೊಂದು ರಸ್ತೆಗೆ ಬಿದ್ದಿರುವ ಬಗ್ಗೆ ಮಾಹಿತಿ ಲಭಿಸಿದೆ. ಸ್ಥಳದಲ್ಲೇ ಯುಕೆ 04 ಸಿಎ 1254 ವಾಹನವು ರಸ್ತೆಯಿಂದ 150 ಮೀಟರ್ ಕೆಳಗೆ ನಂದಾಕಿನಿ ನದಿಗೆ ಬಿದ್ದಿದೆ. ಈ ಅಪಘಾತದಲ್ಲಿ ನೈನಿತಾಲ್ ನಿವಾಸಿ 24 ವರ್ಷದ ಚಾಲಕ ಪವನ್ ಎಂಬಾತ ಯುವಕ ಸಾವನ್ನಪ್ಪಿದ್ದಾರೆ.
ಬದರಿನಾಥ ರಾಷ್ಟ್ರೀಯ ಹೆದ್ದಾರಿ ಬಂದ್: ಮತ್ತೊಂದೆಡೆ ಬೆಟ್ಟದಿಂದ ಭಾರೀ ಪ್ರಮಾಣದ ಮಣ್ಣು ಹರಿದು ಬರುತ್ತಿರುವುದರಿಂದ ಬದರಿನಾಥ ರಾಷ್ಟ್ರೀಯ ಹೆದ್ದಾರಿ 07ರಲ್ಲಿ ಅಡಚಣೆಯಾಗಿದೆ. ಬದರಿನಾಥ ಮತ್ತು ಹೇಮಕುಂಡಕ್ಕೆ ಬರುವ ಪ್ರಯಾಣಿಕರು ಈ ಹೆದ್ದಾರಿಯಲ್ಲಿ ಸಿಲುಕಿಕೊಂಡಿದ್ದಾರೆ. ಪೊಲೀಸರು ರಸ್ತೆ ತೆರೆಯುವವರೆಗೆ ಪ್ರಯಾಣಿಸುವ ಇತರ ಪ್ರಯಾಣಿಕರನ್ನು ಕರ್ಣಪ್ರಯಾಗ, ಗೌಚಾರ್ ಮತ್ತು ಪಿಪಾಲ್ಕೋಟಿಯಲ್ಲಿ ನಿಲ್ಲಿಸಿದ್ದಾರೆ. ರಸ್ತೆ ಮೇಲೆ ಬಿದ್ದ ಮಣ್ಣಿನ ಅವಶೇಷಗಳನ್ನು ತೆರೆಯುವ ಕೆಲಸವನ್ನು ಎನ್‌ಎಚ್‌ಐಡಿಸಿಎಲ್ ಪ್ರಾರಂಭಿಸಿದೆ. ಈ ಮಾರ್ಗದ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಸುಮಾರು 4 ರಿಂದ 5 ಗಂಟೆಗಳು ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.
ಓದಿ: ಆನೇಕಲ್: ಬ್ಯಾರಿಕೇಡ್ಗೆ ಡಿಕ್ಕಿಯಾಗಿ ಬಿದ್ದ ಕಂಟೈನರ್; ಚಾಲಕ, ಕ್ಲೀನರ್ ಸಾವು
ಮಧ್ಯಪ್ರದೇಶದಲ್ಲಿ ಭೀಕರ ಅಪಘಾತ: ದಾತಿಯಾ ಜಿಲ್ಲೆಯಲ್ಲಿ ಬುಧವಾರ ಭೀಕರ ಅಪಘಾತ ಸಂಭವಿಸಿತ್ತು. ದುರ್ಸಾದಾ ಪೊಲೀಸ್ ಠಾಣೆ ವ್ಯಾಪ್ತಿಯ ಬುಹಾರಾ ನದಿಯಲ್ಲಿ ವೇಗವಾಗಿ ಬಂದ ಟ್ರಕ್ ನಿಯಂತ್ರಣ ತಪ್ಪಿ ಪಲ್ಟಿಯಾಗಿತ್ತು. ಈ ಅಪಘಾತದಲ್ಲಿ 12 ಮಂದಿ ಸಾವನ್ನಪ್ಪಿದ್ದರು. ಇನ್ನು ಈ ಅಪಘಾತದಲ್ಲಿ 36ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಅಪಘಾತ ಮಾಹಿತಿ ಪಡೆದು ಜಿಲ್ಲಾಧಿಕಾರಿ ಹಾಗೂ ಅಧೀಕ್ಷಕ ಪ್ರದೀಪ್ ಶರ್ಮಾ ಸ್ಥಳಕ್ಕೆ ದೌಡಾಯಿಸಿದ್ದರು. ಇದರೊಂದಿಗೆ ರಾಜ್ಯ ಗೃಹ ಸಚಿವ ನರೋತ್ತಮ್ ಮಿಶ್ರಾ ಕೂಡ ಈ ದೊಡ್ಡ ಘಟನೆಯ ಬಗ್ಗೆ ಗಮನ ಹರಿಸಿದ್ದರು.