ಶ್ರೀನಗರ(ಜಮ್ಮು-ಕಾಶ್ಮೀರ): ದಕ್ಷಿಣ ಕಾಶ್ಮೀರದಲ್ಲಿ ನಡೆದ ಗುಂಡಿನ ಚಕಮಕಿ ವೇಳೆ ಇಬ್ಬರು ಅಪರಿಚಿತ ಉಗ್ರರ ಹೊಡೆದುರುಳಿಸುವಲ್ಲಿ ಭಾರತೀಯ ಯೋಧರು ಯಶಸ್ವಿಯಾಗಿದ್ದಾರೆ.ದಕ್ಷಿಣ ಕಾಶ್ಮೀರದ ತರ್ಲಾ ಪ್ರದೇಶದಲ್ಲಿ ನಡೆದ ಗುಂಡಿನ ಚಕಮಕಿ ವೇಳೆ ಅಪರಿಚಿತ ಉಗ್ರರನ್ನ ಹೊಡೆದುರುಳಿಸಿರುವ ಭಾರತೀಯ ಸೇನೆ, ಇದಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದೆ.
-
#UPDATE | Two terrorists neutralized in an ongoing encounter between security forces and terrorists in Hardumir Tral area: IGP Kashmir Vijay Kumar
— ANI (@ANI) December 25, 2021 " class="align-text-top noRightClick twitterSection" data="
(file photo) pic.twitter.com/cjYSPSmujb
">#UPDATE | Two terrorists neutralized in an ongoing encounter between security forces and terrorists in Hardumir Tral area: IGP Kashmir Vijay Kumar
— ANI (@ANI) December 25, 2021
(file photo) pic.twitter.com/cjYSPSmujb#UPDATE | Two terrorists neutralized in an ongoing encounter between security forces and terrorists in Hardumir Tral area: IGP Kashmir Vijay Kumar
— ANI (@ANI) December 25, 2021
(file photo) pic.twitter.com/cjYSPSmujb
ಇಂದು ಮುಂಜಾನೆಯಿಂದ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಗುಂಡಿನ ಚಕಮಕಿ ನಡೆದಿದ್ದು, ಈ ವೇಳೆ, ಇಬ್ಬರು ಉಗ್ರರನ್ನು ಹೆಡೆಮುರಿ ಕಟ್ಟಲಾಗಿದೆ ಎಂದು ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ.ಶೋಪಿಯಾನ್ ಜಿಲ್ಲೆಯ ಚೌಗಾಮ್ ಗ್ರಾಮದಲ್ಲಿ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ಎನ್ಕೌಂಟರ್ನಲ್ಲಿ ಇಬ್ಬರು ಅಪರಿಚಿತ ಭಯೋತ್ಪಾದಕರು ಹತರಾಗಿದ್ದರು. ಇದರ ಬೆನ್ನಲ್ಲೇ ಇದೀಗ ಮತ್ತಿಬ್ಬರು ಉಗ್ರರು ಬಲಿಯಾಗಿದ್ದಾರೆ.
ಇದನ್ನೂ ಓದಿರಿ: ಗೋವಾದಲ್ಲಿ ಮಮತಾಗೆ ಶಾಕ್.. ಪಕ್ಷ ಸೇರಿದ್ದ ಕೆಲ ತಿಂಗಳಲ್ಲಿ TMC ತೊರೆದ ಐವರು ಮುಖಂಡರು
ಕಳೆದ ಕೆಲ ದಿನಗಳಿಂದ ಉಗ್ರರು ಗಡಿಯೊಳಗೆ ನುಗ್ಗಿ ದುಷ್ಕೃತ್ಯವೆಸಗಲು ಮುಂದಾಗುತ್ತಿದ್ದು, ಸರ್ವಸನ್ನದ್ಧವಾಗಿರುವ ಯೋಧರು ಅವರಿಗೆ ತಕ್ಕ ಉತ್ತರ ನೀಡುತ್ತಿದ್ದಾರೆ. ಭಾರತೀಯ ಸೇನೆ ಹಾಗೂ ಸಿಆರ್ಪಿಎಫ್ ಜಂಟಿ ಕಾರ್ಯಾಚರಣೆ ನಡೆಸಿ, ಉಗ್ರರ ಹೆಡಮುರಿ ಕಟ್ಟುತ್ತಿದ್ದಾರೆ.
ಇಂದು ಬೆಳಗ್ಗೆ ನಡೆದ ಕಾರ್ಯಾಚರಣೆ ವೇಳೆ ಉಗ್ರರ ಬಳಿಯಿದ್ದ ಎಕೆ-47 ರೈಫಲ್, ಎರಡು ಮ್ಯಾಗಜೀನ್‌ಗಳು, 40 ಎಕೆ ರೌಂಡ್‌ಗಳು ಮತ್ತು ಗ್ರೆನೇಡ್ ಸೇರಿದಂತೆ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿತ್ತು.