ETV Bharat / bharat

ಆಕಸ್ಮಿಕವಾಗಿ ಗ್ರೆನೇಡ್​ ಸ್ಫೋಟಗೊಂಡು ಇಬ್ಬರು ಸೇನಾಧಿಕಾರಿಗಳು ಹುತಾತ್ಮ

author img

By

Published : Jul 18, 2022, 9:27 AM IST

Updated : Jul 18, 2022, 10:23 AM IST

ಜಮ್ಮು ಕಾಶ್ಮೀರದ ಮೆಂಧರ್​ ಸೆಕ್ಟರ್​ನಲ್ಲಿ ನಡೆದ ಆಕಸ್ಮಿಕ ಗ್ರೆನೇಡ್​ ಸ್ಪೋಟದಲ್ಲಿ ಇಬ್ಬರು ಸೇನಾಧಿಕಾರಿಗಳು ಹುತಾತ್ಮರಾಗಿದ್ದಾರೆ.

ಆಕಸ್ಮಿಕವಾಗಿ ಗ್ರೆನೇಡ್​ ಸ್ಫೋಟಗೊಂಡು ಇಬ್ಬರು ಸೇನಾಧಿಕಾರಿಗಳು ಹುತಾತ್ಮ
ಆಕಸ್ಮಿಕವಾಗಿ ಗ್ರೆನೇಡ್​ ಸ್ಫೋಟಗೊಂಡು ಇಬ್ಬರು ಸೇನಾಧಿಕಾರಿಗಳು ಹುತಾತ್ಮ

ಜಮ್ಮು- ಕಾಶ್ಮೀರ: ಪೂಂಚ್ ಜಿಲ್ಲೆಯ ಮೆಂಧರ್ ಸೆಕ್ಟರ್‌ನಲ್ಲಿ ನಿನ್ನೆ ರಾತ್ರಿ ಸಂಭವಿಸಿದ ಆಕಸ್ಮಿಕ ಗ್ರೆನೇಡ್ ಸ್ಫೋಟದಲ್ಲಿ ಜೆಸಿಒ ಸೇರಿದಂತೆ ಇಬ್ಬರು ಸೇನಾಧಿಕಾರಿಗಳು ಸಾವನ್ನಪ್ಪಿದ್ದಾರೆ. ನಾಲ್ವರು ಗಾಯಗೊಂಡಿದ್ದಾರೆ.

ಕ್ಯಾಪ್ಟನ್​ ಆನಂದ್​ ಮತ್ತು ಜೆಸಿಒ ಭಗವಾನ್​ ಸಿಂಗ್​ ಹುತಾತ್ಮ ಸೈನಿಕರು. ಮೆಂಧರ್ ಸೆಕ್ಟರ್‌ನ ಗಡಿ ನಿಯಂತ್ರಣ ರೇಖೆ ಭಾಗದಲ್ಲಿ ಸೈನಿಕರು ಗಸ್ತು ತಿರುಗುತ್ತಿದ್ದಾಗ ಸ್ಫೋಟ ಸಂಭವಿಸಿದೆ. ಈ ವೇಳೆ ಆರು ಸಿಬ್ಬಂದಿ ಗಾಯಗೊಂಡಿದ್ದಾರೆ. ತಕ್ಷಣವೇ ವಿಮಾನದಲ್ಲಿ ಉಧಂಪುರಕ್ಕೆ ಅವರನ್ನು ಸಾಗಿಸಲಾಯಿತು.

ಆದರೆ, ತೀವ್ರ ಗಾಯಗೊಂಡಿದ್ದ ಜೆಸಿಒ ಭಗವಾನ್​ ಸಿಂಗ್​ ಮತ್ತೆ ಕ್ಯಾಪ್ಟನ್​ ಆನಂದ್​ ಆಸ್ಪತ್ರೆಯಲ್ಲಿ ಅಸುನೀಗಿದರು. ಉಳಿದ ಗಾಯಾಳುಗಳಿಗೆ ಚಿಕಿತ್ಸೆ ಮುಂದುವರಿಸಲಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಅಕ್ರಮಗಳಿಗೆ ಸಿಂಹಸ್ವಪ್ನವಾದ ಉ.ಕನ್ನಡ ಎಸ್‌ಪಿ; ಅಧಿಕಾರಿಯ ವರ್ಗಾವಣೆಗೆ ದಂಧೆಕೋರರ ಹರಕೆ

Last Updated : Jul 18, 2022, 10:23 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.