ETV Bharat / bharat

ಅಶ್ಲೀಲ ಫೋಟೋ ತೋರಿಸಿ ಬ್ಲಾಕ್​ಮೇಲ್​.. ಇಬ್ಬರು ಯುವತಿಯರಿಂದ ಯುವಕನ ಕೊಲೆ - Two School girls orchestrated murder of a college students for blackmailing them

ಅಶ್ಲೀಲ ಫೋಟೋಗಳನ್ನು ತೋರಿಸಿ ಬ್ಲಾಕ್​ಮೇಲ್​ ಮಾಡುತ್ತಿದ್ದ ಯುವಕನನ್ನು, ಇಬ್ಬರು ಯುವತಿಯರು ಅವರ ಸ್ನೇಹಿತರ ಸಹಾಯದಿಂದ ಕೊಲೆ ಮಾಡಿಸಿದ ಘಟನೆ ತಿರುವಳ್ಳೂರಿನ ಈಚನಾಡು ಎಂಬಲ್ಲಿ ನಡೆದಿದೆ.

murder
ಯುವಕನ ಕೊಲೆ
author img

By

Published : Dec 21, 2021, 8:29 PM IST

ಚೆನ್ನೈ(ತಮಿಳುನಾಡು): ಅಶ್ಲೀಲ ಫೋಟೋಗಳನ್ನು ತೋರಿಸಿ ಬ್ಲಾಕ್​ಮೇಲ್​ ಮಾಡುತ್ತಿದ್ದ ಯುವಕನನ್ನು, ಇಬ್ಬರು ಯುವತಿಯರು ಅವರ ಸ್ನೇಹಿತರ ಸಹಾಯದಿಂದ ಕೊಲೆ ಮಾಡಿಸಿದ ಘಟನೆ ತಿರುವಳ್ಳೂರಿನ ಈಚನಾಡು ಎಂಬಲ್ಲಿ ನಡೆದಿದೆ.

ಕಾಲೇಜು ವಿದ್ಯಾರ್ಥಿ ಪ್ರೇಮಕುಮಾರ್(21) ಮೃತ ಯುವಕ. ಪ್ರೇಮ್​ಕುಮಾರ್​ 10ನೇ ತರಗತಿಯ ಇಬ್ಬರು ವಿದ್ಯಾರ್ಥಿನಿಯರ ಕೆಲ ವೈಯಕ್ತಿಕ ಫೋಟೋಗಳನ್ನು ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡುವೆ ಎಂದು ಬೆದರಿಕೆ ಹಾಕುತ್ತಿದ್ದನಂತೆ. ಹೀಗೆ ಮಾಡಬಾರದು ಎಂದರೆ ತಲಾ 50 ಸಾವಿರ ನೀಡಬೇಕು ಎಂದು ಕರಾರು ಹಾಕಿದ್ದ. ಇದರಂತೆ ಯುವತಿಯರಿಬ್ಬರು ತಲಾ 50 ಸಾವಿರ ರೂ. ಪ್ರೇಮ್​ಕುಮಾರ್​ಗೆ ನೀಡಿದ್ದಾರೆ.

ಬಳಿಕವೂ ಬ್ಲ್ಯಾಕ್​ಮೇಲ್​ ಮುಂದುವರಿಸಿದ್ದ ಪ್ರೇಮ್​ಕುಮಾರ್​ನ ಕಿರುಕುಳ ತಾಳಲಾರದೇ ಯುವತಿಯರಿಬ್ಬರು ತಮ್ಮ ಸ್ನೇಹಿತರಿಗೆ ಈ ಬಗ್ಗೆ ತಿಳಿಸಿದ್ದಾರೆ. ಅವನ ಬಳಿ ಇರುವ ಮೊಬೈಲ್​ ಕಸಿದುಕೊಳ್ಳಲು ಮತ್ತು ಫೋಟೋಗಳನ್ನು ಡಿಲೀಟ್​ ಮಾಡಲು ಸಹಾಯ ಕೋರಿದ್ದಾರೆ.

ಇದನ್ನೂ ಓದಿ: ಚಿತ್ರದುರ್ಗದಲ್ಲಿ ಪುಂಡ ಯುವಕರಿಂದ ರ‍್ಯಾಗಿಂಗ್​.. ನೇಣು ಬಿಗಿದುಕೊಂಡು ಯುವತಿ ಆತ್ಮಹತ್ಯೆ

ಅದರಂತೆ ಯೋಜನೆ ರೂಪಿಸಿ ಪ್ರೇಮ್​ಕುಮಾರ್​ನನ್ನು ಇಲ್ಲಿನ ಶೋಲಾವರಂ ಟೋಲ್​ ಪ್ಲಾಜಾಗೆ ಕರೆತಂದು ಕಿಡ್ನ್ಯಾಪ್​ ಮಾಡಲಾಗಿದೆ. ಬಳಿಕ ಅವನನ್ನು ಕೊಲೆ ಮಾಡಿ ತಿರುವಳ್ಳೂರಿನ ಈಚನಾಡು ಗ್ರಾಮದಲ್ಲಿ ಹೂತು ಹಾಕಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇದೀಗ ಯುವಕನ ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹವನ್ನು ಅವರ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.