ಜೈಪುರ (ರಾಜಸ್ಥಾನ): ಪಾಕಿಸ್ತಾನದಿಂದ ಸ್ಥಳಾಂತರಗೊಂಡು ಕಳೆದ ಒಂದೂವರೆ ದಶಕದಿಂದ ಭಾರತದಲ್ಲಿ ವಾಸವಾಗಿದ್ದ ಇಬ್ಬರಿಗೆ ರಾಜಸ್ಥಾನ ಸರ್ಕಾರ ಭಾರತೀಯ ಪೌರತ್ವವನ್ನು ನೀಡಿದೆ.
ಜೈಪುರದಲ್ಲಿ ವಿಜಯ್ ಕುಮಾರ್ ಮತ್ತು ರಾಂಪಾರಿ ಎಂಬವರಿಗೆ ಜಿಲ್ಲಾಧಿಕಾರಿ ಅಂಟಾರ್ ಸಿಂಗ್ ನೆಹ್ರಾ ಭಾರತದ ಪೌರತ್ವದ ಪ್ರಮಾಣಪತ್ರ ಹಸ್ತಾಂತರಿಸಿದರು. ಪೌರತ್ವ ಪಡೆದು ಮಾತನಾಡಿದ ಅವರಿಬ್ಬರೂ ಇದು ನಮ್ಮ ಜೀವನದ ಅತಿ ಸಂತೋಷಕರ ದಿನ ಎಂದು ಸಂತಸ ವ್ಯಕ್ತಪಡಿಸಿ ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದರು.
ಇದನ್ನೂ ಓದಿ: ಸ್ವಾತಂತ್ರ್ಯ ಹೋರಾಟಗಾರರ ಕನಸು ನನಸಾಗಿಸಲು ಸುವರ್ಣಾವಕಾಶ: ಪ್ರಧಾನಿ ಆಶಾವಾದ
ಅನೇಕ ವಿರೋಧ, ಪ್ರತಿಭಟನೆಗಳ ನಡುವೆಯೂ 2019ರ ಡಿಸೆಂಬರ್‌ನಲ್ಲಿ ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಅಂಗೀಕರಿಸಲ್ಪಟ್ಟಿತು. ಈ ಕಾನೂನು 2015 ಕ್ಕಿಂತ ಮೊದಲು ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದಲ್ಲಿ ಧಾರ್ಮಿಕ ವಿಚಾರಕ್ಕೆ ಕಿರುಕುಳಕ್ಕೊಳಗಾಗಿ ಭಾರತಕ್ಕೆ ಬಂದ ಹಿಂದೂ, ಸಿಖ್, ಬೌದ್ಧ, ಜೈನ, ಪಾರ್ಸಿ ಮತ್ತು ಕ್ರಿಶ್ಚಿಯನ್ ನಿರಾಶ್ರಿತರಿಗೆ ಪೌರತ್ವವನ್ನು ನೀಡುತ್ತದೆ.
ಸಿಎಎ ಅಂಗೀಕಾರವಾಗುತ್ತಿದ್ದಂತೆಯೇ ಇದರ ವಿರುದ್ಧ ರಾಷ್ಟ್ರ ರಾಜಧಾನಿ ಸೇರಿದಂತೆ ದೇಶದ ವಿವಿಧೆಡೆ ಪ್ರತಿಭಟನೆಗಳು ನಡೆದಿದ್ದವು. ದೆಹಲಿಯಲ್ಲಿ ಪ್ರತಿಭಟನೆಯು ಹಿಂಸಾತ್ಮಕ ರೂಪ ಪಡೆದಿತ್ತು.