ETV Bharat / bharat

ಎಮ್ಮೆ ಕಟ್ಟಿಹಾಕುವ ವಿಚಾರಕ್ಕೆ ಬೀದಿಯಲ್ಲಿ ಬಡಿದಾಟ: ವಿಡಿಯೋ ವೈರಲ್ - ಎರಡು ಕುಟುಂಬಗಳ ಫೈಟ್​

ಮನೆ ಮುಂದಿನ ಖಾಲಿ ಜಾಗದಲ್ಲಿ ಎಮ್ಮೆಯನ್ನು ಕಟ್ಟಿ ಹಾಕುವ ವಿಚಾರವಾಗಿ ಎರಡು ಕುಟುಂಬಗಳು ಪರಸ್ಪರ ಹೊಡೆದಾಡಿಕೊಂಡಿವೆ.

Fight
Fight
author img

By

Published : Sep 10, 2021, 9:20 PM IST

ಮೊರೆನಾ(ಮಧ್ಯಪ್ರದೇಶ): ಎಮ್ಮೆ ಕಟ್ಟಿಹಾಕುವ ವಿಚಾರಕ್ಕಾಗಿ ಎರಡು ಕುಟುಂಬಗಳ ಮಧ್ಯೆ ಭೀಕರ ಕಾಳಗ ನಡೆದಿದ್ದು, ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಮಧ್ಯಪ್ರದೇಶದ ಮೊರೆನಾದಲ್ಲಿ ಈ ಘಟನೆ ನಡೆದಿದೆ.

ಎಮ್ಮೆ ಕಟ್ಟಿಹಾಕುವ ವಿಚಾರಕ್ಕಾಗಿ ಈ ರೀತಿ ಹೊಡೆದಾಡಿಕೊಂಡರು.

ನೆರೆಹೊರೆಯ ಎರಡು ಕುಟುಂಬಗಳು ಕೈಯಲ್ಲಿ ಬಡಿಗೆ ಹಿಡಿದುಕೊಂಡು ಹೊಡೆದಾಡಿಕೊಂಡಿವೆ. ಘಟನೆಯಲ್ಲಿ ಇಬ್ಬರಿಗೆ ಗಂಭೀರವಾಗಿ ಗಾಯವಾಗಿದ್ದು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಇಲ್ಲಿನ ಆಜಾದ್​ ನಗರದಲ್ಲಿ ವಾಸವಾಗಿದ್ದ ನೆರೆಹೊರೆಯ ಕುಟುಂಬಗಳು ಎಮ್ಮೆ ಕಟ್ಟಿಹಾಕುವ ವಿಚಾರವಾಗಿ ಮೇಲಿಂದ ಮೇಲೆ ಜಗಳವಾಡುತ್ತಿದ್ದರಂತೆ. ಇಂದು ಬೆಳಗ್ಗೆ ಜಗಳ ತಾರಕಕ್ಕೇರಿದೆ.

ವಿಡಿಯೋದಲ್ಲಿ ಇಬ್ಬರು ಮಹಿಳೆಯರು ಪರಸ್ಪರ ಜಗಳವಾಡಿರುವುದು ಸೆರೆಯಾಗಿದೆ. ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಘಟನೆಗೆ ಸಂಬಂಧಿಸಿದಂತೆ ಎರಡು ಕುಟುಂಬಗಳಿಂದ ದೂರು ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.