ಸಸಾರಾಮ್ : ಬಿಹಾರ ರಾಜ್ಯದಲ್ಲಿ ಈಗ ನ್ಯಾಯಾಧೀಶರೂ ಕೂಡಾ ಸುರಕ್ಷಿತವಾಗಿಲ್ಲ. ಅವರು ನಡುರಸ್ತೆಯಲ್ಲಿ ಸುರಕ್ಷಿತವಾಗಿ ನಡೆದಾಡುವುದಕ್ಕೂ ಭಯಪಡುವಂತಾಗಿದೆ. ರೋಹ್ತಾಸ್ ಜಿಲ್ಲೆಯಲ್ಲಿ ಇಂತಹದ್ದೇ ಪ್ರಕರಣ ಮುನ್ನೆಲೆಗೆ ಬಂದಿದೆ. ಇಲ್ಲಿ ಇಬ್ಬರು ನ್ಯಾಯಾಧೀಶರ ಜತೆ ಕೆಲ ಯುವಕರು ಅನುಚಿತವಾಗಿ ವರ್ತಿಸಿ ನಂತರ ಹಲ್ಲೆಯನ್ನೂ ನಡೆಸಿದ್ದಾರೆ. ಬೈಕ್ನಲ್ಲಿ ಬಂದ ಯುವಕರು ನ್ಯಾಯಾಧೀಶರ ಕಾರಿಗೆ ಡಿಕ್ಕಿ ಹೊಡೆದು ಹಲ್ಲೆ ನಡೆಸಿದ್ದಲ್ಲದೇ ಕತ್ತು ಹಿಸುಕಲು ಯತ್ನಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮುಫಾಸಿಲ್ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
'ಪ್ರಕರಣಕ್ಕೆ ಸಂಬಂಧಿಸಿದಂತೆ ಪೆಟ್ರೋಲ್ ಪಂಪ್ ಮಾಲೀಕ ರಮಾಕಾಂತ್ ಸಿಂಗ್ ಮತ್ತು ಮತ್ತೋರ್ವ ಆರೋಪಿ ಶಂತನು ಅವರನ್ನು ಬಂಧಿಸಲಾಗಿದೆ. ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ' ಎಂದು ಮುಫಾಸಿಲ್ ಪೊಲೀಸ್ ಠಾಣೆ ಎಸ್‌ಹೆಚ್‌ಒ ರಿಜ್ವಾನ್ ಅಹ್ಮದ್ ಖಾನ್ ಅವರು ಹೇಳಿದ್ದಾರೆ.
ಇದನ್ನೂ ಓದಿ : ಆರೋಗ್ಯ ವಿಮೆ ಕ್ಲೇಮ್ಗೆ 24 ಗಂಟೆ ಆಸ್ಪತ್ರೆವಾಸ ಕಡ್ಡಾಯವಲ್ಲ: ವಡೋದರಾ ಗ್ರಾಹಕರ ವೇದಿಕೆ ತೀರ್ಪು
ಏನಿದು ಘಟನೆ: ಮುಫಾಸಿಲ್ ಪೊಲೀಸ್ ಠಾಣೆ ವ್ಯಾಪ್ತಿಯ ಬೇಡ ಗ್ರಾಮದ ಬಳಿ ಇರುವ ಪೆಟ್ರೋಲ್ ಪಂಪ್ ಬಳಿ ಘಟನೆ ನಡೆದಿದೆ. ಪೊಲೀಸ್ ಠಾಣೆಯಲ್ಲಿ ನೀಡಿರುವ ದೂರಿನ ಪ್ರಕಾರ, ಮಂಗಳವಾರ ರಾತ್ರಿ ನ್ಯಾಯಾಧೀಶ ರಾಮಚಂದ್ರ ಪ್ರಸಾದ್ ಅವರು ತಮ್ಮ ನ್ಯಾಯಾಧೀಶ ಸ್ನೇಹಿತನೊಂದಿಗೆ ಸಸಾರಾಮ್ ಪೆಟ್ರೋಲ್ ಪಂಪ್‌ಗೆ ಹೋಗುತ್ತಿದ್ದರು. ಆಗ ಎದುರಿನಿಂದ ಬೈಕ್ ಮೂಲಕ ಬಂದ ಯುವಕರು ಕಾರಿಗೆ ಡಿಕ್ಕಿ ಹೊಡೆದಿದ್ದಾರೆ. ಘಟನೆಯ ನಂತರ ನ್ಯಾಯಾದೀಶರು ಯುವಕರನ್ನು ಪ್ರಶ್ನಿಸಲು ಆರಂಭಿಸಿದಾಗ ಆತ ಉದ್ರೇಕಗೊಂಡು ಕಾರಿನ ಕೀ ಕಿತ್ತುಕೊಳ್ಳಲು ಆರಂಭಿಸಿದ್ದಾನೆ. ವಿಪರೀತವಾಗಿ ನಿಂದಿಸುತ್ತಲೇ ಜಗಳ ಆರಂಭಿಸಿದ್ದಾರೆ. ನಂತರ ನ್ಯಾಯಾಧೀಶರನ್ನು ಕತ್ತು ಹಿಸುಕಿ ಕೊಲ್ಲಲು ಯತ್ನಿಸಿದ್ದಾರೆ.
ಇದನ್ನೂ ಓದಿ : ಹಿರಿಯ ಅಧಿಕಾರಿಯ ಕಿರುಕುಳದಿಂದ ಯೋಧ ಆತ್ಮಹತ್ಯೆ ಆರೋಪ: ಸಹೋದ್ಯೋಗಿಗಳ ಪ್ರತಿಭಟನೆ
ಇಬ್ಬರು ಆರೋಪಿಗಳ ಬಂಧನ: ಈ ವೇಳೆ, ಸ್ಥಳೀಯರು ಬಂದು ಯುವಕರಿಂದ ನ್ಯಾಯಾಧೀಶರನ್ನು ರಕ್ಷಿಸಿದ್ದಾರೆ. ಹೀಗಾಗಿ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆ ಬಳಿಕ ಈ ಕುರಿತು ನ್ಯಾಯಾಧೀಶರು ನಗರ ಠಾಣೆಗೆ ಮಾಹಿತಿ ನೀಡಿದ್ದಾರೆ. ನಂತರ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ. ಪ್ರಕರಣದಲ್ಲಿ ಪೆಟ್ರೋಲ್ ಪಂಪ್ ಮಾಲೀಕ ರಮಾಕಾಂತ್ ಸಿಂಗ್ ಮತ್ತು ಇತರ ಆರೋಪಿಯಾದ ಶಾಂತನು ಅವರನ್ನು ಬಂಧಿಸಲಾಗಿದೆ ಎಂದು ಮುಫಾಸಿಲ್ ಪೊಲೀಸ್ ಠಾಣೆಯ ಮುಖ್ಯಸ್ಥರು ತಿಳಿಸಿದ್ದಾರೆ.
ಇದನ್ನೂ ಓದಿ : ಅದಾನಿ ವಿರುದ್ಧ ತನಿಖೆ ಪ್ರಾರಂಭಕ್ಕೆ ಒತ್ತಾಯ: ಕಾಂಗ್ರೆಸ್ ನೇತೃತ್ವದಲ್ಲಿ ಇಡಿ ಕಚೇರಿಯವರೆಗೆ ಮೆರವಣಿಗೆ, ವಿಜಯ್ ಚೌಕ್ ಬಳಿ ತಡೆ
ನ್ಯಾಯಾಧೀಶ ರಾಮಚಂದ್ರ ಪ್ರಸಾದ್ ಅವರು ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಆಗಿದ್ದರೆ, ಇನ್ನೊಬ್ಬ ನ್ಯಾಯಾಧೀಶ ದೇವೇಶ್ ಕುಮಾರ್ ನಾಲ್ಕನೇ ಕಿರಿಯ ನ್ಯಾಯಾಧೀಶರಾಗಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ : ಒಂದೇ ವರ್ಷದಲ್ಲಿ ಐಐಟಿ, ಎನ್‌ಐಟಿ, ಐಐಎಂ ಸಂಸ್ಥೆಯ 16 ವಿದ್ಯಾರ್ಥಿಗಳ ಆತ್ಮಹತ್ಯೆ: ಕೇಂದ್ರ ಶಿಕ್ಷಣ ಇಲಾಖೆ ಮಾಹಿತಿ