ETV Bharat / bharat

ಭಾರತೀಯ ಎರಡು ಉದಯೋನ್ಮುಖ ಸ್ಟಾರ್ಟ್​ಅಪ್​ಗಳಿಗೆ ವಿಶ್ವಬ್ಯಾಂಕ್ ಗ್ರೂಪ್ ಅವಾರ್ಡ್​

ಭಾರತದ ಎನ್​​ಐಆರ್​​ಎಎಂಎಐ ಹೆಲ್ತ್ ಅನಾಲಿಟಿಕ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಇನ್ನ್​​​ ಅಸ್ಸೆಲ್ ಟೆಕ್ನೋಲಜೀಸ್ ಪ್ರೈವೇಟ್ ಲಿಮಿಟೆಡ್ ಸ್ಟಾರ್ಟಪ್​ಗಳಿಗೆ ವಿಶ್ವಬ್ಯಾಂಕ್​ ಗ್ರೂಪ್ ಮತ್ತು ಗ್ರಾಹಕ ತಂತ್ರಜ್ಞಾನ ಸಂಸ್ಥೆ ನೀಡುವ ಪುರಸ್ಕಾರಕ್ಕೆ ಪಾತ್ರವಾಗಿವೆ.

Two Indian startups supported by DBT win World Bank Group awards
ಭಾರತೀಯ ಎರಡು ಉದಯೋನ್ಮುಖ ಸ್ಟಾರ್ಟ್​ಅಪ್​ಗಳಿಗೆ ವಿಶ್ವಬ್ಯಾಂಕ್ ಗ್ರೂಪ್ ಅವಾರ್ಡ್​
author img

By

Published : Jan 13, 2022, 7:45 AM IST

ನವದೆಹಲಿ: ಭಾರತದ ಎರಡು ಉದಯೋನ್ಮುಖ ಸ್ಟಾರ್ಟ್​​ಅಪ್​ಗಳು ವಿಶ್ವಬ್ಯಾಂಕ್​ ಗ್ರೂಪ್ ಮತ್ತು ಗ್ರಾಹಕ ತಂತ್ರಜ್ಞಾನ ಸಂಸ್ಥೆ ನೀಡುವ ಜಾಗತಿಕ ಮಹಿಳಾ ಆರೋಗ್ಯ ತಂತ್ರಜ್ಞಾನ ಪ್ರಶಸ್ತಿಯನ್ನು ಪಡೆದಿದ್ದು, ಮಹಿಳೆಯರ ಆರೋಗ್ಯ ಮತ್ತು ಸುರಕ್ಷತೆ ಸುಧಾರಿಸಲು ನವೀನ ತಂತ್ರಜ್ಞಾನಗಳ ಅನ್ವೇಷಣೆಗಾಗಿ ಈ ಪ್ರಶಸ್ತಿ ಒಲಿದು ಬಂದಿದೆ.

ಎನ್​​ಐಆರ್​​ಎಎಂಎಐ ಹೆಲ್ತ್ ಅನಾಲಿಟಿಕ್ಸ್ ಪ್ರೈವೇಟ್ ಲಿಮಿಟೆಡ್ (NIRAMAI Health Analytics Pvt. Ltd) ಮತ್ತು ಇನ್ನ್​​​ ಅಸ್ಸೆಲ್ ಟೆಕ್ನೋಲಜೀಸ್ ಪ್ರೈವೇಟ್ ಲಿಮಿಟೆಡ್​ ( Inn Accel Technologies Pvt. Ltd) ಇವುಗಳು ಪ್ರಶಸ್ತಿ ಪಡೆದ ಸ್ಟಾರ್ಟ್​ಅಪ್​ಗಳಾಗಿದ್ದು, ಈ ಎರಡೂ ಕಂಪನಿಗಳು ಜೈವಿಕ ತಂತ್ರಜ್ಞಾನ ಇಲಾಖೆಯ ಅಡಿ ಬಯೋಟೆಕ್ನಾಲಜಿ ಇಂಡಸ್ಟ್ರಿ ರಿಸರ್ಚ್ ಅಸಿಸ್ಟೆನ್ಸ್ ಕೌನ್ಸಿಲ್​ನಿಂದ ಬೆಂಬಲಿತವಾಗಿವೆ.

ವಿಶ್ವಬ್ಯಾಂಕ್‌ನ ಹೇಳಿಕೆಯ ಪ್ರಕಾರ, ಈ ವರ್ಷ ಸುಮಾರು 35 ರಾಷ್ಟ್ರಗಳಿಂದ 70ಕ್ಕೂ ಹೆಚ್ಚು ಸ್ಟಾರ್ಟ್​ಅಪ್​ಗಳು ಪ್ರಶಸ್ತಿಗಾಗಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಸಂತಾನೋತ್ಪತ್ತಿ ಆರೋಗ್ಯ ಮತ್ತು ಗರ್ಭಧಾರಣೆ, ಸಾಮಾನ್ಯ ಮಹಿಳೆಯರು ಮತ್ತು ಹದಿಹರೆಯದವರ ಆರೋಗ್ಯ ಮತ್ತು ಮಹಿಳೆಯರ ಸುರಕ್ಷತೆ ಮತ್ತು ಭದ್ರತೆ ವಿಭಾಗದಲ್ಲಿ ಪ್ರಶಸ್ತಿಗಳನ್ನು ನೀಡಲಾಗಿತ್ತು.

ಎನ್​​ಐಆರ್​​ಎಎಂಎಐ ಹೆಲ್ತ್ ಅನಾಲಿಟಿಕ್ಸ್ ಪ್ರೈ. ಲಿಮಿಟೆಡ್ ಬಗ್ಗೆ ಮಾಹಿತಿ

ಎನ್​​ಐಆರ್​​ಎಎಂಎಐ ಹೆಲ್ತ್ ಅನಾಲಿಟಿಕ್ಸ್ ಪ್ರೈ. ಲಿಮಿಟೆಡ್ ಈ ಮೊದಲು ಅಂದರೆ 2019ರಲ್ಲಿ ಬಯೋಟೆಕ್ನಾಲಜಿ ಇಂಡಸ್ಟ್ರಿ ರಿಸರ್ಚ್ ಅಸಿಸ್ಟೆನ್ಸ್ ಕೌನ್ಸಿಲ್ ನೀಡುವ ವುಮೆನ್ ಇನ್ ಎಂಟರ್‌ಪ್ರೆನ್ಯೂರಿಯಲ್ ರಿಸರ್ಚ್ ಅವಾರ್ಡ್ (Women in Entrepreneurial Research Award) ಅನ್ನು ಪಡೆದುಕೊಂಡಿತ್ತು. ಸ್ತನ ಕ್ಯಾನ್ಸರ್ ಅನ್ನು ಎಲ್ಲ ವಯಸ್ಸಿನ ಮಹಿಳೆಯರಲ್ಲಿ ಪತ್ತೆ ಹಚ್ಚುವ ಸಾಧನವನ್ನು ಈ ಎನ್​​ಐಆರ್​​ಎಎಂಎಐ ಸಂಶೋಧನೆ ಮಾಡಿತ್ತು.

ಈ ಕಂಪನಿ ಅಭಿವೃದ್ಧಿಪಡಿಸಿದ ಸಾಧನವು ಕಡಿಮೆ - ವೆಚ್ಚದ್ದಾಗಿದ್ದು, ನಿಖರವಾದ, ವಿಕಿರಣ - ಮುಕ್ತ ಮತ್ತು ನೋವುರಹಿತವಾಗಿ ಸ್ತನ ಕ್ಯಾನ್ಸರ್ ಅನ್ನು ಪತ್ತೆ ಹಚ್ಚುವ ಸಾಮರ್ಥ್ಯ ಪತ್ತೆ ಹಚ್ಚುವ ಸಾಮರ್ಥ್ಯವಿತ್ತು. ಈ ಸಾಧನ ಬಳಕೆಯಿಂದ ಯಾವುದೇ ಅಡ್ಡಪರಿಣಾಮಗಳು ಇರಲಿಲ್ಲ ಎಂಬುದು ವಿಶೇಷ.

ಇಲ್ಲಿಯವರೆಗೆ, ಭಾರತದಾದ್ಯಂತ 30ಕ್ಕೂ ಹೆಚ್ಚು ಆಸ್ಪತ್ರೆಗಳು ಮತ್ತು ಲ್ಯಾಬ್​ಗಳಲ್ಲಿ ಈ ಸ್ಟಾರ್ಟ್ ಅಪ್ ಕಂಡುಹಿಡಿದ ಸಾಧನವನ್ನು ಬಳಕೆ ಮಾಡಲಾಗುತ್ತಿದ್ದು, ಈವರೆಗೆ ಸುಮಾರು 45 ಸಾವಿರಕ್ಕೂ ಹೆಚ್ಚು ಮಹಿಳೆಯರನ್ನು ಪರೀಕ್ಷಿಸಲಾಗಿದೆ.

ಈ ಸಾಧನದಿಂದಾಗಿ ಪ್ರಪಂಚ ಸುಮಾರು ಎರಡು ಬಿಲಿಯನ್ ಮಹಿಳೆಯರ ಕ್ಯಾನ್ಸರ್ ಅನ್ನು ನಿಯಮಿತವಾಗಿ ಪರೀಕ್ಷೆ ಮಾಡಬಹುದು. ಭಾರತದಲ್ಲಿ ಪ್ರತಿವರ್ಷ 90 ಸಾವಿರಕ್ಕೂ ಹೆಚ್ಚು ಮಂದಿಯ ಜೀವಗಳನ್ನು ಉಳಿಸಬಹುದು ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ಪ್ರಕಟಣೆ ತಿಳಿಸಿದೆ.

ಇನ್ನ್​​​ ಅಸ್ಸೆಲ್ ಟೆಕ್ನೋಲಜೀಸ್ ಪ್ರೈವೇಟ್ ಲಿಮಿಟೆಡ್ ಬಗ್ಗೆ ಮಾಹಿತಿ

ಸ್ಸೆಲ್ ಟೆಕ್ನೋಲಜೀಸ್ ಪ್ರೈವೇಟ್ ಲಿಮಿಟೆಡ್ 2019ರಲ್ಲಿ ಬಿಲ್ ಆ್ಯಂಡ್ ಮೆಲಿಂದಾ ಗೇಟ್ಸ್ ಫೌಂಡೇಶನ್‌ನ (BMGF) ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ ನೀಡುವ ಗ್ರ್ಯಾಂಡ್ ಚಾಲೆಂಜಸ್ ಎಕ್ಸ್‌ಪ್ಲೋರೇಶನ್-ಇಂಡಿಯಾ ಪುರಸ್ಕಾರವನ್ನು (Grand Challenges Exploration-India) ಪಡೆದಿದೆ. ಕೃತಕ ಬುದ್ದಿಮತ್ತೆ ಆಧಾರಿತವಾಗಿ ರೂಪಿಸಲಾದ ಭ್ರೂಣದ ಹೃದಯ ಬಡಿತ ಕಂಡುಹಿಡಿಯುವ ಅಥವಾ ಮಾನಿಟರ್ ಮಾಡುವ ಸಾಧನವನ್ನು ಪತ್ತೆ ಮಾಡಿದ ಕಾರಣಕ್ಕೆ ಈ ಸಂಸ್ಥೆಗೆ ಪ್ರಶಸ್ತಿ ಒಲಿದುಬಂದಿತ್ತು.

ಸಾಮಾನ್ಯವಾಗಿ ಇಂತಹ ಕೆಲಸಗಳು ಡಾಪ್ಲರ್ ಸಾಧನವನ್ನು ಬಳಸಲಾಗುತ್ತದೆ. ಆದರೆ.. ಸ್ಸೆಲ್ ಟೆಕ್ನೋಲಜೀಸ್ ಅಭಿವೃದ್ಧಿಪಡಿಸಿದ ಸಾಧನ ಡಾಪ್ಲರ್ ಆಧಾರಿತ ಸಾಧನಗಳಿಗಿಂತ ಹೆಚ್ಚು ನಿಖರ ಮತ್ತು ವಿಶ್ವಾಸಾರ್ಹ ಮತ್ತು ಬಳಸಲು ಸುಲಭವಾಗಿರುವ ಸಾಧನವಾಗಿದೆ. 60ಕ್ಕೂ ಹೆಚ್ಚು ರೋಗಿಗಳ ಮೇಲೆ ಪರೀಕ್ಷೆ ಮಾಡಲಾಗಿದ್ದು, ಅತ್ಯುತ್ತಮ ಫಲಿತಾಂಶ ಬಂದಿದೆ. 30ಕ್ಕೂ ಹೆಚ್ಚು ಆಸ್ಪತ್ರೆಗಳಲ್ಲಿ ಈ ಸಾಧನವನ್ನು ಡೆಮೋ ನೀಡಲಾಗಿದೆ. ಆಸ್ಪತ್ರೆಯಲ್ಲಿ ಮಾತ್ರವಲ್ಲದೇ, ಮನೆಯೊಳಗೆ ಕೂಡಾ ಕೆಲವೊಂದು ಸೆಟ್ಟಿಂಗ್ ಮಾಡಿಕೊಂಡು ಬಳಕೆ ಮಾಡಬಹುದಾಗಿದೆ.

ಈವರೆಗೆ ಸುಮಾರು 5 ಸಾವಿರ ರೋಗಿಗಳ ಪರೀಕ್ಷೆಗಾಗಿ ಈ ಸಾಧನವನ್ನು ಬಳಸಲಾಗಿದೆ. ಬುಡಕಟ್ಟು ಪ್ರದೇಶಗಳಲ್ಲೂ ಕೂಡಾ ಸಾಕಷ್ಟು ಮಂದಿಗೆ ಈ ಸಾಧನದ ಮೂಲಕ ಪರೀಕ್ಷೆ ಮಾಡಲಾಗಿದೆ. ಪ್ರಪಂಚದಾದ್ಯಂತ ಸುಮಾರು 1.2 ಮಿಲಿಯನ್ ಜೀವಗಳನ್ನು ಉಳಿಸುವ ಸಾಮರ್ಥ್ಯ ಈ ಸಾಧನಕ್ಕಿದೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ಪ್ರಕಟಣೆ ತಿಳಿಸಿದೆ.

ಇದನ್ನೂ ಓದಿ: ಕರಗುತ್ತಿರುವ ಡೂಮ್ಸ್​ಡೇ ಹಿಮನದಿಯ ಅಧ್ಯಯನಕ್ಕೆ ಹೊರಟ ಸಂಶೋಧಕರು: ಯಾಕೆ ಗೊತ್ತಾ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.