ETV Bharat / bharat

ಸರ್ಕಾರಿ ಉದ್ಯೋಗದ ನೆಪ: ಸಂದರ್ಶನಕ್ಕೆ ಕರೆದು ಯುವತಿಯರ ಮೇಲೆ ಅತ್ಯಾಚಾರ ಆರೋಪ - Central Noida additional DCP

ಕೊಠಡಿಯಲ್ಲಿ ಈ ಇಬ್ಬರು ಯುವತಿಯರು ಮತ್ತು ಆರೋಪಿ ಯುವಕರ ನಡುವೆ ಗದ್ದಲ, ಗಲಾಟೆ ನಡೆದಿದೆ. ಇದನ್ನು ಕೇಳಿ ಸ್ಥಳೀಯರು ಕೊಠಡಿ ಹೊರಗೆ ಸೇರಿದ್ದು, ನಂತರ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು.

ಸಂದರ್ಶನಕ್ಕೆ ಕರೆದು ಅತ್ಯಾಚಾರ ಆರೋಪ
ಸಂದರ್ಶನಕ್ಕೆ ಕರೆದು ಅತ್ಯಾಚಾರ ಆರೋಪ
author img

By

Published : Apr 21, 2022, 1:15 PM IST

ನೋಯ್ಡಾ (ಉತ್ತರ ಪ್ರದೇಶ): ಸರ್ಕಾರಿ ಉದ್ಯೋಗ ಕೊಡಿಸುವ ನೆಪದಲ್ಲಿ ಇಬ್ಬರು ಯುವಕರು ತಮ್ಮ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಇಬ್ಬರು ಯುವತಿಯರು ಆರೋಪಿಸಿದ್ದಾರೆ. ಅಲ್ಲದೇ, ತಮ್ಮ ಮೇಲಿನ ಬಲತ್ಕಾರವನ್ನು ವಿರೋಧಿಸಿದಾಗ ಆರೋಪಿಗಳು ತಮಗೆ ಥಳಿಸಿದ್ದಾರೆ ಎಂದೂ ಯುವತಿಯರು ದೂರಿದ್ದಾರೆ. ಉತ್ತರ ಪ್ರದೇಶದ ನೋಯ್ಡಾ ಸೆಕ್ಟರ್ 63ರಲ್ಲಿ ಈ ಘಟನೆ ಬೆಳಕಿಗೆ ಬಂದಿದೆ.

ಸರ್ಕಾರಿ ವಲಯದ ಉದ್ಯೋಗಕ್ಕಾಗಿ ಸಂದರ್ಶನ ಮಾಡಬೇಕಿದೆ ಎಂದು ಆರೋಪಿಗಳು ತಮ್ಮನ್ನು ಕರೆಸಿಕೊಂಡಿದ್ದರು. ಆದರೆ, ಅಲ್ಲಿಗೆ ಹೋದ ಬಳಿಕ ತಮಗೆ ಮದ್ಯ ಕುಡಿಸಿ ಅತ್ಯಾಚಾರ ಎಸಗಲಾಗಿದೆ ಎಂದು ಸಂತ್ರಸ್ತೆಯರು ಪೊಲೀಸರಿಗೆ ದೂರು ನೀಡಿದ್ದಾರೆ.

ಪೊಲೀಸ್​ ಠಾಣೆಯಲ್ಲೂ ಗಲಾಟೆ: ಸಂದರ್ಶನಕ್ಕೆ ಹೋದಾಗ ಕೊಠಡಿಯಲ್ಲಿ ಈ ಇಬ್ಬರು ಯುವತಿಯರು ಮತ್ತು ಆರೋಪಿ ಯುವಕರ ನಡುವೆ ಗದ್ದಲ, ಗಲಾಟೆ ನಡೆದಿದೆ. ಇದನ್ನು ಕೇಳಿ ಸ್ಥಳೀಯರು ಕೊಠಡಿ ಹೊರಗೆ ಸೇರಿದ್ದು, ನಂತರ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದರು. ಅಂತೆಯೇ ಪೊಲೀಸರು ಸ್ಥಳಕ್ಕೆ ತೆರಳಿ ನಾಲ್ವರನ್ನು ಪೊಲೀಸ್​ ಠಾಣೆಗೆ ಕರೆದುಕೊಂಡು ಬರಲಾಗಿತ್ತು.

ಆದರೆ, ಪೊಲೀಸ್​ ಠಾಣೆಗೆ ಕರೆದೊಯ್ದಾಗ ಕೂಡ ನಾಲ್ವರೂ ಮದ್ಯದ ಅಮಲಿನಲ್ಲಿದ್ದರು. ಠಾಣೆಯಲ್ಲೂ ನಾಲ್ವರು ಸುಮಾರು 3 ಗಂಟೆಗಳ ಕಾಲ ಗದ್ದಲ ಸೃಷ್ಟಿಸಿದರು. ಇದಾದ ಬಳಿಕ ಯುವತಿಯರ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಪ್ರಾಥಮಿಕ ತನಿಖೆಯ ಆಧಾರದ ಮೇಲೆ ಸದ್ಯ ಕ್ರಮ ಕೈಗೊಂಡಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಸೆಂಟ್ರಲ್​ ನೋಯ್ಡಾದ ಹೆಚ್ಚುವರಿ ಡಿಸಿಪಿ ಇಳಮಾರನ್ ತಿಳಿಸಿದ್ದಾರೆ.

ಇದನ್ನೂ ಓದಿ: ಪಿಎಸ್ಐ ನೇಮಕಾತಿ ಅಕ್ರಮ: ದಿವ್ಯಾ ಹಾಗರಗಿ ಸೇರಿ ಹಲವರಿಂದ ಅಜ್ಞಾತಸ್ಥಳದಿಂದಲೇ ನಿರೀಕ್ಷಣಾ ಜಾಮೀನಿಗೆ ಅರ್ಜಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.