ಚೆನ್ನೈ(ತಮಿಳುನಾಡು): ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಮದುವೆಯಲ್ಲಿ ಪೂಜೆ ವಿಚಾರಕ್ಕೆ ಎರಡು ಕುಟುಂಬಗಳು ಹೊಡೆದಾಡಿಕೊಂಡಿರುವ ಘಟನೆ ಚೆನ್ನೈನ ಕುಂದ್ರತ್ತೂರು ದೇವಸ್ಥಾನದಲ್ಲಿ ನಡೆದಿದೆ.
ಮೊದಲು ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ತಾಳಿ ಕಟ್ಟುವ ಪ್ರಕ್ರಿಯೆಗಳು ನಡೆದಿವೆ. ಬಳಿಕ ದೇವಸ್ಥಾನದಲ್ಲಿ ಪೂಜೆ ಮಾಡಿಸಲು ವಧು-ವರರ ಕುಟುಂಬಗಳು ಮುಂದಾಗಿ ಸ್ಥಳದಲ್ಲಿ ಹೆಚ್ಚಿನ ಜನ ಸೇರಿದ್ದರಿಂದ ಸಾಮಾಜಿಕ ಅಂತರ ಇಲ್ಲದೆ ಕೋವಿಡ್ ನಿಯಮಗಳನ್ನು ಉಲ್ಲಂಘಿಸಲಾಗಿತ್ತು.
ಜೊತೆಗೆ ಹೆಚ್ಚಿನ ಜನ ಜಮಾವಣೆಯಾದ ಕಾರಣ ಪೂಜೆಗೆ ಅವಕಾಶ ನೀಡಿರಲಿಲ್ಲ. ಇದೇ ವಿಚಾರದಲ್ಲಿ ಎರಡು ಕುಟುಂಬಗಳು ಪರಸ್ವರ ವಾಗ್ದಾಳಿ ಮಾಡಿಕೊಂಡು ಕೊನೆಗೆ ಕೈ ಕೈ ಮಿಲಾಯಿಸಿವೆ. ಬಳಿಕ ನೋಡ ನೋಡುತ್ತಿದ್ದಂತೆ ಎರಡೂ ಕಡೆಯವರು ಹೊಡೆದಾಡಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸುದ್ದಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.