ಲಕ್ನೋ (ಉತ್ತರ ಪ್ರದೇಶ): ರಾಜ್ಯದಲ್ಲಿ ಬೀದಿ ನಾಯಿಗಳ ಉಪಟಳ ಮುಂದುವರೆದಿದೆ. ನಿನ್ನೆ (ಗುರುವಾರ) ಇಲ್ಲಿನ ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯ (ಕೆಜಿಎಂಯು) ಕ್ಯಾಂಪಸ್‌ನಲ್ಲಿ ಬೀದಿ ನಾಯಿಯೊಂದು ದಾಳಿ ನಡೆಸಿದ್ದು, ಇಬ್ಬರು ವೈದ್ಯರು ಮತ್ತು ಇತರ ಮೂವರಿಗೆ ಕಚ್ಚಿ ಗಾಯಗೊಳಿಸಿದೆ. ರಾಜಧಾನಿ ಲಕ್ನೋದಲ್ಲಿ ಕಳೆದೊಂದು ವರ್ಷದಲ್ಲಿ ನಡೆದ 16ನೇ ಪ್ರಮುಖ ಬೀದಿ ನಾಯಿ ದಾಳಿ ಪ್ರಕರಣ ಇದಾಗಿದೆ.
ಈ ಬಗ್ಗೆ ವಿಶ್ವವಿದ್ಯಾನಿಲಯದ ಅಧಿಕಾರಿಗಳು ಲಕ್ನೋ ಮುನ್ಸಿಪಲ್ ಕಾರ್ಪೊರೇಷನ್ (LMC)ಗೆ ಮಾಹಿತಿ ನೀಡಿದ್ದರೆ. ಅವರು ಕ್ಯಾಂಪಸ್‌ಗೆ ತಂಡವನ್ನು ಕಳುಹಿಸಿದ್ದಾರೆ. ಆದರೆ ಅವರು ಬರುವ ಮುನ್ನವೇ ನಾಯಿ ಸಾವನ್ನಪ್ಪಿದೆ ಎನ್ನಲಾಗಿದೆ. ಸಾವಿಗೆ ನಿಖರ ಕಾರಣ ತಿಳಿದಿಲ್ಲವಾದರೂ, ರೇಬೀಸ್‌ನಿಂದ ಬಳಲುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಹೈದ್ರಾಬಾದ್ನಲ್ಲಿವೆ 5.5 ಲಕ್ಷ ಬೀದಿ ನಾಯಿಗಳು; ಅಧಿಕಾರಿಗಳ ಮಾಹಿತಿ!
ಕ್ಯಾಂಪಸ್‌ನಲ್ಲಿರುವ ವಿಕಿರಣಶಾಸ್ತ್ರ ವಿಭಾಗದ ಸಿಬ್ಬಂದಿ ಮೇಲೆ ನಾಯಿ ಹಠಾತ್ ದಾಳಿ ನಡೆಸಿತು ಎಂದು ಕೆಜಿಎಂಯು ಅಧಿಕಾರಿಗಳು ಹೇಳಿದ್ದಾರೆ. ವೈದ್ಯರಾದ ಸುಷ್ಮಾ ಯಾದವ್ ಮತ್ತು ಸಂಜಯ್ ಗುಪ್ತಾ ಎಂಬ ಇಬ್ಬರ ಮೇಲೆ ದಾಳಿ ಮಾಡಿದೆ. ಇತರ ಸಿಬ್ಬಂದಿ ಅವರನ್ನು ರಕ್ಷಿಸಿ ವಿಶ್ವವಿದ್ಯಾನಿಲಯದ ಸೋಂಕು ತಡೆಗಟ್ಟುವ ಘಟಕಕ್ಕೆ ಕರೆದೊಯ್ದಿದ್ದಾರೆ. ಅಲ್ಲಿ ಪ್ರಥಮ ಚಿಕಿತ್ಸೆಯೊಂದಿಗೆ ರೇಬೀಸ್ ಮತ್ತು ಲಸಿಕೆಗಳಿಗೆ ಪ್ರತಿಕಾಯ ನೀಡಲಾಗಿದೆ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸುಷ್ಮಾ ಯಾದವ್, "ನಾನು ರೇಡಿಯೋ ಡಯಾಗ್ನೋಸ್ಟಿಕ್ ವಿಭಾಗದಿಂದ ಹೊರ ಬರುತ್ತಿದ್ದಾಗ ಇದ್ದಕ್ಕಿದ್ದಂತೆ ಬೀದಿ ನಾಯಿ ಬಂದು ನನ್ನ ಬಲಗಾಲಿಗೆ ಕಚ್ಚಿತು. ನಾನು ಜೋರಾಗಿ ಕೂಗಿ ಓಡಿಹೋಗಲು ಪ್ರಯತ್ನಿಸಿದೆ. ಆದರೆ ಅದು ಮತ್ತೆ ನನ್ನ ಬಲಗೈಗೆ ದಾಳಿ ಮಾಡಿತು" ಎಂದು ತಿಳಿಸಿದರು.
ಇದನ್ನೂ ಓದಿ: ಒಂದೇ ದಿನ 16 ಜನರ ಮೇಲೆ ಬೀದಿ ನಾಯಿ ದಾಳಿ: ಭಯ ಭೀತರಾಗಿರುವ ಜನರು
ಕೆಜಿಎಂಯು ವಕ್ತಾರ ಸುಧೀರ್ ಸಿಂಗ್ ಮಾತನಾಡಿ, "ಘಟನೆಯ ನಂತರ, ನಾನು ನಾಯಿಯನ್ನು ಹಿಡಿಯಲು ಲಕ್ನೋ ಮುನ್ಸಿಪಲ್ ಕಾರ್ಪೊರೇಷನ್ಗೆ ತಿಳಿಸಿದೆ. ಆದರೆ ತಂಡ ಬರುವ ಮೊದಲೇ ನಾಯಿ ಸತ್ತಿದೆ" ಎಂದು ಹೇಳಿದರು. ಎಲ್‌ಎಂಸಿಯ ಮುಖ್ಯ ಪಶುವೈದ್ಯಾಧಿಕಾರಿ ಡಾ. ಅಭಿನವ್ ವರ್ಮಾ ಮಾತನಾಡಿ, "ನಾಯಿ ದವಡೆ ರೇಬೀಸ್‌ನಿಂದ ಬಳಲುತ್ತಿತ್ತು. ಈ ರೋಗ ನಾಯಿಗಳನ್ನು ಆಕ್ರಮಣಕಾರಿಯಾಗಿ ಮಾಡುತ್ತದೆ ಮತ್ತು ಅವು ಸೋಂಕಿಗೆ ಒಳಗಾದ ಒಂದು ವಾರದಲ್ಲಿ ಸಾಯುತ್ತವೆ" ಎಂದರು.
ರೇಬೀಸ್ ನಾಯಿಯನ್ನು ಆಕ್ರಮಣಕಾರಿಯಾಗಿ ಮಾಡಿದೆ ಎಂದು ತೋರುತ್ತದೆ ಎಂದು ಪಶುವೈದ್ಯರಾದ ಡಾ. ರಜನೀಶ್ ಚಂದ್ರ ಹೇಳಿದರು. "ಮನುಷ್ಯರಲ್ಲಿರುವ ವೈರಸ್ ನೇರವಾಗಿ ನರಮಂಡಲದ ಮೇಲೆ ದಾಳಿ ಮಾಡುವುದರಿಂದ ಪಾರ್ಶ್ವವಾಯು ಅಥವಾ ಮಾರಣಾಂತಿಕತೆಗೆ ಕಾರಣವಾಗುವ ಸಾಧ್ಯತೆಯಿದೆ. ಹಾಗಾಗಿ ಸಂತ್ರಸ್ತರಿಗೆ ರೇಬೀಸ್‌ಗೆ ಪ್ರತಿಕಾಯಗಳು ಲಸಿಕೆಗಳನ್ನು ನೀಡಬೇಕಾಗಿದೆ" ಎಂದು ಅವರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಮಗುವಿನ ಕೆನ್ನೆ ಕಿತ್ತು ತಿಂದ ಬೀದಿನಾಯಿ.. ರಾಜಸ್ಥಾನದಲ್ಲಿ ಮಿತಿಮೀರಿದ ಶ್ವಾನ ದಾಳಿ