ETV Bharat / bharat

24 ಗಂಟೆಯೊಳಗೆ ಇಬ್ಬರು ಕಾಂಗ್ರೆಸ್ ನಾಯಕರು ರಾಜೀನಾಮೆ - etv bharat kannada

ಕಾಂಗ್ರೆಸ್ ಪಕ್ಷಕ್ಕೆ 24 ಗಂಟೆಯಲ್ಲಿ ಇಬ್ಬರು ದೊಡ್ಡ ನಾಯಕರು ರಾಜೀನಾಮೆ ನೀಡಿದ್ದಾರೆ. ಮೋಹನ್ ಸಿಂಗ್ ರಾತ್ವಾ ನಂತರ ಇದೀಗ ಭಗವಾನ್ ಬರಾಡ್ ಕೂಡ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದಾರೆ.

Two Congress leaders resigned
ಇಬ್ಬರು ಕಾಂಗ್ರೆಸ್ ನಾಯಕರು ರಾಜೀನಾಮೆ
author img

By

Published : Nov 9, 2022, 4:03 PM IST

ಗಾಂಧಿನಗರ( ಗುಜರಾತ್): ವಿಧಾನಸಭೆ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ರಾಜಕೀಯ ವಾತಾವರಣದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಒಂದಲ್ಲ ಒಂದು ಆಘಾತಗಳು ಎದುರಾಗುತ್ತಿವೆ. ಶಾಸಕರು ಪಕ್ಷ ತೊರೆಯುತ್ತಿದ್ದಾರೆ. ಮೋಹನ್ ರಾತ್ವಾ ನಂತರ ಇದೀಗ ಭಗವಾನ್ ಬರಾಡ್ ಕೂಡ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದಾರೆ.

24 ಗಂಟೆಯಲ್ಲಿ ಕಾಂಗ್ರೆಸ್​ನ ಇಬ್ಬರು ದೊಡ್ಡ ನಾಯಕರು ರಾಜೀನಾಮೆ ನೀಡಿದ್ದಾರೆ. 10 ಬಾರಿ ಶಾಸಕರಾಗಿದ್ದ ಹಿರಿಯ ಕಾಂಗ್ರೆಸ್ ನಾಯಕ ಮೋಹನಸಿಂಗ್ ರಥ್ವಾ ನಿನ್ನೆ (ಮಂಗಳವಾರ) ಬೆಳಗ್ಗೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆಗೊಂಡರು. ಇಂದು ಭಗವಾನ್ ಬರಾಡ್​ ಕೂಡ ಕಾಂಗ್ರೆಸ್ ತೊರೆದಿದ್ದಾರೆ.

ಈ ಶಾಸಕರ ರಾಜೀನಾಮೆಯಿಂದ ಕಾಂಗ್ರೆಸ್ 2 ದೊಡ್ಡ ನಾಯಕರನ್ನು ಕಳೆದುಕೊಂಡಿದೆ. ಇದಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ವಕ್ತಾರ ಮನೀಶ್ ದೋಷಿ" ಪಕ್ಷದ ಯಾವುದೇ ದೊಡ್ಡ ನಾಯಕರು ರಾಜೀನಾಮೆ ನೀಡಿದರೂ, ಅವುಗಳ ಹಿಂದಿನ ಕಾರಣವನ್ನು ಜನರಿಗೆ ಸ್ಪಷ್ಟಪಡಿಸಬೇಕು. ಬಿಜೆಪಿ ವಿಧ್ವಂಸಕ ನೀತಿ ಅನುಸರಿಸುತ್ತಿದೆ. ಇದು ರಾಜೀನಾಮೆಗೆ ಕಾರಣವಾಗುತ್ತಿದೆ" ಎಂದು ಬಿಜೆಪಿ ವಿರುದ್ಧ ಆರೋಪಿಸಿದೆ.

ಈ ಬಾರಿ ಆಮ್ ಆದ್ಮಿ ಪಕ್ಷವೂ ಪ್ರಬಲವಾಗಿ ಚುನಾವಣೆ ಎದುರಿಸಲು ಸಜ್ಜಾಗಿದೆ. ಎಎಪಿ ಹಾಗೂ ಕಾಂಗ್ರೆಸ್​ನ್ನು ಸೋಲಿಸಲು ಬಿಜೆಪಿ ಶ್ರಮಿಸಬೇಕಿದೆ ಎಂದರು.

ಇದನ್ನೂ ಓದಿ:ಅಂದು ಪಂಚರಾಜ್ಯ, ಇಂದು ಗುಜರಾಜ್ ಚುನಾವಣೆ, ಬೊಮ್ಮಾಯಿ ಸಂಪುಟ ವಿಸ್ತರಣೆಗೆ ಕೂಡಿ ಬರದ ಮುಹೂರ್ತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.