ETV Bharat / bharat

ಅಪ್ರಾಪ್ತೆ ಮೇಲೆ ತಿಂಗಳಲ್ಲಿ ಆರು ಬಾರಿ ಅತ್ಯಾಚಾರ: ವಿಡಿಯೋ ಮಾಡಿ ಬ್ಲ್ಯಾಕ್ ಮೇಲ್ - ಗ್ಯಾಂಗ್ ರೇಪ್

ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿರುವ ಆರೋಪದಡಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ತಲೆಮರೆಸಿಕೊಂಡಿರುವ ಮತ್ತೋರ್ವ ಆರೋಪಿ ಪತ್ತೆಗೆ ಶೋಧ ಕಾರ್ಯ ಮುಂದುವರಿದಿದೆ.

two arrested under rape case in Rajasthan
ರಾಜಸ್ಥಾನ ಅತ್ಯಾಚಾರ ಕೇಸ್
author img

By

Published : Jun 5, 2022, 10:59 AM IST

ಭರತ್​​​ಪುರ(ರಾಜಸ್ಥಾನ): ಅಪ್ತಾಪ್ತೆ ಮೇಲೆ ಮೂವರು ಕಾಮುಕರು ಒಂದು ತಿಂಗಳಲ್ಲಿ ಆರು ಬಾರಿ ಅತ್ಯಾಚಾರವೆಸಗಿರುವ ಘಟನೆ ಭರತ್‌ಪುರ ನಗರದ ಮಥುರಾ ಗೇಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ. ನಾಚಿಕೆಗೇಡಿನ ಸಂಗತಿ ಎಂದರೆ ಅತ್ಯಾಚಾರವೆಸಗಲು ಆರೋಪಿಗಳಿಗೆ ಬೇರೆ ಇಬ್ಬರು ಯುವತಿಯರು ಸಹಾಯ ಮಾಡಿದ್ದಾರೆಂದು ತಿಳಿದುಬಂದಿದೆ.

ಅಶ್ಲೀಲ ವಿಡಿಯೋ ಮತ್ತು ಫೋಟೋಗಳನ್ನು ವೈರಲ್ ಮಾಡುವುದಾಗಿ ಅಪ್ರಾಪ್ತೆಗೆ ಬೆದರಿಸಿ ಅತ್ಯಾಚಾರ ಮಾಡಿದ್ದಾರೆ. ಸಂತ್ರಸ್ತೆ ತನ್ನ ತಾಯಿ ಬಳಿ ಈ ವಿಷಯ ತಿಳಿಸಿದ್ದ ಬಳಿಕ ಮಥುರಾ ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ಈಗಾಗಲೇ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ತಲೆಮರೆಸಿಕೊಂಡಿರುವ ಮತ್ತೋರ್ವನ ಪತ್ತೆಗೆ ಶೋಧ ಕಾರ್ಯ ನಡೆಯುತ್ತಿದೆ.

ಮೇ 3 ರಂದು 16 ವರ್ಷದ ಮಗಳನ್ನು ವಿಜಯ್ ಹನುಮಾನ್ ದೇವಸ್ಥಾನದ ಬಳಿಯ ಲೋಹಾಘರ್ ರೆಸ್ಟೋರೆಂಟ್‌ನಲ್ಲಿ ಕೆಲಸ ಮಾಡುವ ಮೋನು, ತರ್ನವ್ ಮತ್ತು ಸಂತೋಷ್ ಎಂಬ ಯುವಕರು ಇಬ್ಬರು ಸ್ನೇಹಿತೆಯರ ಸಹಾಯದಿಂದ ಕರೆದೊಯ್ದಿದ್ದಾರೆ. ಅವರ ಯಾವುದೋ ಆಮಿಷಕ್ಕೆ ಒಳಗಾಗಿದ್ದಾಳೆ. ನಂತರ ಮಾದಕ ದ್ರವ್ಯ ಕುಡಿಸಿ ಮಗಳ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ, ಮೊಬೈಲ್‌ನಿಂದ ಅಶ್ಲೀಲ ಫೋಟೋ, ವಿಡಿಯೋ ತೆಗೆದಿದ್ದಾರೆ ಎಂದು ಬಾಲಕಿ ತಾಯಿ ದೂರು ಸಲ್ಲಿಸಿದ್ದಾರೆ.

ಅಷ್ಟೇ ಅಲ್ಲದೇ, ಬಾಲಕಿಗೆ ಪ್ರಜ್ಞೆ ಬಂದಾಗ ಅಶ್ಲೀಲ ವಿಡಿಯೋ, ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಮತ್ತು ಘಟನೆಯ ಬಗ್ಗೆ ಯಾರಿಗಾದರೂ ಹೇಳಿದರೆ ನಿನ್ನ ತಾಯಿಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ. ಇದರಿಂದ ಬಾಲಕಿ ಹೆದರಿ ಯಾರಿಗೂ ಏನನ್ನೂ ಹೇಳಿರಲಿಲ್ಲ. ಅದರ ನಂತರ ಮೇ 7, ಮೇ 17, ಮೇ 27 ರಂದು ಆರೋಪಿಗಳು ತಾವು ಕೆಲಸ ಮಾಡುವ ರೆಸ್ಟೋರೆಂಟ್‌ಗೆ ಬಾಲಕಿಯನ್ನು ಕರೆದೊಯ್ದು ಅತ್ಯಾಚಾರ ಎಸಗಿದ್ದರು. ಅಪ್ರಾಪ್ತೆ ಗರ್ಭಿಣಿಯಾಗುವುದನ್ನು ತಡೆಯಲು ಆರೋಪಿಗಳು ಆಕೆಗೆ ಬಲವಂತವಾಗಿ ಗರ್ಭನಿರೋಧಕ ಮಾತ್ರೆಗಳನ್ನು ತಿನ್ನಿಸಿದ್ದಾರೆ ಎಂದು ದೂರಲಾಗಿದೆ.

ಇದನ್ನೂ ಓದಿ: COVID: ಭಾರತದಲ್ಲಿ 4,270 ಹೊಸ ಕೇಸ್​​ ಪತ್ತೆ, 15 ಮಂದಿ ಸಾವು

ಅಷ್ಟೇ ಅಲ್ಲ ಬಾಲಕಿಯನ್ನು ಬೇರೆಡೆ ಕರೆದುಕೊಂಡು ಹೋಗಿ ಅಲ್ಲಿನ ಹೋಟೆಲ್‌ಗೆ ಕರೆದೊಯ್ದಿದ್ದಾರೆ ಎಂದು ಸಂತ್ರಸ್ತೆಯ ತಾಯಿ ದೂರು ದಾಖಲಿಸಿದ್ದಾರೆ. ಮೂವರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಸಾಮೂಹಿಕ ಅತ್ಯಾಚಾರ ಪ್ರಕರಣ ದಾಖಲಾಗಿದೆ. ಮೋನು ಮತ್ತು ತರ್ನವ್​​ನನ್ನು ಬಂಧಿಸಿ, ಸಂತೋಷ್ ಪತ್ತೆಗೆ ಶೋಧ ಕಾರ್ಯ ಮುಂದುವರಿದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.