ETV Bharat / bharat

ಅಸ್ಸೋಂನಲ್ಲಿ ಇಬ್ಬರು ಶಂಕಿತ ಉಗ್ರರ ಬಂಧನ - ಈಟಿವಿ ಭಾರತ ಕನ್ನಡ

ಅಸ್ಸಾಂನ ಮೊರಿಗಾಂವ್ ಜಿಲ್ಲೆಯಲ್ಲಿ ಅನ್ಸರುಲ್ಲಾ ಬಾಂಗ್ಲಾ ತಂಡದ ಇಬ್ಬರು ಸದಸ್ಯರನ್ನು ಪೊಲೀಸರು ಬಂಧಿಸಿದ್ದಾರೆ.

two-ansarullah-bangla-team-members-arrested-in-assams-morigaon-district
ಅಸ್ಸಾಂನಲ್ಲಿ ಇಬ್ಬರು ಅನ್ಸರುಲ್ಲಾ ಬಾಂಗ್ಲಾ ತಂಡದ ಸದಸ್ಯರ ಬಂಧನ
author img

By

Published : Sep 12, 2022, 10:56 PM IST

ಗುವಾಹಟಿ ( ಅಸ್ಸೋಂ): ಅಸ್ಸೋಂನಲ್ಲಿ ಅನ್ಸರುಲ್ಲಾ ಬಾಂಗ್ಲಾ ತಂಡದ ಇಬ್ಬರು ಸದಸ್ಯರನ್ನು ಪೊಲೀಸರು ಬಂಧಿಸಿದ್ದಾರೆ. ಕಳೆದ ರಾತ್ರಿ ನಾಗಾವ್ ಮತ್ತು ಮೋರಿಗಾಂವ್‌ನಲ್ಲಿ ಅನ್ಸರುಲ್ಲಾ ಬಾಂಗ್ಲಾ ತಂಡದ ಸದಸ್ಯರನ್ನು ಬಂಧಿಸಲಾಗಿದೆ.

ಬಂಧಿತರನ್ನು ಮೊರಿಗಾಂವ್ ಜಿಲ್ಲೆಯ ಮೊಯಿರಾಬರಿಯ ಇಕ್ರಾಮುಲ್ ಹುಸೇನ್, ನಾಗಾವ್‌ನ ಭಕತ್‌ಗಾಂವ್‌ನ ಮುಸಾದ್ದಿಕ್ ಹುಸೇನ್ ಎಂದು ಗುರುತಿಸಲಾಗಿದೆ. ಬಂಧಿತ ಇಕ್ರಾಮುಲ್ ವೃತ್ತಿಯಲ್ಲಿ ಚಾಲಕ ಮತ್ತು ಕೃಷಿಕನಾಗಿದ್ದು, ಬಂಧಿತ ಮುಸಾದಿಕ್ ಗರೈಮಾರಿಯ ಮದ್ರಸಾ ಶಿಕ್ಷಕನಾಗಿದ್ದನು.

ಬಂಧಿತರಿಂದ ಹಲವು ಆಕ್ಷೇಪಾರ್ಹ ದಾಖಲೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿಗಳು ಪೊಲೀಸರ ವಿಚಾರಣೆ ವೇಳೆ ಆಘಾತಕಾರಿ ಮಾಹಿತಿಗಳನ್ನು ನೀಡಿದ್ದಾರೆ ಎಂದು ತಿಳಿದುಬಂದಿದೆ. ಈ ಹಿಂದೆ ಬಂಧಿತನಾಗಿದ್ದ ಮುಫ್ತಿ ಮುಸ್ತಫಾ ನೀಡಿದ ಮಾಹಿತಿ ಮೇರೆಗೆ ಈ ಇಬ್ಬರನ್ನು ಪೊಲೀಸರು ಬಂಧಿಸಿದ್ದರು.

ಪೊಲೀಸರ ಪ್ರಕಾರ, ಮೊರಿಗಾಂವ್‌ನ ಮಿಲನ್‌ಪುರ ಪ್ರದೇಶದಲ್ಲಿ ಕೆಲವು ತಿಂಗಳ ಹಿಂದೆ ಜಿಹಾದಿ ಚಟುವಟಿಕೆಗಾಗಿ ತರಬೇತಿ ಶಿಬಿರವನ್ನು ನಡೆಸಲಾಗಿತ್ತು. ಜಿಹಾದಿ ಚಟುವಟಿಕೆಗೆ ಜನರನ್ನು ಪ್ರೇರೇಪಿಸಲು ಬಾಂಗ್ಲಾದೇಶದ ಉಗ್ರನೊಬ್ಬ ಭಾಗವಹಿಸಿದ್ದ ಎಂದು ಹೇಳಲಾಗಿದೆ. ಸದ್ಯ ಬಂಧಿತರ ವಿಚಾರಣೆಯನ್ನು ಪೊಲೀಸರು ಮುಂದುವರಿಸಿದ್ದಾರೆ.

ಇದನ್ನೂ ಓದಿ : ಚಲಿಸುತ್ತಿದ್ದ ಶಾಲಾ ಬಸ್​ನಲ್ಲಿ ಏಕಾಏಕಿ ಬೆಂಕಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.