ಶಿವಸಾಗರ್ (ಅಸ್ಸೋಂ): ಉಗ್ರರಿಂದ ಅಪಹರಣಕ್ಕೊಳಗಾಗಿದ್ದ ತೈಲ ಮತ್ತು ನೈಸರ್ಗಿಕ ಅನಿಲ ನಿಗಮದ (ಒಎನ್‌ಜಿಸಿ) ಮೂವರು ಸಿಬ್ಬಂದಿಯ ಪೈಕಿ ಇಬ್ಬರನ್ನು ಭಾರತೀಯ ಸೇನೆ ಹಾಗೂ ಅಸ್ಸೋಂ ರೈಫಲ್ಸ್ ರಕ್ಷಿಸಿದೆ.
ಏಪ್ರಿಲ್ 21ರಂದು ಶಿವಸಾಗರ ಜಿಲ್ಲೆಯ ಪ್ರದೇಶದಲ್ಲಿ ಯುನೈಟೆಡ್ ಲಿಬರೇಶನ್ ಫ್ರಂಟ್ ಆಫ್ ಅಸ್ಸೋಂ-ಇಂಡಿಪೆಂಡೆಂಟ್ (ULFA-I) ಎಂಬ ನಿಷೇಧಿತ ಸಂಘಟನೆಯ ಉಗ್ರರು ಒಎನ್‌ಜಿಸಿಯ ಇಬ್ಬರು ಸಹಾಯಕ ಜೂನಿಯರ್ ಎಂಜಿನಿಯರ್ಗಳಾದ ಮೋಹನ್ ಗೊಗೊಯ್ (35), ಅಲಕೇಶ್ ಸೈಕಿಯಾ (28) ಹಾಗೂ ಜೂನಿಯರ್ ಟೆಕ್ನಿಶಿಯನ್ ರಿತುಲ್ ಸೈಕಿಯಾ (33) ಅವರನ್ನು ಅಪಹರಿಸಿದ್ದರು.
ಇದನ್ನೂ ಓದಿ: ಆಂಧ್ರಪ್ರದೇಶದ ಪೂರ್ವ ಗೋದಾವರಿಯಲ್ಲಿನ ಒಎನ್‌ಜಿಸಿಯಲ್ಲಿ ಭಾರಿ ಅಗ್ನಿ ಅವಘಡ
ಜಂಟಿ ಕಾರ್ಯಾಚರಣೆ ಕೈಗೊಂಡಿದ್ದ ಭಾರತೀಯ ಸೇನೆ ಹಾಗೂ ಅಸ್ಸೋಂ ರೈಫಲ್ಸ್, ಇದೀಗ ಮೋಹನ್ ಗೊಗೊಯ್ ಹಾಗೂ ಅಲಕೇಶ್ ಸೈಕಿಯಾರನ್ನು ರಕ್ಷಿಸಿದ್ದು, ರಿತುಲ್ ಸೈಕಿಯಾರಿಗಾಗಿ ಕಾರ್ಯಾಚರಣೆ ಮುಂದುವರೆದಿದೆ. ಎಕೆ 47 ಬಂದೂಕನ್ನು ಭದ್ರತಾ ಪಡೆಗಳು ವಶಪಡಿಸಿಕೊಂಡಿವೆ.