ಗುವಾಹಟಿ : ಅಸ್ಸೋಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ತಮ್ಮ ಪತ್ನಿ ರಿನಿಕಿ ಭುಯಾನ್ ಶರ್ಮಾ ಅವರಿಗೆ ಸಬ್ಸಿಡಿ ಭಾಗವಾಗಿ 10 ಕೋಟಿ ರೂಪಾಯಿಯನ್ನು ಕೊಡಿಸಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಆರೋಪಿಸಿದ್ದಾರೆ. ಈ ವಿಚಾರವಾಗಿ ಇಬ್ಬರ ನಡುವೆ ಟ್ವಿಟ್ಟರ್ನಲ್ಲಿ ಕದನವೇ ಏರ್ಪಟ್ಟಿದೆ.
ಭಾರತೀಯ ರೈತರ ಆದಾಯವನ್ನು ದ್ವಿಗುಣಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಕಿಸಾನ್ ಸಮ್ಮಾನ್ ಯೋಜನೆಯನ್ನು ಪ್ರಾರಂಭಿಸಿದ್ದಾರೆ. ಆದರೆ ಅಸ್ಸೋಂನಲ್ಲಿ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ತಮ್ಮ ಪ್ರಭಾವವನ್ನು ಬಳಸಿ ತಮ್ಮ ಪತ್ನಿಯ ಸಂಸ್ಥೆಗೆ ಕ್ರೆಡಿಟ್ ಲಿಂಕ್ಡ್ ಸಬ್ಸಿಡಿ ಭಾಗವಾಗಿ 10 ಕೋಟಿ ರೂಪಾಯಿಯನ್ನು ಕೊಡಿಸಿದ್ದಾರೆ ಎಂದು ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಆರೋಪಿಸಿದ್ದರು.
ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ನನ್ನ ಪತ್ನಿ ಅಥವಾ ಅವಳು ಸಂಬಂಧ ಹೊಂದಿರುವ ಕಂಪನಿಯು ಭಾರತ ಸರ್ಕಾರದಿಂದ ಯಾವುದೇ ಆರ್ಥಿಕ ಸಹಾಯಧನವನ್ನು ಪಡೆದಿಲ್ಲ ಎಂದು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
-
I completely deny and reiterate that my wife and the company she is associated with, Pride East Entertainment Pvt Limited, have not received any subsidies from the Government of India. https://t.co/VBDGOuX29q
— Himanta Biswa Sarma (@himantabiswa) September 13, 2023 " class="align-text-top noRightClick twitterSection" data="
">I completely deny and reiterate that my wife and the company she is associated with, Pride East Entertainment Pvt Limited, have not received any subsidies from the Government of India. https://t.co/VBDGOuX29q
— Himanta Biswa Sarma (@himantabiswa) September 13, 2023I completely deny and reiterate that my wife and the company she is associated with, Pride East Entertainment Pvt Limited, have not received any subsidies from the Government of India. https://t.co/VBDGOuX29q
— Himanta Biswa Sarma (@himantabiswa) September 13, 2023
ಪ್ರೈಡ್ ಈಸ್ಟ್ ಎಂಟರ್‌ಟೈನ್‌ಮೆಂಟ್ ಮೀಡಿಯಾ ಗ್ರೂಪ್‌ನ ಅಧ್ಯಕ್ಷೆ ಮತ್ತು ವ್ಯವಸ್ಥಾಪಕ ನಿರ್ದೇಶಕಿ ರಿನಿಕಿ ಭುಯಾನ್ ಶರ್ಮಾ ಅವರು ಎರಡು ವರ್ಷಗಳ ಹಿಂದೆ ಹಿಮಂತ ಮುಖ್ಯಮಂತ್ರಿಯಾದ ನಂತರ ನಾಗಾಂವ್ ಜಿಲ್ಲೆಯ ಕಲಿಯಾಬೋರ್ ದರ್ಗಾಜಿ ಗ್ರಾಮದಲ್ಲಿ 50 ಬಿಘಾ ಎರಡು ಕಟ್ಟೆ ಕೃಷಿ ಭೂಮಿಯನ್ನು ಖರೀದಿಸಿದ್ದಾರೆ ಎಂಬ ಆರೋಪಗಳು ಕೇಳಿಬಂದಿದ್ದವು.
-
I would like to reiterate again with full responsibility that my wife and the company she is associated with have not taken or received any subsidies from the Government of India. https://t.co/PeDhTfrlZq
— Himanta Biswa Sarma (@himantabiswa) September 13, 2023 " class="align-text-top noRightClick twitterSection" data="
">I would like to reiterate again with full responsibility that my wife and the company she is associated with have not taken or received any subsidies from the Government of India. https://t.co/PeDhTfrlZq
— Himanta Biswa Sarma (@himantabiswa) September 13, 2023I would like to reiterate again with full responsibility that my wife and the company she is associated with have not taken or received any subsidies from the Government of India. https://t.co/PeDhTfrlZq
— Himanta Biswa Sarma (@himantabiswa) September 13, 2023
ಸೀಲಿಂಗ್ ಕಾನೂನಿನ ಪ್ರಕಾರ, ಯಾವುದೇ ವ್ಯಕ್ತಿ 49. 5 ಬಿಘಾಗಳಿಗಿಂತ ಹೆಚ್ಚಿನ ಕೃಷಿ ಭೂಮಿಯನ್ನು ಹೊಂದುವಂತಿಲ್ಲ. ಆದರೆ ಸಿಎಂ ಬಿಸ್ವಾ ಶರ್ಮ ಅವರ ಪತ್ನಿ ಭೂಮಿಯನ್ನು ಖರೀದಿಸಿದ ನಂತರ ಅದನ್ನು ಕೈಗಾರಿಕಾ ಭೂಮಿ ಎಂದು ಬದಲಾಯಿಸಲಾಗಿದೆ ಎಂದು ಆರೋಪವಿದೆ.
-
I would like to clarify that neither my wife nor the company she is associated with has ever received any financial subsidies from the Government of India https://t.co/oqGG21nEp6
— Himanta Biswa Sarma (@himantabiswa) September 13, 2023 " class="align-text-top noRightClick twitterSection" data="
">I would like to clarify that neither my wife nor the company she is associated with has ever received any financial subsidies from the Government of India https://t.co/oqGG21nEp6
— Himanta Biswa Sarma (@himantabiswa) September 13, 2023I would like to clarify that neither my wife nor the company she is associated with has ever received any financial subsidies from the Government of India https://t.co/oqGG21nEp6
— Himanta Biswa Sarma (@himantabiswa) September 13, 2023
ಪ್ರೈಡ್ ಈಸ್ಟ್ ಎಂಟರ್‌ಟೈನ್‌ಮೆಂಟ್ ಕೂಡ ಅಲ್ಲಿ ಆಹಾರ ಸಂಸ್ಕರಣಾ ಘಟಕ ಸ್ಥಾಪಿಸಲು ಪ್ರಧಾನ ಮಂತ್ರಿ ಕಿಸಾನ್ ಸಂಪದಾ ಯೋಜನೆಯಿಂದ 10 ಕೋಟಿ ರೂಪಾಯಿ ಸರ್ಕಾರದ ನೆರವು ಪಡೆದಿದೆ ಎಂದು ಆರೋಪಿಸಲಾಗಿದೆ. ಕೇವಲ 10 ತಿಂಗಳಲ್ಲಿ ಸಂಪೂರ್ಣ ಪ್ರಕ್ರಿಯೆ ಪೂರ್ಣಗೊಂಡಿದೆ. ರಿನಿಕಿ ಭೂಯಾನ್ ಶರ್ಮಾ ಅವರ ಕಂಪನಿಯು ಹಲವಾರು ಸುದ್ದಿ ಮತ್ತು ಮನರಂಜನಾ ವಾಹಿನಿಗಳು, ಚಹಾ ತೋಟಗಳು, ಹೋಟೆಲ್‌ಗಳು, ರೆಸಾರ್ಟ್‌ಗಳು, ಶಾಲೆಗಳು ಮತ್ತು ಪತ್ರಿಕೆಗಳನ್ನು ನಡೆಸುತ್ತದೆ ಮತ್ತು ಅನೇಕ ವ್ಯವಹಾರಗಳಲ್ಲಿ ತೊಡಗಿಸಿಕೊಂಡಿದೆ ಎಂಬುದಾಗಿ ಆರೋಪಗಳು ಕೇಳಿ ಬಂದಿವೆ.
ಸಂಸದ ಗೌರವ್ ಗೊಗೊಯ್ ಪ್ರತಿಕ್ರಿಯಿಸಿ, "ಆಹಾರ ಸಂಸ್ಕರಣಾ ಸಚಿವಾಲಯದ ವೆಬ್‌ಸೈಟ್‌ನಲ್ಲಿ ಅವರು ಸಂಬಂಧ ಹೊಂದಿರುವ ವ್ಯಕ್ತಿ ಮತ್ತು ಕಂಪನಿಯ ಹೆಸರನ್ನು ಸ್ಪಷ್ಟವಾಗಿ ತೋರಿಸುತ್ತದೆ. 10 ಕೋಟಿ ರೂ. ಸರ್ಕಾರದ ಅನುದಾನವನ್ನು ಸಹ ಅನುಮೋದಿಸಲಾಗಿದೆ'' ಎಂದಿದ್ದಾರೆ.
ಟ್ವಿಟರ್‌ನಲ್ಲಿ ಇಬ್ಬರ ನಡುವಿನ ಮಾತಿನ ಸಮರ ಹೆಚ್ಚಾಗುತ್ತಿದ್ದಂತೆ, ಆಪಾದಿತ ಸಬ್ಸಿಡಿ ಮತ್ತು ಭೂಸ್ವಾಧೀನದ ಸುತ್ತಲಿನ ವಿವಾದವು ಸಾರ್ವಜನಿಕ ಗಮನವನ್ನು ಸೆಳೆಯುತ್ತಲೇ ಇದೆ. ಎರಡೂ ಕಡೆಯವರು ತಮ್ಮ ನಿಲುವುಗಳಲ್ಲಿ ದೃಢವಾಗಿ ನಿಂತಿದ್ದಾರೆ.
ಇದನ್ನೂ ಓದಿ: INDIA VS NDA: ಟ್ವಿಟರ್, ಫೇಸ್ಬುಕ್ ಖಾತೆಗಳಲ್ಲಿ 'ಇಂಡಿಯಾ' ಬದಲು 'ಭಾರತ್' ಎಂದು ಬದಲಾಯಿಸಿದ ಅಸ್ಸೋಂ ಸಿಎಂ