ಹೈದರಾಬಾದ್: ಜನಪ್ರಿಯ ಮೈಕ್ರೋಬ್ಲಾಗಿಂಗ್ ತಾಣ ಟ್ವಿಟರ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಾಕ್ ಡಾರ್ಸಿ ತಮ್ಮ ಹುದ್ದೆಯಿಂದ ಕೆಳಗಿಳಿಯುವುದಾಗಿ ಘೋಷಣೆ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಖುದ್ದಾಗಿ ಟ್ವೀಟ್ ಮಾಡಿ ಮಾಹಿತಿ ಹೊರಹಾಕಿದ್ದಾರೆ.
ಜಾಕ್ ಡಾರ್ಸಿ ಸ್ಥಾನಕ್ಕೆ ಭಾರತೀಯ ಮೂಲದ ಪರಾಗ್ ಅಗರ್ವಾಲ್ ಆಯ್ಕೆಯಾಗಿದ್ದಾರೆ. ಇವರು 2017ರಿಂದ ಟ್ವಿಟರ್ ಸಿಟಿಒ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
-
not sure anyone has heard but,
— jack⚡️ (@jack) November 29, 2021 " class="align-text-top noRightClick twitterSection" data="
I resigned from Twitter pic.twitter.com/G5tUkSSxkl
">not sure anyone has heard but,
— jack⚡️ (@jack) November 29, 2021
I resigned from Twitter pic.twitter.com/G5tUkSSxklnot sure anyone has heard but,
— jack⚡️ (@jack) November 29, 2021
I resigned from Twitter pic.twitter.com/G5tUkSSxkl
ಕಳೆದ 16 ವರ್ಷಗಳಿಂದ ಸಿಇಒ ಆಗಿ ಸೇವೆ ಸಲ್ಲಿಸಿರುವ ಜಾಕ್, ಇದೀಗ ಟ್ವಿಟರ್ ಬಿಡಲು ನಿರ್ಧರಿಸಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಟ್ವಿಟರ್ನ ಹೊಸ ಸಿಇಒ ಆಗಿರುವ ಪರಾಗ್ ಅವರಲ್ಲಿ ಆಳವಾದ ನಂಬಿಕೆ ಇದೆ. ಅವರು ಕೌಶಲ್ಯದಿಂದ ಕೆಲಸ ಮಾಡಲಿದ್ದಾರೆಂದು ತಿಳಿಸಿದ್ದಾರೆ. ಆದರೆ ತಮ್ಮ ನಿರ್ಧಾರಕ್ಕೆ ಅವರು ಕಾರಣ ತಿಳಿಸಿಲ್ಲ.
ಸುದೀರ್ಘವಾದ ಪತ್ರ ಬರೆದ ಜಾಕ್
ಸಹ ಸಂಸ್ಥಾಪಕ ಸ್ಥಾನದಿಂದ ಸಿಇಒವರೆಗೆ, ಎಕ್ಸಿಕ್ ಚೇರ್ನಿಂದ ಮಧ್ಯಂತರ ಸಿಇಒವರೆಗೆ ಕಂಪನಿಯಲ್ಲಿ 16 ವರ್ಷಗಳ ಕಾಲ ಕೆಲಸ ಮಾಡಿರುವ ನಾನು ಕೊನೆಗೆ ಹೊರಡುವ ಸಮಯ ಬಂದಿದೆ. ಪರಾಗ್ ಅಗರ್ವಾಲ್ ನಮ್ಮ ಸಿಇಒ ಆಗುತ್ತಿದ್ದಾರೆ ಎಂದಿದ್ದಾರೆ.