ಮುಂಬೈ : ಟೆಲಿವಿಷನ್ ನಟಿಯೊಬ್ಬರು ತಮ್ಮ ಮೇಲೆ ಆಯುಷ್ ತಿವಾರಿ ಎಂಬುವರು ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಸಂಬಂಧ ವರ್ಸೋವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ವೆರ್ಸೋವಾ ಠಾಣೆಯ ಪೊಲೀಸ ಅಧಿಕಾರಿಯೊಬ್ಬರ ಪ್ರಕಾರ, ಮದುವೆಯ ನೆಪದಲ್ಲಿ ಆರೋಪಿ ತನ್ನ ಮೇಲೆ ಎರಡು ವರ್ಷಗಳ ಅವಧಿಯಲ್ಲಿ ಅತ್ಯಾಚಾರ ಎಸಗಿದ್ದಾನೆ ಎಂದು ನಟಿ ದೂರಿದ್ದಾರೆ. ನಟಿ ನವೆಂಬರ್ 26 ರಂದು ದೂರು ದಾಖಲಿಸಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಯನ್ನು ಇನ್ನೂ ಬಂಧಿಸಿಲ್ಲ, ಆದರೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.