ಹೈದರಾಬಾದ್ : ತಿರುಪತಿಯಲ್ಲಿರುವ ಅಂಜನಾದ್ರಿ ಬೆಟ್ಟದಲ್ಲಿಯೇ ಅಂಜನೇಯ ಜನಿಸಿದ್ದಾನೆಂದು ಟಿಟಿಡಿ ಪರವಾಗಿ ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಉಪಕುಲಪತಿ ಆಚಾರ್ಯ ಮುರಳೀಧರ ಶರ್ಮಾ ಹೇಳಿದ್ದಾರೆ.
ಪುರಾವೆ ಸಂಗ್ರಹಿಸಲು ವಿಶೇಷ ಸಮಿತಿ
ಹನುಮನ ಜನ್ಮಸ್ಥಳದ ಬಗ್ಗೆ ಪುರಾವೆ ಸಂಗ್ರಹಿಸಲು ಟಿಟಿಡಿ ಕಳೆದ ಡಿಸೆಂಬರ್ 15ರಂದು ಸಮಿತಿಯೊಂದನ್ನು ರಚಿಸಿತ್ತು. ಸಮಿತಿಯ ಸದಸ್ಯರಾದ ವಿದ್ವಾಂಸರು ಹಲವು ಸ್ಥಳಗಳಿಗೆ ಭೇಟಿ ನೀಡಿ ಸಂಶೋಧನೆ ನಡೆಸಿದ್ದು, ಹನುಮ ಅಂಜನಾದ್ರಿಯಲ್ಲಿಯೇ ಜನಿಸಿದ್ದಾನೆ ಎಂಬುವುದನ್ನು ಸಾಬೀತುಪಡಿಸಲು ಬಲವಾದ ಸಾಕ್ಷಿಗಳನ್ನು ಸಂಗ್ರಹಿಸಿದ್ದಾರೆ. ನಮ್ಮ ಸಮಿತಿಯು ನಾಲ್ಕು ತಿಂಗಳಿನಿಂದ ಅಂಜನೇಯಸ್ವಾಮಿಯ ಜನ್ಮಸ್ಥಳವನ್ನು ಹುಡುಕುತ್ತಿತ್ತು. ಕೊನೆಗೂ ಆ ಜನ್ಮಸ್ಥಳವನ್ನು ಪತ್ತೆ ಮಾಡಲಾಗಿದೆ ಎಂದು ಆಚಾರ್ಯ ಮುರಳೀಧರ ಶರ್ಮಾ ತಿಳಿಸಿದ್ದಾರೆ.
ಶೋಧಕ್ಕೆ ಸಂಬಂಧಿಸಿದ ಸಾಕ್ಷ್ಯಗಳನ್ನು ಈ ಸಮಿತಿ ಬಹಿರಂಗಪಡಿಸಿದೆ. ಈ ಸಮಿತಿಯಲ್ಲಿ ಮುರಳೀಧರ ಶರ್ಮಾ, ಎಸ್‌ವಿ ವೈದಿಕ ವಿಶ್ವವಿದ್ಯಾಲಯದ ಉಪಕುಲಪತಿ ಆಚಾರ್ಯ ಸನ್ನಿಧನ ಸುದರ್ಶನಂ ಶರ್ಮಾ, ಆಚಾರ್ಯ ರಾಣಿ ಸದಾಶಿವಮೂರ್ತಿ, ಆಚಾರ್ಯ ಜನಮರ್ಧಿ ರಾಮಕೃಷ್ಣ, ಆಚಾರ್ಯ ಶಂಕರ ನಾರಾಯಣಂ, ಇಸ್ರೋ ವಿಜ್ಞಾನಿ ಮತ್ತು ರಾಜ್ಯ ನಿರ್ದೇಶಕರು ಸೇರಿದ್ದಾರೆ. ಟಿಟಿಡಿಯ ಎಸ್‌ವಿ ಇನ್‌ಸ್ಟಿಟ್ಯೂಟ್ ಆಫ್ ಥಿಯಲಾಜಿಕಲ್ ಸ್ಟಡೀಸ್‌ನ ಪ್ರಾಜೆಕ್ಟ್ ಆಫೀಸರ್ ಡಾ.ಅಕೆಲ್ಲಾ ವಿಭೀಷಣ ಶರ್ಮಾ ಅವರು ಸಮಿತಿಯ ಕನ್ವೀನರ್ ಆಗಿದ್ದಾರೆ.
ವಿದ್ವಾಂಸರು ಸಂಗ್ರಹಿಸಿದ ಐತಿಹಾಸಿಕ ಪುರಾವೆಗಳು, ಸಂಶೋಧನೆಗಳ ವಿವರಗಳು ಮತ್ತು ಮಾಹಿತಿಯ ಆಧಾರದ ಮೇಲೆ ತಿರುಮಲದ ಟಿಟಿಡಿ ಅಧಿಕಾರಿಗಳು ಹನುಮನ ಜನ್ಮಸ್ಥಳದ ಬಗ್ಗೆ ಮಾಹಿತಿ ಬಿಚ್ಚಿಟ್ಟಿದ್ದಾರೆ. ಎಲ್ಲಾ ಐತಿಹಾಸಿಕ ಮತ್ತು ಸಾಹಿತ್ಯಿಕ ಪುರಾವೆಗಳು ಮತ್ತು ವಿವರಗಳೊಂದಿಗೆ ಟಿಟಿಡಿ ತಿರುಮಲದ ಅಂಜನಾದ್ರಿ ಹನುಮನ ಜನ್ಮಸ್ಥಳ ಎಂದು ಘೋಷಿಸಿದೆ.
ತಿರುಮಲ ಬೆಟ್ಟದ ಅಂಜನಾದ್ರಿ ಹನುಮನ ನಿಜವಾದ ಜನ್ಮಸ್ಥಳ ಎಂದು ಪ್ರಕಾಶಂ ಜಿಲ್ಲೆಯ ಚಿರಾಲಾದ ಚಿದಂಬರ ಶಾಸ್ತ್ರಿ ಹೇಳುತ್ತಾರೆ. ಇವರು ಪರಾಶರ ಸಂಹುತ್ಗಾ ಎಂಬ ಹನುಮನ ಪ್ರಮಾಣಿತ ಪುಸ್ತಕವನ್ನು ಅಧ್ಯಯನ ಮಾಡಿದ್ದಾರೆ.
1972 ರಲ್ಲಿ ಚಿದಂಬರ ಶಾಸ್ತ್ರಿ ಹನುಮನ ಜನ್ಮಸ್ಥಳ ಮತ್ತು ಇತಿಹಾಸದ ಕುರಿತು ಪಿಹೆಚ್‌ಡಿ ವ್ಯಾಸಂಗ ಮಾಡಿದ್ದಾರೆ. ಇವರು ಟಿಟಿಡಿಗೆ ತನ್ನ ಸಂಶೋಧನ ಪ್ರಬಂಧ ಮತ್ತು ವರದಿಯನ್ನು ಸಲ್ಲಿಸಿದ್ದು, ಈ ನಿರ್ಣಾಯಕ ವಿಷಯಕ್ಕೆ ಇದನ್ನೇ ಮುಖ್ಯ ಪುರಾವೆಯಾಗಿ ಪರಿಗಣಿಸಿದೆ. ಟಿಟಿಡಿ ತನ್ನ ವರದಿ ಮತ್ತು ಪುರಾವೆಗಳೊಂದಿಗೆ "ಶ್ರೀರಾಮ ನವಮಿಯ ದಿನವಾದ ಇಂದು ಅಂಜನಾದ್ರಿ ಹನುಮನ ಜನ್ಮ ಸ್ಥಳ ಎಂಬುವುದನ್ನು ಘೋಷಿಸಿದೆ. ಆದರೆ, ಹನುಮನ ಜನ್ಮ ಸ್ಥಳದ ಬಗ್ಗೆ ಹಲವು ರೀತಿಯ ವಾದಗಳಿದ್ದು, ಗೋಪಲಾನಂದ ಬಾಬಾ ಇತ್ತೀಚೆಗೆ ಅಂಜನೇಯನ ಜನ್ಮಸ್ಥಳ ಜಾರ್ಖಂಡ್ ಎಂದು ಹೇಳಿದ್ದರು, ಅದೇ ರೀತಿ ಗೋವಿಂದಾನಂದ ಸರಸ್ವತಿಯವರು ಕರ್ನಾಟಕದ ಹಂಪಿಯ ಕಿಶ್ಕಿಂದೆ ಎಂದು ಹೇಳಿದ್ದರು.
ಇದನ್ನೂ ಓದಿ: ಹನುಮ ಹುಟ್ಟಿದ್ದು ಕಿಷ್ಕಿಂಧೆಯಲ್ಲಿ ಅಲ್ಲ, ತಿರುಪತಿಯ ಅಂಜನಾದ್ರಿಯಲ್ಲಿ: ಟಿಟಿಡಿ ಸ್ಪಷ್ಟನೆ
ಆದರೆ, ಈ ವಾದಗಳನ್ನು ಚಿದಂಬರ ಶಾಸ್ತ್ರಿ ನಿರಾಕರಿಸಿದ್ದು, ಕಿಶ್ಕಿಂದೆಯಲ್ಲಿರುವ ಹನುಮನ ಮೂರ್ತಿ ಅಷ್ಟೊಂದು ಹಳೆಯದಲ್ಲ ಮತ್ತು ಗೋಕರ್ಣ ಹುನುಮನ ಜನ್ಮಸ್ಥಳ ಎನ್ನುವುದರಲ್ಲಿ ಹುರುಳಿಲ್ಲ ಎಂದಿದ್ದಾರೆ. ಟಿಟಿಡಿ ತನ್ನ ಸಮಿತಿಯಿಂದ ಮಹಾಕಾವ್ಯ ಸಿದ್ಧಾಂತಗಳು ಮತ್ತು ಹನುಮನ ಜನ್ಮಸ್ಥಳದ ಸಾಹಿತ್ಯಿಕ ಸಾಕ್ಷ್ಯಗಳ ಬಗ್ಗೆ ವಿವರಗಳನ್ನು ಪಡೆದಿದೆ. ತಿರುಮಲ ಬೆಟ್ಟದ ಅಂಜನಾದ್ರಿ ಹನುಮನ ನಿಜವಾದ ಜನ್ಮಸ್ಥಳ ಎಂದು ವರದಿ ದೃಢಪಡಿಸಿದೆ. ಈ ವಿಷಯದಲ್ಲಿ ಸತ್ಯ ಎಂಬುವುದನ್ನು ದೃಢಪಡಿಸಲು ಚಿದಂಬರ ಶಾಸ್ತ್ರಿ ಕರಪತ್ರ ಮತ್ತು ಸಹಿ ಅಭಿಯಾನ ಕೈಗೊಂಡಿದ್ದಾರೆ. ತಾಳೆ ಗರಿ ರೂಪದಲ್ಲಿದ್ದ ಸಂಸ್ಕೃತ ಮಹಾಕಾವ್ಯ ಶ್ರೀಪರಾಶರ ಸಂಹಿತಾವನ್ನು ಶಾಸ್ತ್ರಿ ತೆಲುಗಿಗೆ ಅನುವಾದಿಸಿದ್ದಾರೆ.
ಇದನ್ನೂ ಓದಿ : ಗಂಗಾವತಿಯ ಅಂಜನಾದ್ರಿ ಬೆಟ್ಟದ ಬಗ್ಗೆ ಟಿಟಿಡಿ ಆಕ್ಷೇಪ, ಸ್ಥಳೀಯರ ಆಕ್ರೋಶ
ಇತಿಹಾಸಕಾರರು ಮತ್ತು ಸಂಶೋಧಕರಿಂದ ಅಭಿಪ್ರಾಯಗಳನ್ನು ಸಂಗ್ರಹಿಸುವುದರ ಜೊತೆಗೆ ಖ್ಯಾತ ಸಾಹಿತ್ಯ ಕೃತಿಗಳಾದ, ಭಾವಿಶೋಥರ ಪುರಾಣ, ಬ್ರಹ್ಮಾಂಡ ಪುರಾಣ ಮತ್ತು ಸ್ಕಂದ ಪುರಾಣಗಳಂತಹ ಮಹಾಕಾವ್ಯಗಳನ್ನು ಇವರು ಅಧ್ಯಯನ ಮಾಡಿದ್ದಾರೆ. 1920 ರ ಫೆಬ್ರವರಿಯಲ್ಲಿ ಭಾರತಿ ಪತ್ರಿಕೆಯಲ್ಲಿ ಪ್ರಕಟವಾದ ಕೊಮರಾಜು ಲಕ್ಷ್ಮಣ ರಾವ್ ಅವರ ಹಂಪಿಯ ಕಿಶ್ಕಿಂದೆ ಪಂಚವಟಿಯ ವಾದಗಳ ಬಗ್ಗೆ ಶಾಸ್ತ್ರಿ ತಿಳಿಸಿದ್ದಾರೆ.
ನನ್ನ ದಶಕಗಳ ಹೋರಾಟ ಫಲಪ್ರದ ಫಲಿತಾಂಶ ಪಡೆಯುತ್ತಿದೆ. ಜಪಾಲಿ ತೀರ್ಥಂನಲ್ಲಿ ದೇವಾಲಯವನ್ನು ನಿರ್ಮಿಸಲು ಯೋಜನೆ ರೂಪಿಸಿದ್ದೇವೆ. ದೇವಾಲಯವು ಅದರ ಪ್ರಾಮುಖ್ಯತೆಯನ್ನು ಹೇಳುವ ಮೊದಲು ಆಂಜನೇಯ ಪ್ರತಿಮೆ ಸ್ಥಳ ಕಂಡುಕೊಳ್ಳುತ್ತದೆ ಎಂದು ಶಾಸ್ತ್ರಿ ಹೇಳಿದ್ದಾರೆ. ಒಟ್ಟಾರೆ ಈ ಎಲ್ಲಾ ಪುರಾವೆಗಳನ್ನು ಮುಂದಿಟ್ಟುಕೊಂಡು ಹನುಮನ ಜನ್ಮಸ್ಥಳದ ಕುರಿತು ಟಿಟಿಡಿ ಘೋಷಣೆ ಮಾಡಿದೆ.