ತಿರುಪತಿ (ಆಂಧ್ರ ಪ್ರದೇಶ): ತಿರುಪತಿ ವೆಂಕಟೇಶ್ವರ ಸ್ವಾಮಿಗೆ ಸಾವಯವ ಕೃಷಿ ಮೂಲಕ ಬೆಳೆಸಿದ ಸ್ಥಳೀಯ ಭತ್ತದಿಂದ ತಯಾರಿಸಿದ ನೈವೇದ್ಯವನ್ನು ಸಮರ್ಪಿಸಲು ತಿರುಮಲ ತಿರುಪತಿ ದೇವಸ್ತಾನಂ (ಟಿಟಿಡಿ) ನಿರ್ಧರಿಸಿದೆ.
ಟಿಟಿಡಿ ಅಧಿಕಾರಿಗಳು ಮತ್ತು ದೇವಾಲಯದ ಮುಖ್ಯ ಅರ್ಚಕರ ಸಮ್ಮುಖದಲ್ಲಿ ನಾಳೆಯಿಂದಲೇ ಈ ಕ್ರಮ ಪ್ರಾರಂಭವಾಗಲಿದೆ. ಬ್ರಿಟಿಷ್ ಆಡಳಿತದ ಮೊದಲು ಚಾಲ್ತಿಯಲ್ಲಿದ್ದ ಈ ಸಂಪ್ರದಾಯವನ್ನು ಮತ್ತೆ ಪ್ರಾರಂಭಿಸಲು ಟಿಟಿಡಿ ಅಧಿಕಾರಿಗಳು ನಿರ್ಧರಿಸಿದ್ದಾರೆ.
ಈ ಹಳೆ ಸಂಪ್ರದಾಯವನ್ನು ಪ್ರಾರಂಭಿಸಲು ಟಿಟಿಡಿ ಅಧಿಕಾರಿಗಳು ತಯಾರಾಗುತ್ತಿದ್ದು, ಇದಕ್ಕಾಗಿ ಅವರು ಸ್ಥಳೀಯವಾಗಿ ಹಾಗೂ ಸಾವಯವಾಗಿ ಉತ್ಪಾದಿಸುವ ನೈಸರ್ಗಿಕ ಅಕ್ಕಿಯಿಂದ ವೆಂಕಟೇಶ್ವರ ಸ್ವಾಮಿಗೆ ನೈವೇದ್ಯ ತಯಾರಿಸಲಿದ್ದಾರೆ.
ಅಧಿಕಾರಿಗಳು ಮತ್ತು ಪುರೋಹಿತರು ಈ ಪವಿತ್ರ ಕೆಲಸದಲ್ಲಿ ಪ್ರತಿದಿನ ವಿವಿಧ ರೀತಿಯ ನೈವೇದ್ಯ ತಯಾರಿಸುತ್ತಾರೆ ಮತ್ತು ಒಂದು ವರ್ಷದಲ್ಲಿ 365 ಬಗೆಯ ಅಕ್ಕಿ ಪ್ರಭೇದಗಳನ್ನು ಬಳಸುತ್ತಾರೆ. ನಿತ್ಯ ಟಿಟಿಡಿ 195 ಕೆಜಿ ನೈವೇದ್ಯವನ್ನು ದಿನಕ್ಕೆ ಮೂರು ಬಾರಿ ಸ್ವಾಮಿಗೆ ಅರ್ಪಿಸುತ್ತದೆ.
ಸ್ಥಳೀಯವಾಗಿ ಲಭ್ಯವಿರುವ ಹಸುವಿನ ಹಾಲು ಮತ್ತು ಹಸುವಿನ ತುಪ್ಪವನ್ನು ಲಡ್ಡು ಮತ್ತು ಆಹಾರ ಪದಾರ್ಥಗಳ ತಯಾರಿಕೆಯ ಪ್ರಕ್ರಿಯೆಯಲ್ಲಿ ಬಳಸಲು ಟಿಟಿಡಿ ನಿರ್ಧರಿಸಿದೆ.