ETV Bharat / bharat

ಆಸ್ಪತ್ರೆಗಾಗಿ ಟಿಟಿಡಿ ದೇಣಿಗೆ ಸಂಗ್ರಹ.. ಮೊದಲ ದಿನವೇ 85 ಕೋಟಿ ರೂ. ಹಣ ನೀಡಿದ ಭಕ್ತರು - ಕೋಟ್ಯಂತರ ರೂಪಾಯಿ ದೇಣಿಗೆ ನೀಡಿದ ಭಕ್ತರು

ಟಿಟಿಡಿ ಉದಯಾಸ್ತಮಾನ ಎಂಬ ಹೆಸರಿನಲ್ಲಿ ಭಕ್ತರಿಂದ ದೇಣಿಗೆ ಸಂಗ್ರಹ ಮಾಡುತ್ತಿದ್ದು, ವೆಂಕಟೇಶ್ವರ ಪ್ರಾಣದಾನ ಟ್ರಸ್ಟ್​ಗೆ ಒಂದೇ ದಿನದಲ್ಲಿ 70 ದಾನಿಗಳು 85 ಕೋಟಿ ರೂಪಾಯಿಗೂ ಅಧಿಕ ದೇಣಿಗೆ ನೀಡಿದ್ದಾರೆ ಎಂದು ಟಿಟಿಡಿ ಅಧ್ಯಕ್ಷ ವೈ ವಿ ಸುಬ್ಬಾರೆಡ್ಡಿ ತಿಳಿಸಿದ್ದಾರೆ.

donations
ದೇಣಿಗೆ
author img

By

Published : Feb 18, 2022, 3:16 PM IST

ತಿರುಪತಿ(ಆಂಧ್ರಪ್ರದೇಶ): ಮಕ್ಕಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕಾಗಿ ತಿರುಪತಿ ತಿರುಮಲ ದೇವಸ್ಥಾನದಿಂದ (ಟಿಟಿಡಿ) ದೇಣಿಗೆ ಸಂಗ್ರಹಿಸಲಾಗುತ್ತಿದ್ದು, ಮೊದಲ ದಿನವೇ ಭಕ್ತರಿಂದ 85 ಕೋಟಿ ರೂಪಾಯಿಗೂ ಅಧಿಕ ಹಣ ಹರಿದು ಬಂದಿದೆ.

ಟಿಟಿಡಿ ಉದಯಾಸ್ತಮಾನ ಎಂಬ ಹೆಸರಿನಲ್ಲಿ ಭಕ್ತರಿಂದ ದೇಣಿಗೆ ಸಂಗ್ರಹ ಮಾಡುತ್ತಿದ್ದು, ವೆಂಕಟೇಶ್ವರ ಪ್ರಾಣದಾನ ಟ್ರಸ್ಟ್​ಗೆ ಒಂದೇ ದಿನದಲ್ಲಿ 70 ದಾನಿಗಳು 85 ಕೋಟಿ ರೂಪಾಯಿಗೂ ಅಧಿಕ ದೇಣಿಗೆ ನೀಡಿದ್ದಾರೆ ಎಂದು ಟಿಟಿಡಿ ಅಧ್ಯಕ್ಷ ವೈವಿ ಸುಬ್ಬಾರೆಡ್ಡಿ ತಿಳಿಸಿದ್ದಾರೆ.

ದೇಣಿಗೆ ನೀಡಿದ ಭಕ್ತರಿಗೆ ದೇವಸ್ಥಾನದಿಂದ ಉಚಿತ ಸೇವಾ ಟಿಕೆಟ್​ ನೀಡಲಾಯಿತು

ಇದಕ್ಕಾಗಿ ದೇವಸ್ಥಾನದ ಮಂಡಳಿಯು ಪ್ರತಿ ದಾನಿಗಳಿಗೆ ಒಂದು ಉದಯಾಸ್ತಮಾನ ಸೇವಾ ಟಿಕೆಟ್ ಅನ್ನು ಉಚಿತವಾಗಿ ನೀಡಿದೆ. ಬಂದ ದೇಣಿಗೆ ಹಣದಲ್ಲಿ ಮಕ್ಕಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ಚೆನ್ನೈ ಭಕ್ತನಿಂದ 9.20 ಕೋಟಿ ರೂ. ದೇಣಿಗೆ: ವೆಂಕಟೇಶ್ವರ ಪ್ರಾಣದಾನ ಟ್ರಸ್ಟ್​ನಿಂದ ಸಂಗ್ರಹಿಸಲಾಗುತ್ತಿರುವ ದೇಣಿಗೆಗೆ ಚೆನ್ನೈನ ಮೈಲಾಪುರದ ರೇವತಿ ವಿಶ್ವನಾಥ್ ಎಂಬುವವರು 9.20 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಮತ್ತು ನಗದ ದೇಣೀಗೆಯಾಗಿ ನೀಡಿದ್ದಾರೆ. ಇವರು ಇತ್ತೀಚೆಗಷ್ಟೇ ನಿಧನರಾದ ತಮ್ಮ ಸಹೋದರ ವೈದ್ಯ ಪರ್ವತಮ್​ ಅವರ ಹೆಸರಿನಲ್ಲಿ ದೇಣಿಗೆ ನೀಡಿದ್ದಾರೆ.

ಓದಿ: ರಾಜೀನಾಮೆ ಕೊಡುವುದಕ್ಕೆ ಈಶ್ವರಪ್ಪ ಮಾಡಿದ ಅಪರಾಧವೇನು?: ಸಿ.ಟಿ ರವಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.