ತೆಲಂಗಾಣ: ರಾಜ್ಯದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ನದಿಗಳು ಅಪಾಯದಮಟ್ಟ ಮೀರಿ ಹರಿಯುತ್ತಿವೆ. ರಾಜಣ್ಣ ಸಿರಿಸಿಲ್ಲಾ ಜಿಲ್ಲೆಯ ಗಂಬೀರೊಪೇಟಾದ ಸೇತುವೆ ಮುಳುಗಡೆಯಾಗಿದ್ದು, ಬಸ್ವೊಂದು ಪ್ರವಾಹದಲ್ಲಿ ಸಿಲುಕಿದೆ.
ವಾಹನದಲ್ಲಿ 25 ಪ್ರಯಾಣಿಕರಿದ್ದು, ಸಹಾಯಕ್ಕಾಗಿ ಅಂಗಲಾಚಿದ್ದಾರೆ. ಅಕ್ಕಪಕ್ಕದಲ್ಲಿದ್ದ ರೈತರು ಸ್ಥಳಕ್ಕೆ ದೌಡಾಯಿಸಿದ್ದು, ಪ್ರಯಾಣಿಕರನ್ನು ರಕ್ಷಿಸಿದ್ದಾರೆ. ಬಳಿಕ ಬಸ್ ಪ್ರವಾಹದಲ್ಲಿ ಕೊಚ್ಚಿಹೋಗಿದೆ.
ತೆಲಂಗಾಣದಲ್ಲಿ ಕಳೆದ ಮೂರು ದಿನಗಳಿಂದ ಭಾರಿ ಮಳೆ ಸುರಿಯುತ್ತಿದ್ದು, ಸಾರಿಗೆ ಸಂಪರ್ಕ ಅಸ್ತವ್ಯಸ್ತಗೊಂಡಿದೆ. ಎಲ್ಲ ಪ್ರಮುಖ ಜಲಾಶಯಗಳು ಅಪಾಯದಮಟ್ಟ ಮೀರಿ ಹರಿಯುತ್ತಿವೆ.
ಇದನ್ನೂ ಓದಿ: ಭಾರಿ ಮಳೆ: ಕನ್ನಡ್ ಘಾಟ್ನಲ್ಲಿ ಭೂ ಕುಸಿತ, ಸಂಚಾರ ಬಂದ್..