ಭವನೇಶ್ವರ (ಒಡಿಶಾ) : ಕಷ್ಟಪಟ್ಟು ಕೆಲಸ ಮಾಡಿ, ವಿಶ್ರಾಂತಿ ಪಡೆಯೋಣ ಎಂದು ನಿದ್ರಿಸುತ್ತಿದ್ದಾಗ ಯಮನ ರೂಪದಲ್ಲಿ ಬಂದ ವಾಹನ ನಾಲ್ವರು ಕಾರ್ಮಿಕರನ್ನು ಬಲಿ ಪಡೆದಿದೆ. ಒಡಿಶಾದ ಬರ್ಗಡ್ ಜಿಲ್ಲೆಯ ಬಿಲ್ಜಮ್ ಗ್ರಾಮದಲ್ಲಿ ಬುಧವಾರ ತಡರಾತ್ರಿ ನಡೆದಿದೆ. ಘಟನೆಯಲ್ಲಿ ಇನ್ನೊಬ್ಬ ಕಾರ್ಮಿಕ ತೀವ್ರ ಗಾಯಗೊಂಡಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಿರ್ಜಮ್ ಗ್ರಾಮದಲ್ಲಿ ಬುಧವಾರ ತಡರಾತ್ರಿವರೆಗೆ ಕೊಳವೆಬಾವಿ ಕೊರೆಯುವ ಕೆಲಸ ನಡೆಯುತ್ತಿತ್ತು. ಕೆಲಸ ಮುಗಿದ ಬಳಿಕ ಬಳಲಿದ ಐವರು ಕಾರ್ಮಿಕರು ಅಲ್ಲಿಯೇ ಬಯಲು ಪ್ರದೇಶದಲ್ಲಿ ಮೈಯೊಡ್ಡಿ ಮಲಗಿದ್ದಾರೆ. ಇದೇ ಮಾರ್ಗವಾಗಿ ಬಂದ ಇನ್ನೊಂದು ಬೋರ್ವೆಲ್ ಕೊರೆಯುವ ವಾಹನ ಕಾರ್ಮಿಕರ ಮೇಲೆ ಹರಿದಿದೆ. ಪರಿಣಾಮ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ.
ಗಂಭೀರವಾಗಿ ಗಾಯಗೊಂಡಿದ್ದ ಕಾರ್ಮಿಕನನ್ನು ತಕ್ಷಣವೇ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರಲ್ಲಿ ಮೂವರು ಮಧ್ಯಪ್ರದೇಶದವರಾಗಿದ್ದರೆ, ಮತ್ತೊಬ್ಬ ಛತ್ತೀಸ್‌ಗಢಕ್ಕೆ ಸಂಬಂಧಿಸಿದವರಾಗಿದ್ದಾರೆ ಎಂದು ತಿಳಿದುಬಂದಿದೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಟ್ರಾನ್ಸ್ಫಾರ್ಮರ್ ಗೈ ವೈರ್ ಎಳೆದು ಚಿಂದಿ ಆಯುವ ಬಾಲಕ ಸಾವು: ಬೆಸ್ಕಾಂ ಸ್ಪಷ್ಟನೆ