ETV Bharat / bharat

ಟಿಆರ್​ಎಸ್​ ಶಾಸಕರ ಖರೀದಿ ಯತ್ನ ಆರೋಪ ಪ್ರಕರಣ: ಬಿ ಎಲ್ ಸಂತೋಷ್​ಗೆ ಸಮನ್ಸ್​ ಜಾರಿ - Telangana probe team

ಟಿಆರ್​ಎಸ್​ ಶಾಸಕರ ಖರೀದಿ ಯತ್ನ ಆರೋಪ ಪ್ರಕರಣದಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ಅವರಿಗೆ ಸಮನ್ಸ್​ ಜಾರಿ ಮಾಡಲಾಗಿದೆ.

trs-mla-poaching-case-telangana-probe-team-summons-bjp-leader-bl-santosh
ಟಿಆರ್​ಎಸ್​ ಶಾಸಕರ ಖರೀದಿ ಯತ್ನ ಆರೋಪ ಪ್ರಕರಣ: ಬಿಎಲ್ ಸಂತೋಷ್​ಗೆ ಸಮನ್ಸ್​ ಜಾರಿ
author img

By

Published : Nov 19, 2022, 10:48 AM IST

ಹೈದರಾಬಾದ್​ (ತೆಲಂಗಾಣ): ಪ್ರಮುಖ ಬೆಳವಣಿಗೆಯಲ್ಲಿ ಟಿಆರ್​ಎಸ್​ ಶಾಸಕರ ಖರೀದಿ ಯತ್ನ ಆರೋಪ ಪ್ರಕರಣದಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಅವರಿಗೆ ತೆಲಂಗಾಣ ಪೊಲೀಸರ ವಿಶೇಷ ತನಿಖಾ ತಂಡ (ಎಸ್‌ಐಟಿ) ಸಮನ್ಸ್​ ಜಾರಿ ಮಾಡಿದೆ. ಕ್ರಿಮಿನಲ್ ಪ್ರಕ್ರಿಯೆ ಸಂಹಿತೆಯ ಸೆಕ್ಷನ್ 41 (ಎ) ಅಡಿಯಲ್ಲಿ ಸಮನ್ಸ್​ ಜಾರಿ ಮಾಡಿದ್ದು, ನವೆಂಬರ್ 21ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.

ಹೈದರಾಬಾದ್‌ನಲ್ಲಿರುವ ಪೊಲೀಸ್ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್‌ನಲ್ಲಿ ನವೆಂಬರ್ 21ರಂದು 10.30ಕ್ಕೆ ಹಾಜರಾಗುವಂತೆ ಬಿ.ಎಲ್. ಸಂತೋಷ್‌ ಅವರಿಗೆ ಸೂಚಿಸಲಾಗಿದ್ದು, ಎಸ್‌ಐಟಿ ಮುಂದೆ ಹಾಜರಾಗದಿದ್ದರೆ ಬಂಧಿಸಲಾಗುವುದು ಎಂದೂ ಸಮನ್ಸ್​ನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಭರ್ಜರಿ ಆತಿಥ್ಯ.. ತಿಹಾರ್ ಜೈಲಿನಲ್ಲಿ ದೆಹಲಿ ಸಚಿವ ಸತ್ಯೇಂದ್ರ ಜೈನ್​ಗೆ ಮಸಾಜ್- ಸಿಸಿಟಿವಿ ವಿಡಿಯೋ

ಕಳೆದ ತಿಂಗಳು ಟಿಆರ್‌ಎಸ್‌ನ ನಾಲ್ವರು ಶಾಸಕರಿಗೆ ಭಾರಿ ಹಣದ ಆಮಿಷವೊಡ್ಡಿ ಬಿಜೆಪಿಯ ತೆಕ್ಕೆಗೆ ಸೆಳೆಯಲು ಯತ್ನಿಸಲಾಗಿತ್ತು. ಈ ವೇಳೆ ಬಂಧಿಸಲಾಗಿರುವ ಬಿಜೆಪಿ ಏಜೆಂಟ್‌ಗಳು ಎನ್ನಲಾದ ಮೂವರ ನಡುವಿನ ಸಂಭಾಷಣೆಯಲ್ಲಿ ಬಿ ಎಲ್ ಸಂತೋಷ್ ಹೆಸರು ಕೇಳಿಬಂದಿತ್ತು.

ಇದನ್ನೂ ಓದಿ: ತೆಲಂಗಾಣದೊಂದಿಗೆ ದೆಹಲಿ, ಆಂಧ್ರ ಸರ್ಕಾರಗಳನ್ನೂ ಉರುಳಿಸಲು ಪಿತೂರಿ: ಬಿಜೆಪಿ ವಿರುದ್ಧ ಕೆಸಿಆರ್ ಆರೋಪ

ಈ ಹಿನ್ನೆಲೆಯಲ್ಲಿ ಸಂತೋಷ್‌, ಕೇರಳದ ವೈದ್ಯ ಜಗ್ಗು ಸ್ವಾಮಿ, ಬಿಡಿಜೆಎಸ್ ಅಧ್ಯಕ್ಷ ತುಷಾರ್ ವೆಲ್ಲಪಲ್ಲಿ ಮತ್ತು ತೆಲಂಗಾಣ ಬಿಜೆಪಿ ರಾಜ್ಯಾಧ್ಯಕ್ಷ ಬಂಡಿ ಸಂಜಯ್ ಕುಮಾರ್ ಅವರ ವಕೀಲ ಮತ್ತು ಸಂಬಂಧಿಗೆ ವಿಚಾರಣೆಗಾಗಿ ಸಮನ್ಸ್ ನೀಡಲಾಗಿದೆ. ಈ ನಾಲ್ವರಿಗೂ ಒಂದೇ ದಿನ ಸಮನ್ಸ್ ಜಾರಿ ಮಾಡಲಾಗಿದೆ. ಬಂಧಿತ ಮೂವರು ಆರೋಪಿಗಳ ಜೊತೆಗಿನ ಸಂಬಂಧದ ಕುರಿತು ವಿಚಾರಣೆಗಾಗಿ ಎಸ್‌ಐಟಿ ಎದುರು ಹಾಜರಾಗುವಂತೆ ತಿಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಕೆಸಿಆರ್‌ ಬಿಡುಗಡೆ ಮಾಡಿದ್ದ ವಿಡಿಯೋದಲ್ಲಿ ಕರ್ನಾಟಕ ರಾಜಕೀಯವೂ ಪ್ರಸ್ತಾಪ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.