ಹೈದರಾಬಾದ್ (ತೆಲಂಗಾಣ): ಮೆಹಬೂಬ್‌ನಗರ - ಹೈದರಾಬಾದ್- ರಂಗಾರೆಡ್ಡಿ ಪದವೀಧರ ಕ್ಷೇತ್ರದ ಎಂಎಲ್‌ಸಿ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಪಿ.ವಿ. ನರಸಿಂಹ ರಾವ್ ಅವರ ಪುತ್ರಿ ಮತ್ತು ತೆಲಂಗಾಣ ರಾಷ್ಟ್ರ ಸಮಿತಿ ಅಭ್ಯರ್ಥಿ ಸುರಭಿ ವಾಣಿ ದೇವಿ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಬಿಜೆಪಿ ಎಂಎಲ್‌ಸಿ ಅಭ್ಯರ್ಥಿ ನರಪರಾಜು ರಾಮ್‌ಚಂದರ್ ರಾವ್ ವಿರುದ್ಧ ಸುರಭಿ ವಾಣಿ ದೇವಿ ಜಯ ಗಳಿಸಿದ್ದಾರೆ. ಆದರೆ, ಟಿಆರ್‌ಎಸ್‌ನ ಸುರಭಿ ವಾಣಿ ದೇವಿ ಅವರ ವಿಜಯವನ್ನು ಚುನಾವಣಾ ಆಯೋಗ ಅಧಿಕೃತವಾಗಿ ಇನ್ನಷ್ಟೇ ಘೋಷಿಸಬೇಕಿದೆ.
ಮತ್ತೊಂದೆಡೆ ವಾಣಿ ದೇವಿ ಗೆಲುವಿನಿಂದ ಖುಷ್ ಆಗಿರುವ ಟಿಆರ್‌ಎಸ್ ಮುಖಂಡರು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ.