ETV Bharat / bharat

ಪತ್ರಿಕೋದ್ಯಮ ತ್ಯಜಿಸಿ ಲೈಂಗಿಕ ಕಾರ್ಯಕರ್ತರ ಸಬಲೀಕರಣಕ್ಕೆ ನಿಂತ ಧೀರೆ: ಈವರೆಗೆ 6000 ಮಹಿಳೆಯರಿಗೆ ಆಸರೆ! - ಪತ್ರಿಕೋದ್ಯಮ ತ್ಯಜಿಸಿ ಲೈಂಗಿಕ ಕಾರ್ಯಕರ್ತರ ಸಬಲೀಕರಣಕ್ಕೆ ಮುಂದಾದ ದಿಟ್ಟ ಮಹಿಳೆ

ನಾನು ಪತ್ರಕರ್ತೆ ಆಗಿದ್ದ ವೇಳೆ ದೊಡ್ಡ ನಟರೊಬ್ಬರು ತಮ್ಮ ಹುಟ್ಟುಹಬ್ಬವನ್ನು ಆಚರಿಸಲು ವೇಶ್ಯಾಗೃಹಕ್ಕೆ ಹೋಗುತ್ತಿದ್ದರು. ಅಲ್ಲಿ ಸಾಕಷ್ಟು ಮಂದಿ ಚಿಕ್ಕ ಹುಡುಗಿಯರಿದ್ದರು. ಕೆಲವರನ್ನು ಬಲವಂತವಾಗಿ ವ್ಯಾಪಾರಕ್ಕೆ ತಳ್ಳಲಾಗಿತ್ತು. ನಾನು ಅದನ್ನು ನೋಡಿ ಮರುಗಿ ಅವರೆಲ್ಲರನ್ನೂ ಅದರಿಂದ ಹೊರತರಲು ಬಯಸಿದ್ದೆ ಎನ್ನುತ್ತಾರೆ ಪತ್ರಿಕೋದ್ಯಮ ತ್ಯಜಿಸಿ ಲೈಂಗಿಕ ಕಾರ್ಯಕರ್ತರ ಸಬಲೀಕರಣಕ್ಕೆ ನಿಂತಿರುವ ಮಹಿಳೆ ತ್ರಿವೇಣಿ ಆಚಾರ್ಯ.

ಪತ್ರಿಕೋದ್ಯಮ ತ್ಯಜಿಸಿ ಲೈಂಗಿಕ ಕಾರ್ಯಕರ್ತರ ಸಬಲೀಕರಣಕ್ಕೆ ಮುಂದಾದ ದಿಟ್ಟ ಮಹಿಳೆ

author img

By

Published : Feb 28, 2022, 9:07 PM IST

ಮುಂಬೈ: ಪತ್ರಿಕೋದ್ಯಮದಲ್ಲಿ ತಮ್ಮದೇ ಆದ ರೀತಿ ಸಮಾಜಸೇವೆಯಲ್ಲಿ ತೊಡಗಿದ್ದ ಇಲ್ಲೋರ್ವರು ಈಗ ಆ ವೃತ್ತಿ ತೊರೆದು ಲೈಂಗಿಕ ಕಾರ್ಯಕರ್ತರ ಸಬಲೀಕರಣಕ್ಕೆ ಮುಂದಾಗಿದ್ದಾರೆ. ತ್ರಿವೇಣಿ ಆಚಾರ್ಯ, ವೇಶ್ಯೆಯರಿಗಾಗಿ ದುಡಿಯುತ್ತಿರುವ ಸಮಾಜಸೇವಕಿ, ಪತ್ರಿಕೋದ್ಯಮವನ್ನು ತೊರೆದು ವೇಶ್ಯಾವಾಟಿಕೆಯಲ್ಲಿ ಜೀವನ ಮಾಡುತ್ತಿರುವ ಜನರ ಏಳ್ಗೆಗೆ ಶ್ರಮಿಸುತ್ತಿದ್ದಾರೆ.

ಈಗ ಇವರು ಬರೋಬ್ಬರಿ ಆರು ಸಾವಿರ ಮಹಿಳೆಯರಿಗೆ ಆಸರೆಯಾಗಿದ್ದಾರೆ. 'ಈಟಿವಿ ಭಾರತ' ಜೊತೆ ತಮ್ಮ ಜೀವನದ ವೃತ್ತಾಂತವನ್ನು ಬಿಚ್ಚಿಟ್ಟಿದ್ದಾರೆ. ಪತ್ರಿಕೋದ್ಯಮ ತೊರೆದು ಪೂರ್ಣಾವಧಿ ಸಮಾಜಸೇವಕಿಯಾಗಿದ್ದೀರಾ? ಎಂಬ ಪ್ರಶ್ನೆಗೆ ಉತ್ತರಿಸಿದ ತ್ರಿವೇಣಿ ಆಚಾರ್ಯ, ನಾನು ಪತ್ರಕರ್ತೆ ಆಗಿದ್ದ ವೇಳೆ ದೊಡ್ಡ ನಟರೊಬ್ಬರು ತಮ್ಮ ಹುಟ್ಟುಹಬ್ಬವನ್ನು ಆಚರಿಸಲು ವೇಶ್ಯಾಗೃಹಕ್ಕೆ ಹೋಗುತ್ತಿದ್ದರು. ಅಲ್ಲಿ ಸಾಕಷ್ಟು ಚಿಕ್ಕ ಹುಡುಗಿಯರಿದ್ದರು. ಕೆಲವರನ್ನು ಬಲವಂತವಾಗಿ ವ್ಯಾಪಾರಕ್ಕೆ ತಳ್ಳಲಾಗಿತ್ತು. ನಾನು ಅದನ್ನು ನೋಡಿ ಮರುಗಿ ಅವರೆಲ್ಲರನ್ನೂ ಅದರಿಂದ ಹೊರತರಲು ಬಯಸಿದ್ದೆ. ಹಾಗಾಗಿ ಪತ್ರಿಕೋದ್ಯಮ ತೊರೆದು ಪೂರ್ಣಾವಧಿ ಸಮಾಜ ಸೇವಕಿಯಾದೆ ಎನ್ನುತ್ತಾರೆ ತ್ರಿವೇಣಿ ಆಚಾರ್ಯ.

ಇದನ್ನೂ ಓದಿ: ಯುದ್ಧ ಹಳೆಯದು.. ಅಹಿಂಸೆಯೊಂದೇ ದಾರಿ.. ರಷ್ಯಾ-ಉಕ್ರೇನ್ ಯುದ್ಧದ ಕುರಿತು ದಲೈ ಲಾಮಾ ಮಾತು

ಮೊದಲ ರಕ್ಷಣಾ ಕಾರ್ಯಾಚರಣೆಯನ್ನು ನೆನಪಿಸಿಕೊಂಡ ತ್ರಿವೇಣಿ ಆಚಾರ್ಯ, ನನ್ನ ಗಂಡನ ಅಂಗಡಿಯಲ್ಲಿ ಒಬ್ಬ ಹುಡುಗ ಕೆಲಸ ಮಾಡುತ್ತಿದ್ದ. ಅವನ ಗೆಳತಿ ರೆಡ್ ಲೈಟ್ ಏರಿಯಾದಲ್ಲಿದ್ದಳು. ಆತ ಆಕೆಯನ್ನು ಅಲ್ಲಿಂದ ಬಿಡಿಸಿ ಮದುವೆಯಾಗಲು ಬಯಸಿದ್ದ. ಹೀಗಾಗಿ ನಾವು ಆಕೆಯನ್ನು ರಕ್ಷಿಸಲು ಕಾಮಾಟಿಪುರ ಪ್ರದೇಶಕ್ಕೆ ಹೋಗಿದ್ದೆವು. ಅಂದು ಯುವತಿಯನ್ನು ಬಿಡುಗಡೆ ಮಾಡಲಾಗಿತ್ತು.

ಆ ಮೊದಲ ರಕ್ಷಣಾ ಕಾರ್ಯಾಚರಣೆಯನ್ನು 1993 ರಲ್ಲಿ ನಡೆಸಲಾಯಿತು. ಇಲ್ಲಿಯವರೆಗೆ, ನಾವು ಸುಮಾರು 6,000 ಮಹಿಳೆಯರು, ಹುಡುಗಿಯರು ಮತ್ತು ಮಕ್ಕಳನ್ನು ಈ ರೀತಿಯ ದಂಧೆಯಿಂದ ರಕ್ಷಿಸಿದ್ದೇವೆ. ಹಿಂದೆ ಮುಂಬೈ ಮತ್ತು ದೆಹಲಿಗೆ ಸೀಮಿತವಾಗಿದ್ದ ಈ ವ್ಯವಹಾರ ಈಗ ಎಲ್ಲಾ ಕಡೆ ಹರಡಿದೆ ಎಂದು ಆಚಾರ್ಯ ಬೇಸರ ಹೊರಹಾಕಿದರು.

ನಮ್ಮ ಸಂಸ್ಥೆಗೆ ಆಶ್ರಯ ಮನೆಗಳಿದ್ದು ಅಂಥವರನ್ನು ಅಲ್ಲಿ ಇರಿಸಲಾಗಿದೆ. ಆದರೆ ನಮ್ಮ ಸಮಾಜದಲ್ಲಿರುವ ಸುತ್ತಮುತ್ತಲಿನ ಜನರ ಮನಸ್ಥಿತಿ ಚೆನ್ನಾಗಿಲ್ಲ. ಈ ಮಹಿಳೆಯರನ್ನು ನೋಡುವ ದೃಷ್ಟಿಕೋನ ಬದಲಾಗಬೇಕು. ಅವರೂ ಮನುಷ್ಯರೇ ಅಲ್ಲವೇ ಎಂದು ಸಜಾಸೇವಕಿ ತ್ರಿವೇಣಿ ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.