ETV Bharat / bharat

ಹೆಚ್ಚಿದ ಕೋವಿಡ್​.. ತ್ರಿಪುರಾದಲ್ಲಿ ನಾಳೆಯಿಂದ ರಾತ್ರಿ ಕರ್ಫ್ಯೂ - ತ್ರಿಪುರಾದಲ್ಲಿ ಹೆಚ್ಚಿನ ಕೊರೊನಾ

ಪುರಾದಲ್ಲಿ ಕೊರೊನಾ ಹೆಚ್ಚಾಗುತ್ತಿರುವ ಹಿನ್ನೆಲೆ ರಾಜ್ಯದಲ್ಲಿ 10 ದಿನ ರಾತ್ರಿ ಕರ್ಫ್ಯೂ ವಿಧಿಸಲಾಗಿದೆ.

ತ್ರಿಪುರಾದಲ್ಲಿ  ನಾಳೆಯಿಂದ ರಾತ್ರಿ ಕರ್ಫ್ಯೂ ಜಾರಿ

author img

By

Published : Jan 9, 2022, 7:37 PM IST

ಅಗರ್ತಲಾ: ತ್ರಿಪುರಾದಲ್ಲಿ ಕೋವಿಡ್ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ರಾಜ್ಯದಲ್ಲಿ ರಾತ್ರಿ 9 ರಿಂದ ಬೆಳಗ್ಗೆ 5 ರವರೆಗೆ 10 ದಿನಗಳವರೆಗೆ ಸರ್ಕಾರ ರಾತ್ರಿ ಕರ್ಫ್ಯೂ ವಿಧಿಸಿದೆ. ನಾಳೆಯಿಂದ ಈ ನಿಯಮ ಜಾರಿಯಾಗಲಿದೆ ಮತ್ತು ಈ ತಿಂಗಳ 20 ರಂದು ಮುಕ್ತಾಯವಾಗಲಿದೆ.

ರಾಜ್ಯದ ಮುಖ್ಯ ಕಾರ್ಯದರ್ಶಿ ಕುಮಾರ್ ಅಲೋಕ್ ಆದೇಶ ಹೊರಡಿಸಿದ್ದಾರೆ. ರಾಜ್ಯ ಸರ್ಕಾರವು ಪರಿಸ್ಥಿತಿಯನ್ನು ವಿವರವಾಗಿ ಪರಿಶೀಲಿಸಿದೆ ಮತ್ತು ರಾಜ್ಯದಲ್ಲಿ ಕೊರೊನಾ ನಿರ್ಬಂಧಗಳನ್ನು ಮಾರ್ಪಡಿಸುವುದು ಅಗತ್ಯವಾಗಿದೆ ಎಂದು ತಿಳಿಸಿದ್ದಾರೆ.

ಚಲನಚಿತ್ರ ಮಂದಿರಗಳು/ಮಲ್ಟಿಪ್ಲೆಕ್ಸ್‌ಗಳು, ಕ್ರೀಡಾ ಸಂಕೀರ್ಣಗಳು ಮತ್ತು ಕ್ರೀಡಾಂಗಣಗಳು, ಮನರಂಜನಾ ಉದ್ಯಾನವನಗಳು, ಬಾರ್‌ಗಳು, ಇತ್ಯಾದಿಗಳನ್ನು ಹೊರತುಪಡಿಸಿ ತೆರೆದ ಸ್ಥಳಗಳಲ್ಲಿ ಎಲ್ಲಾ ರೀತಿಯ ಸಾರ್ವಜನಿಕ ಸಭೆಗಳನ್ನು ಸರ್ಕಾರವು ಸ್ಥಗಿತಗೊಳಿಸಿದೆ.

ಶಾಪಿಂಗ್ ಸಂಕೀರ್ಣಗಳು/ಮಾಲ್‌ಗಳು, ಬ್ಯೂಟಿ ಪಾರ್ಲರ್‌ಗಳು, ಹೇರ್​ ಕಟಿಂಗ್​ ಸಲೂನ್​ಗಳು ಸೇರಿದಂತೆ ಎಲ್ಲಾ ಸ್ವತಂತ್ರ ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳು ಬೆಳಗ್ಗೆ 6 ರಿಂದ ರಾತ್ರಿ 8:30 ರವರೆಗೆ ಮಾತ್ರ ತೆರೆದಿರುತ್ತವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.