ETV Bharat / bharat

ತ್ರಿಪುರಾದ ಮೊದಲ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹಿಮಾಂಶು ಮೋಹನ್ ಚೌಧರಿ ನಿಧನ

author img

By

Published : Apr 26, 2023, 9:04 AM IST

ಭಾರತೀಯ ನಾಗರಿಕ ಸೇವಾ ಅಧಿಕಾರಿಯಾಗಿ ಕಾರ್ಯನಿರ್ವಹಿಸುವ ಜೊತೆಗೆ ತ್ರಿಪುರಾದ ಮೊದಲ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಹಿಮಾಂಶು ಮೋಹನ್ ಚೌಧರಿ ಅವರು ನಿನ್ನೆ ಕೊನೆಯುಸಿರೆಳೆದಿದ್ದಾರೆ.

himangshu mohan chowdhur
ಹಿಮಾಂಶು ಮೋಹನ್ ಚೌಧರಿ

ಅಗರ್ತಲಾ ( ತ್ರಿಪುರ ) : ನಿವೃತ್ತ ನಾಗರಿಕ ಸೇವಾ ಅಧಿಕಾರಿ, ಮಾನವತಾವಾದಿ ಹಾಗೂ ತ್ರಿಪುರಾದ ಮೊದಲ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಹಿಮಾಂಶು ಮೋಹನ್ ಚೌಧರಿ ಮಂಗಳವಾರ ಅಗರ್ತಲಾದ ಖಾಸಗಿ ಆಸ್ಪತ್ರೆಯಲ್ಲಿ ವಯೋಸಹಜ ಕಾಯಿಲೆಗಳಿಂದ ನಿಧನರಾಗಿದ್ದಾರೆ. 84 ವರ್ಷ ವಯಸ್ಸಿನವರಾಗಿದ್ದ ಚೌಧರಿ ಅವರು ಇಬ್ಬರು ಪುತ್ರಿಯರು, ಸಂಬಂಧಿಕರು ಮತ್ತು ಅಪಾರ ಸಂಖ್ಯೆಯ ಹಿತೈಷಿಗಳನ್ನು ಬಿಟ್ಟು ಅಗಲಿದ್ದಾರೆ. ಅವರ ಪತ್ನಿ ನಾಲ್ಕು ವರ್ಷಗಳ ಹಿಂದೆಯೇ ಮೃತಪಟ್ಟಿದ್ದರು.

ಬಾಂಗ್ಲಾದೇಶದಲ್ಲಿ ವಿಮೋಚನಾ ಯುದ್ಧ ಪ್ರಾರಂಭವಾದಾಗ ಹಿಮಾಂಶು ಅವರು ತ್ರಿಪುರಾದ ಸಿಪಹಿಜಾಲಾ ಜಿಲ್ಲೆಯ ಸೋನಮುರಾ ಉಪವಿಭಾಗದ ಉಪವಿಭಾಗಾಧಿಕಾರಿ (ಎಸ್​ ಡಿ ಒ ) ಆಗಿದ್ದರು. ಈ ವೇಳೆ ಅವರು 2.5 ಲಕ್ಷ ಬಾಂಗ್ಲಾದೇಶೀಯರಿಗೆ ಸಹಾಯ ಹಸ್ತವನ್ನು ಚಾಚಿದ್ದರು. ನಿರಾಶ್ರಿತರಿಗೆ ಟೆಂಟ್‌ಗಳು ಮತ್ತು ತಾತ್ಕಾಲಿಕ ಅಡುಗೆ ಮನೆಗಳನ್ನು ಸ್ಥಾಪಿಸುವ ಮೂಲಕ ಆಹಾರ ಮತ್ತು ಆಶ್ರಯವನ್ನು ಒದಗಿಸುವಲ್ಲಿ ಯಶಸ್ವಿಯಾಗಿದ್ದರು.

ಇದನ್ನೂ ಓದಿ : ಬಾಂಗ್ಲಾ ವಿಮೋಚನಾ ಯುದ್ಧದಲ್ಲಿ ಹೋರಾಡಿದ್ದ ಕನ್ನಡದ ಕುವರ.. ವೀರ ಪುತ್ರನಿಗೆ ನಮಿಸಿದ ಬಾಂಗ್ಲಾ ಸರ್ಕಾರ

ಹಿಮಾಂಶು ಮೋಹನ್ ಚೌಧರಿ ಅವರು ತ್ರಿಪುರಾದ ರಾಜಧಾನಿ ಅಗರ್ತಲಾದಲ್ಲಿ ನೆಲೆಸಿದ್ದರು. ಅವರ ತಂದೆ ಸೊರೋಶಿ ಮೋಹನ್ ಚೌಧರಿ ಅಗರ್ತಲಾದಲ್ಲಿ ಪ್ರತಿಷ್ಠಿತ ವೈದ್ಯರಾಗಿದ್ದರು. ಚೌಧರಿ ಅವರು ಬ್ರಾಹ್ಮಣ ಮೂಲದ ಪೂರ್ವ ಬಂಗಾಳಿ ಪರಂಪರೆಯ ಅವಿಭಕ್ತ ಕುಟುಂಬದಲ್ಲಿ ಬೆಳೆದವರು. 1972 ರಲ್ಲಿ ಕೇಂದ್ರ ಸರ್ಕಾರವು ಅವರಿಗೆ ದೇಶದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ನೀಡಿ ಗೌರವಿಸಿತು. ಹಾಗೆಯೇ ಬಾಂಗ್ಲಾದೇಶ ಸರ್ಕಾರವು ಅವರ ಕೊಡುಗೆಯನ್ನು ಶ್ಲಾಘಿಸಿ 2013 ರಲ್ಲಿ 'ಫ್ರೆಂಡ್ ಆಫ್ ಬಾಂಗ್ಲಾದೇಶ' ಪದಕವನ್ನು ನೀಡಿ ಗೌರವಿಸಿದೆ.

ಇದನ್ನೂ ಓದಿ : ಬಾಂಗ್ಲಾದೇಶವು ನಿಜವಾದ ಸ್ನೇಹಿತನನ್ನು ಕಳೆದುಕೊಂಡಿದೆ : ಪ್ರಣಬ್​ ನಿಧನಕ್ಕೆ ಶೇಖ್ ಹಸೀನಾ ಸಂತಾಪ

ಬಾಂಗ್ಲಾದೇಶ ವಿಮೋಚನಾ ಯುದ್ಧದ ಸಮಯದಲ್ಲಿ ಅಂದಿನ ಪ್ರಧಾನಿ ತಾಜುದ್ದೀನ್ ಅಹ್ಮದ್ ಅವರ ಕುಟುಂಬವು ಸೋನಾಮೂರದಲ್ಲಿರುವ ಚೌಧರಿ ಅಧಿಕೃತ ನಿವಾಸದಲ್ಲಿ ಆಶ್ರಯ ಪಡೆದಿತ್ತು. ಈ ಹಿನ್ನೆಲೆ ಈಗ ಬಾಂಗ್ಲಾದೇಶದ ಸಂಸದರಾಗಿರುವ ಅಹ್ಮದ್ ಅವರ ಪುತ್ರಿ ಸೆಮಿನ್ ಹೊಸೈನ್ ರಿಮಿ ಅವರು ಡಿಸೆಂಬರ್ 2021 ರಲ್ಲಿ ಚೌಧರಿ ಅವರನ್ನು ಭೇಟಿಯಾಗಿ ಅವರ ಕುಟುಂಬಕ್ಕೆ ಆಶ್ರಯ ಒದಗಿಸಿದ್ದಕ್ಕಾಗಿ ಧನ್ಯವಾದ ಹೇಳಿದ್ದರು.

ಇನ್ನು ಹಿಮಾಂಶು ನಿಧನಕ್ಕೆ ತ್ರಿಪುರ ಮುಖ್ಯಮಂತ್ರಿ ಮಾಣಿಕ್ ಸಹಾ ಸಂತಾಪ ಸೂಚಿಸಿದ್ದಾರೆ. ಟ್ವೀಟ್​ ಮಾಡಿರುವ ಅವರು, " ತ್ರಿಪುರಾದ ಮೊದಲ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಹಿಮಾಂಶು ಮೋಹನ್ ಚೌಧರಿ ಅವರು ನಿಧನರಾದ ಸುದ್ದಿ ತಿಳಿದು ತೀವ್ರ ದುಃಖವಾಗಿದೆ, ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ. ಓಂ ಶಾಂತಿ " ಎಂದು ಕಂಬನಿ ಮಿಡಿದಿದ್ದಾರೆ.

ಇದನ್ನೂ ಓದಿ : ಇಂದಿರಾಗೆ ಬಾಂಗ್ಲಾ​ ವಿಭಜನೆ ಕ್ರೆಡಿಟ್​​​ ಒಕೆ, ಏರ್​ಸ್ಟ್ರೈಕ್​​​ ಕ್ರೆಡಿಟ್​​​​​​ ಮೋದಿಗೇಕಿಲ್ಲ : ರಾಜನಾಥ್​​ ಸಿಂಗ್​​​​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.