ETV Bharat / bharat

ಕಾರು ಅಪಘಾತ: ತ್ರಿಪುರಾ ಮಾಜಿ ಸಿಎಂ, ರಾಜ್ಯಸಭಾ ಸದಸ್ಯ ಪಾರು - ರಾಜ್ಯಸಭಾ ಸಂಸದ ಬಿಪ್ಲಬ್ ದೇಬ್

ತ್ರಿಪುರಾದ ಮಾಜಿ ಮುಖ್ಯಮಂತ್ರಿಯ ಕಾರು ಅಪಘಾತಕ್ಕೀಡಾಗಿದೆ. ಮಾಜಿ ಮುಖ್ಯಮಂತ್ರಿ ಮತ್ತು ಸದ್ಯ ಸಂಸದರಾಗಿರುವ ಬಿಪ್ಲಬ್ ದೇಬ್ ಅವರು ಅಪಘಾತದಲ್ಲಿ ಯಾವುದೇ ಗಾಯವಿಲ್ಲದೆ ಪಾರಾಗಿದ್ದಾರೆ.

ತ್ರಿಪುರಾ ಮಾಜಿ ಸಿಎಂ ಕಾರು ಅಪಘಾತ: ಅಪಾಯವಿಲ್ಲದೆ ಪಾರು

author img

By

Published : Feb 20, 2023, 7:28 PM IST

ನವದೆಹಲಿ : ತ್ರಿಪುರಾದ ಮಾಜಿ ಮುಖ್ಯಮಂತ್ರಿ ಹಾಗೂ ರಾಜ್ಯಸಭಾ ಸಂಸದ ಬಿಪ್ಲಬ್ ದೇಬ್ ಅವರ ಕಾರು ಹರಿಯಾಣದ ಪಾಣಿಪತ್‌ನ ಜಿಟಿ ರಸ್ತೆಯಲ್ಲಿ ಸೋಮವಾರ ಅಪಘಾತಕ್ಕೀಡಾಗಿದೆ. ಸಂಸದರು ಯಾವುದೇ ಗಾಯಗಳಿಲ್ಲದೆ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ. ಬಿಪ್ಲಬ್ ದೇಬ್ ಅವರ ಕಾರು ಅಪಘಾತಕ್ಕೀಡಾಗಿರುವುದನ್ನು ಅವರ ಕಚೇರಿಯು ದೃಢಪಡಿಸಿದೆ. ಹರಿಯಾಣದ ಬಿಜೆಪಿ ರಾಜ್ಯ ಉಸ್ತುವಾರಿಯೂ ಆಗಿರುವ ದೇಬ್ ಅವರು ದೆಹಲಿಯಿಂದ ಚಂಡೀಗಢಕ್ಕೆ ಹೋಗುತ್ತಿದ್ದಾಗ ಸಮ್ಲಾಖಾ ಮತ್ತು ಪಾಣಿಪತ್ ನಡುವಿನ ಜಿಟಿ ರಸ್ತೆಯಲ್ಲಿ ನಿಂತಿದ್ದ ವಾಹನಕ್ಕೆ ಕಾರು ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  • Former Tripura CM and Rajya Sabha MP Biplab Deb had a narrow escape after his car met with an accident on GT Road in Haryana's Panipat today: Office of Biplab Deb pic.twitter.com/c7FElT0cdi

    — ANI (@ANI) February 20, 2023 " class="align-text-top noRightClick twitterSection" data=" ">

ಅಪಘಾತ ಘಟನೆಯ ಬಗ್ಗೆ ಮಾಹಿತಿ ನೀಡಿದ ಉಪ ಪೊಲೀಸ್ ವರಿಷ್ಠಾಧಿಕಾರಿ (ಸಮಲಖಾ) ಓಂ ಪ್ರಕಾಶ್, ಅಪಘಾತದಲ್ಲಿ ಯಾರಿಗೂ ಗಾಯಗಳಾಗಿಲ್ಲ. ಟೈರ್ ಪಂಕ್ಚರ್ ಆದ ನಂತರ ಕಾರೊಂದು ಜಿಟಿ ರಸ್ತೆಯಲ್ಲಿ ನಿಂತಿತ್ತು. ಹಿಂದಿನಿಂದ ಬಂದ ದೇಬ್ ಅವರ ವಾಹನವು ನಿಂತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ ಎಂದು ಹೇಳಿದರು.

ತ್ರಿಪುರಾ ಮಾಜಿ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇಬ್ ಅವರು ಸೆಪ್ಟೆಂಬರ್ 2022 ರಲ್ಲಿ ಉಪಚುನಾವಣೆ ನಡೆದ ರಾಜ್ಯದ ಏಕೈಕ ಸ್ಥಾನದಿಂದ ರಾಜ್ಯಸಭೆಗೆ ಚುನಾಯಿತರಾದರು. ಭಾರತೀಯ ಜನತಾ ಪಕ್ಷಕ್ಕೆ ಈ ಗೆಲುವು ನಿರೀಕ್ಷಿತವಾಗಿತ್ತು. ದೇಬ್ 43 ಮತಗಳನ್ನು ಪಡೆದು ಸಿಪಿಎಂ ಅಭ್ಯರ್ಥಿ ಮತ್ತು ಮಾಜಿ ಹಣಕಾಸು ಸಚಿವ ಭಾನುಲಾಲ್ ಸಹಾ ಅವರನ್ನು ಸೋಲಿಸಿದ್ದರು. ಸಿಪಿಎಂ ಅಭ್ಯರ್ಥಿ ಕೇವಲ 15 ಮತಗಳನ್ನು ಪಡೆದಿದ್ದರು.

60 ಸದಸ್ಯರ ವಿಧಾನಸಭೆಯಲ್ಲಿ ಬಿಜೆಪಿ 36 ಸ್ಥಾನಗಳನ್ನು ಹೊಂದಿದೆ ಮತ್ತು ಅದರ ಮೈತ್ರಿಕೂಟದ ಪಾಲುದಾರ ಇಂಡಿಜಿನಸ್ ಪೀಪಲ್ಸ್ ಫ್ರಂಟ್ ಆಫ್ ತ್ರಿಪುರ (IPFT) ಏಳು ಸ್ಥಾನಗಳನ್ನು ಹೊಂದಿದೆ. ಸಿಪಿಎಂ ಕೇವಲ 15 ಸದಸ್ಯರನ್ನು ಮತ್ತು ಕಾಂಗ್ರೆಸ್ ಒಬ್ಬರನ್ನು ಹೊಂದಿದೆ. ವರದಿಗಳ ಪ್ರಕಾರ, ಏಕೈಕ ಕಾಂಗ್ರೆಸ್ ಶಾಸಕ ಮತ ಚಲಾಯಿಸಲಿಲ್ಲ.

ನನ್ನನ್ನು ರಾಜ್ಯಸಭಾ ಸಂಸದನಾಗಿ ಆಯ್ಕೆ ಮಾಡಿದ್ದಕ್ಕಾಗಿ ತ್ರಿಪುರಾದ ಬಿಜೆಪಿ ಮತ್ತು ಐಪಿಎಫ್‌ಟಿ ಶಾಸಕರಿಗೆ ಕೃತಜ್ಞತೆಗಳು. ರಾಜ್ಯಸಭೆಯಲ್ಲಿ ತ್ರಿಪುರವನ್ನು ಪ್ರತಿನಿಧಿಸಲು ನನಗೆ ಈ ಅವಕಾಶ ನೀಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗೆ ಕೃತಜ್ಞತೆಗಳು. ಮಾತಾ ತ್ರಿಪುರಸುಂದರಿಯ ಆಶೀರ್ವಾದದೊಂದಿಗೆ, ನನ್ನ ಕೊನೆಯ ಉಸಿರು ಇರುವವರೆಗೂ ತ್ರಿಪುರಾದ ಪ್ರೀತಿಯ ಜನರ ಸೇವೆಯನ್ನು ಮುಂದುವರಿಸುತ್ತೇನೆ ಎಂದು ದೇಬ್ ತಮ್ಮ ಟ್ವಿಟರ್‌ನಲ್ಲಿ ಬರೆದಿದ್ದರು.

ದೇಬ್ ಅವರ ಬದಲು ಮುಖ್ಯಮಂತ್ರಿ ಸ್ಥಾನಕ್ಕೇರಲು ಮಾಣಿಕ್ ಸಹಾ ರಾಜೀನಾಮೆ ನೀಡಿದ ನಂತರ ರಾಜ್ಯಸಭಾ ಸ್ಥಾನವು ತೆರವಾಗಿತ್ತು. ದೆಹಲಿಯಲ್ಲಿ 16 ವರ್ಷಗಳ ಕಾಲ ಕಳೆದ ನಂತರ, ದೇಬ್ 2015 ರಲ್ಲಿ ಬಿಜೆಪಿಯ ಮಹಾಜನಸಂಪರ್ಕ್ ಅಭಿಯಾನದ ಉಸ್ತುವಾರಿಯಾಗಿ ತ್ರಿಪುರಾಕ್ಕೆ ಮರಳಿದರು. ಒಂದು ವರ್ಷದ ನಂತರ, ಅವರು ರಾಜ್ಯ ಬಿಜೆಪಿ ಅಧ್ಯಕ್ಷರಾದರು ಮತ್ತು 2018 ರಲ್ಲಿ ಪ್ರಾದೇಶಿಕ ಸ್ಥಳೀಯ ರಾಜಕೀಯ ಪಕ್ಷವಾದ ಐಪಿಎಫ್‌ಟಿಯೊಂದಿಗೆ ಮೈತ್ರಿ ಮಾಡಿಕೊಂಡು ಅವರ ಪಕ್ಷವು ಮೊದಲ ಬಾರಿಗೆ ಅಧಿಕಾರಕ್ಕೆ ಬಂದ ನಂತರ ಸಿಎಂ ಆದರು.

ಇದನ್ನೂ ಓದಿ: ತ್ರಿಪುರಾ ಚುನಾವಣೆ: ಶೇ 75 ರಷ್ಟು ಮತದಾನ, ಮಾ.2 ರಂದು ಫಲಿತಾಂಶ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.